More

    ಎಲ್​ಪಿಜಿ ಬೆಲೆ ಏರಿಕೆ: ಜನರ ಮೇಲಿನ ಆರ್ಥಿಕ ಹೊರೆ ಇಳಿಸಲು ಎನ್​ಡಿಎ ಮಿತ್ರ ಪಕ್ಷದಿಂದ ಒತ್ತಾಯ

    ನವದೆಹಲಿ: ಪೆಟ್ರೋಲಿಯಂ ಕಂಪನಿಗಳು ಏರಿಸುತ್ತಿರುವ ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು ಇಳಿಸುವಂತೆ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿ ಪಕ್ಷ ಜನತಾ ದಳ ಒಕ್ಕೂಟ (ಜೆಡಿಯು) ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದು, ಕರೊನಾ ಸಂಕಷ್ಟದ ನಡುವೆ ಜನರ ಮೇಲಿನ ಆರ್ಥಿಕ ಹೊರೆಯು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಿರುಗುಬಾಣವಾಗಲಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮುಂಬರುವ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಲಾಭ ಮಾಡಿಕೊಳ್ಳಲಿವೆ ಎಂದು ಎಚ್ಚರಿಸಿದೆ.

    ಪೆಟ್ರೋಲಿಯಂ ಕಂಪನಿಗಳು ಇಂದು ಮತ್ತೆ ಎಲ್​ಪಿಜಿ ಬೆಲೆಯನ್ನು 25 ರೂಪಾಯಿ ಏರಿಸಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆಯಾಗಿದ್ದು, ಜನರಿಗೆ ಭಾರಿ ಹೊರೆಯಾಗಲಿದೆ. ಆಗಸ್ಟ್​ 18 ರಲ್ಲಿ 25 ರೂ. ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆ ಮಾಡಲಾಗಿದೆ.

    ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಅನಿರೀಕ್ಷಿತವಾಗಿದೆ. ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಇಂದು ಎಲ್ಲಿ ಮುಟ್ಟಿದೆ ನೋಡಿ…ಅಡುಗೆ ಬಜೆಟ್​ ಸ್ಥಿತಿ ಕೆಟ್ಟದಾಗಿದೆ. ನಿಜಕ್ಕೂ ಇದು ಚಿಂತಿಸುವ ವಿಚಾರವಾಗಿದೆ ಎಂದು ಜೆಡಿಯು ಮುಖ್ಯ ಪ್ರಧಾನ ಕಾರ್ಯದರ್ಶಿ ಕೆಸಿ ತ್ಯಾಗಿ ಕಳವಳ ವ್ಯಕ್ತಪಡಿಸಿದರು.

    ಇತ್ತೀಚೆಗೆ ಹೆಚ್ಚು ಮಾಡಿರುವ ಬೆಲೆಯನ್ನು ತಗ್ಗಿಸುವಂತೆ ಮೈತ್ರಿ ಪಕ್ಷವಾಗಿ ಸರ್ಕಾರಕ್ಕೆ ಸಲಹೆ ನೀಡುತ್ತೇನೆ. ಮುಂಬರುವ ತಿಂಗಳಲ್ಲಿ ಅನೇಕ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ನಮ್ಮ ಪ್ರತಿಪಕ್ಷದ ನಾಯಕರು ಪ್ರಸ್ತುತ ಸ್ಥಿತಿಯನ್ನು ಅಸ್ತ್ರವಾಗಿ ಮಾಡಿಕೊಂಡು ನಮ್ಮ ವಿರುದ್ಧ ಚುನಾವಣೆಗೆ ಇಳಿಯುವುದರಿಂದ ನಮಗೆ ಭಾರಿ ನಷ್ಟವಾಗಲಿದೆ ಎಂದು ಕೆಸಿ ತ್ಯಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಮುಂದಿನ ಕೆಲವೇ ತಿಂಗಳಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್​ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಎಲ್​ಪಿಜಿ ಮಾತ್ರವಲ್ಲ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲೂ ಏರಿಕೆಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಇಲ್ಲವಾದಲ್ಲಿ ಇದರ ಬೆಲೆಯನ್ನು ಮುಂದಿನ ದಿನಗಳಲ್ಲಿ ತೆರಬೇಕಾಗುತ್ತದೆ. ಕರೊನಾ ಸಂದರ್ಭದಲ್ಲಿ ಜನರ ಮೇಲಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡದಿದ್ದಲ್ಲಿ ಪಕ್ಷಕ್ಕೆ ಹೊಡೆತ ಖಂಡಿತವಾಗಿ ಬೀಳಲಿದೆ ಎಂದು ಕೆಸಿ ತ್ಯಾಗಿ ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಆಫ್ಘಾನ್-ಆಸಿಸ್​ ಟೆಸ್ಟ್​ ಪಂದ್ಯಕ್ಕೆ ಹಸಿರು ನಿಶಾನೆ: ಕ್ರಿಕೆಟ್​ ವಿಚಾರದಲ್ಲಿ ಹಸ್ತಕ್ಷೇಪ ಇಲ್ಲವೆಂದ ತಾಲಿಬಾನ್!

    PHOTOS| ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಪುತ್ರಿ ಅರ್ಪಿತಾ-ಹೃಷಿಕೇಶ ಮದುವೆಯಲ್ಲಿ ಗಣ್ಯರ ದಂಡು

    ಸಬ್ ಇನ್ಸ್​ಪೆಕ್ಟರ್​ ನೇಮಕಾತಿ ಲಿಖಿತ ಪರೀಕ್ಷೆ ಮುಂದೂಡಿಕೆ: ಸೆ.26ರ ಬದಲಿಗೆ ಅ.3ಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts