More

    ಹಿಮಾಚಲ ಪ್ರದೇಶಲ್ಲಿ ದಿಢೀರ್​ ಸುರಿಯುತ್ತಿರುವ ಧಾರಾಕಾರ ಮಳೆ: ಭೀಕರ ಪ್ರವಾಹ, ಕುಸಿದು ಬಿದ್ದ ರೈಲ್ವೆ ಸೇತುವೆ

    ಕಂಗ್ರಾ: ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾಂಗ್ರಾ ಜಿಲ್ಲೆಯಲ್ಲಿರುವ ಛಕ್ಕಿ ಸೇತುವೆಯ ಮೂರು ಪಿಲ್ಲರ್​ಗಳಲ್ಲಿ ಒಂದು ಪಿಲ್ಲರ್​ಗೆ ಹಾನಿಯುಂಟಾದ ಪರಿಣಾಮ ಸೇತುವೆ ಕುಸಿದುಬಿದ್ದಿದೆ.

    ಛಕ್ಕಿ ನದಿಗೆ ಅಡ್ಡಲಾಗಿ ಕಟ್ಟಿರುವ ರೈಲ್ವೆ ಸೇತುವೆ ಇದಾಗಿದ್ದು, ತಡರಾತ್ರಿಯಿಂದ ದಿಢೀರನೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸೇತುವೆಯ ಪಿಲ್ಲರ್​ಗೆ ಹಾನಿಯಾಗಿ ಕುಸಿದುಬಿದ್ದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇಂದು ಧರ್ಮಶಾಲಾದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಭೂಕುಸಿತಗಳು ಉಂಟಾಗಿದೆ. ರಾಜ್ಯದ ಮಂಡಿ ಜಿಲ್ಲೆಯಲ್ಲಿ ಇಂದು ಮುಂಜಾನೆ ಹಠಾತ್ ಪ್ರವಾಹ ಸಂಭವಿಸಿದ್ದು, ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ. ಅಲ್ಲಿನ ನಿವಾಸಿಗಳು ಪ್ರವಾಹದ ನಡುವೆ ಸಿಲುಕಿಕೊಂಡಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯಾಗಿದೆ. ಮೇಘಸ್ಫೋಟವು ಮಂಡಿ ಜಿಲ್ಲೆಯ ಬಾಲ್, ಸದರ್, ಥುನಾಗ್, ಮಂಡಿ ಮತ್ತು ಲಮಾಥಾಚ್‌ನಲ್ಲಿನ ಸ್ಥಳಗಳ ಮೇಲೆ ಪರಿಣಾಮ ಬೀರಿದೆ.

    ಭಾರೀ ಮಳೆಯಿಂದಾಗಿ ಕಂಗ್ರಾ, ಕುಲು ಮತ್ತು ಮಂಡಿ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಹಿಮಾಚಲ ಪ್ರದೇಶದ ಕಾಂಗ್ರಾ, ಚಂಬಾ, ಬಿಲಾಸ್‌ಪುರ್, ಸಿರ್ಮೌರ್ ಮತ್ತು ಮಂಡಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನದಿಗಳು ಮತ್ತು ತೊರೆಗಳ ಬಳಿ ಹೋಗುವುದನ್ನು ತಪ್ಪಿಸಲು ಸ್ಥಳೀಯರು ಮತ್ತು ಪ್ರವಾಸಿಗರಿಗೆ ಸರ್ಕಾರ ಸೂಚನೆ ನೀಡಿದೆ.

    ರಾಜ್ಯದಲ್ಲಿ ಆಗಸ್ಟ್ 25 ರವರೆಗೆ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಇಲಾಖೆಯು ಭೂಕುಸಿತದ ಎಚ್ಚರಿಕೆಯನ್ನು ನೀಡಿದೆ. (ಏಜೆನ್ಸೀಸ್​)

    ರೈತನ ಭಾವನೆಗೆ ಸ್ಪಂದಿಸಿ 1.5 ಕೋಟಿ ರೂ. ಮೌಲ್ಯದ ಮನೆಯನ್ನು 500 ಅಡಿ ದೂರಕ್ಕೆ ಜರುಗಿಸುತ್ತಿದೆ ಸರ್ಕಾರ!

    ಸಚಿವ ಮಾಧುಸ್ವಾಮಿ ಆಡಿಯೋ ವೈರಲ್​ ಬೆನ್ನಲ್ಲೇ ಹೊಸದೊಂದು ಬಾಂಬ್ ಸಿಡಿಸಿದ ಕೆ.ಎನ್.ರಾಜಣ್ಣ

    ಡೆಹ್ರಾಡೂನ್​​ನಲ್ಲಿ ಮೇಘಸ್ಫೋಟ: ಸ್ಥಳಕ್ಕೆ ವಿಪತ್ತು ನಿರ್ವಹಣಾ ಪಡೆ ದೌಡು, ರಕ್ಷಣಾ ಕಾರ್ಯಾಚರಣೆ ಜೋರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts