More

    ರಸ್ತೆಯಲ್ಲೇ ಮಹಿಳೆಯ ಮೇಲೆರಗಿದ ಯುವಕ: ಸಿಸಿಟಿವಿಯಲ್ಲಿ ಕಾಮಾಂಧನ ಅಸಹ್ಯ ವರ್ತನೆ ಸೆರೆ!

    ನ್ಯೂಯಾರ್ಕ್​: ಪಾದಾಚಾರಿ ಮಾರ್ಗದಲ್ಲಿ ಸಾಗುತ್ತಿದ್ದ ಮಹಿಳೆಯ ಮೇಲೆ ಹಿಂದಿನಿಂದ ದಾಳಿ ಮಾಡಿದ ಕಾಮುಕನೊಬ್ಬ ಆಕೆಯನ್ನು ನೆಲಕ್ಕುರುಳಿಸಿ ಲೈಂಗಿಕ ದೌರ್ಜನ್ಯ ಎಸಗಿ ಪರಾರಿ ಆಗಿರುವ ಘಟನೆ ಅಮೆರಿಕದ ಬ್ರೂಕ್ಲಿನ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

    ಈ ದಾಳಿಯು ಸೋಮವಾರ ರಾತ್ರಿ 8.10ರ ಸುಮಾರಿಗೆ ಬ್ರೂಕ್ಲಿನ್​ನ ಟ್ರೆಂಡಿ ವಿಲಿಯಮ್ಸ್​ಬರ್ಗ್​ನಲ್ಲಿ ನಡೆದಿದೆ. 35 ವರ್ಷದ ಸಂತ್ರಸ್ತೆ ರಾತ್ರಿ ವಾಕಿಂಗ್​ಗೆ ತೆರಳಿದ್ದಳು. ಈ ವೇಳೆ ಆಕೆಯನ್ನು ಕಾಮುಕನೊಬ್ಬ ಹಿಂಬಾಲಿಸುತ್ತಿದ್ದ. ಆದರೆ, ಅದರ ಬಗ್ಗೆ ಆಕೆ ಗಮನ ಹರಿಸಿರಲಿಲ್ಲ.

    ಅಪರಿಚಿತನಾಗಿದ್ದರಿಂದ ಆತನ ಕಡೆ ಹೆಚ್ಚು ಗಮನಹರಿಸದೇ ಸಂತ್ರಸ್ತೆ ತನ್ನ ವಾಕಿಂಗ್​ ಮುಂದುವರಿಸಿದ್ದಳು. ಮಾರ್ಗನ್​ ಅವೆನ್ಯೂ ರಸ್ತೆಯಿಂದ ಸ್ಟ್ಯಾಗ್​ ಸ್ಟ್ರೀಟ್​ ಹೋಗುತ್ತಿದ್ದಳು. ನಿರಂತವಾಗಿ ಆಕೆಯನ್ನು ಫಾಲೋ ಮಾಡಿಕೊಂಡು ಬಂದ ಆಗಂತುಕ ಹಿಂದಿನಿಂದ ಓಡಿ ಬಂದು ಮಹಿಳೆಯ ಮೇಲೆ ಜಿಗಿದು ಆಕೆಯನ್ನು ಕೆಳಗೆ ಬೀಳಿಸಿದ.

    ಇದಾದ ಬಳಿಕ ಕಾಮುಕ ಮಹಿಳೆಯ ಶಾರ್ಟ್ಸ್​ ಅನ್ನು ಕೆಳಗೆ ಜಾರಿಸಿ, ಲೈಂಗಿಕ ಕಿರುಕುಳ ನೀಡಿ, ಅಲ್ಲಿಂದ ಪರಾರಿ ಆಗುತ್ತಾನೆ. ಇದಿಷ್ಟು ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆಯು ದೈಹಿಕವಾಗಿ ಗಾಯಗೊಂಡಿಲ್ಲ ಮತ್ತು ಆಕೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದಾಳೆ.

    ಆರೋಪಿಯನ್ನು 5 ಅಡಿ 5 ಇಂಚು ಎತ್ತರ ಮತ್ತು 165 ಪೌಂಡ್ ತೂಕದ, ಕಪ್ಪು ಕೂದಲಿ ವ್ಯಕ್ತಿ ಎಂದು ಗುರುತಿಸಲಾಗಿದೆ. ಆರೋಪಿ ಕೊನೆಯದಾಗಿ ಕಪ್ಪು ಟಿ-ಶರ್ಟ್, ಹಸಿರು ಕ್ಯಾಮೊ ಪ್ಯಾಂಟ್ ಮತ್ತು ಕಪ್ಪು ಸ್ನೀಕರ್ಸ್ ಧರಿಸಿ, ಗಲ್ಲದ ಸುತ್ತಲೂ ಕಪ್ಪು ಮುಖದ ಮುಖವಾಡವನ್ನು ಧರಿಸಿದ್ದನು.

    ಕಳೆದ ಹಲವಾರು ತಿಂಗಳುಗಳಿಂದ ನ್ಯೂಯಾರ್ಕ್ ನಗರಕ್ಕೆ ತಲೆನೋವಾಗಿರುವ ಅಪರಾಧ ಸಾಂಕ್ರಾಮಿಕದ ನಡುವೆಯೇ ಬ್ರೂಕ್ಲಿನ್‌ನಲ್ಲಿ ನಡೆದ ಈ ದಾಳಿಯಿಂದ ಮತ್ತಷ್ಟು ಆತಂಕ ಹೆಚ್ಚಾಗಿದೆ. 2021ರ ಆರಂಭದಿಂದ ಐದು ಪ್ರಾಂತ್ಯಗಳಲ್ಲಿ 2,200 ಕ್ಕೂ ಹೆಚ್ಚು ವೈಯಕ್ತಿಕ ಲೈಂಗಿಕ ಅಪರಾಧಗಳು ವರದಿಯಾಗಿವೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಡೈಲಿ ಮೇಲ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts