More

    ರೈಲ್ವೆ ಹಳಿ ಮೇಲೆ ಕುಳಿತು ಪಬ್​ಜಿ ಆಡುತ್ತಿದ್ದ ಯುವಕರಿಬ್ಬರಿಗೆ ರೈಲು ಡಿಕ್ಕಿ: ಸ್ಥಳದಲ್ಲಿ ದುರಂತ ಸಾವು

    ಜೈಪುರ: ದೇಶದ ಯುವಜನಾಂಗದಲ್ಲಿ ಪಬ್​ಜಿ ಕ್ರೇಜ್​ ಹೆಚ್ಚಾಗುತ್ತಿದೆ. ಈಗಾಗಲೇ ಪಬ್​ಜಿಯಿಂದ ಸಾಕಷ್ಟು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಸಾಕಷ್ಟು ಜನರು ಹಣವನ್ನು ಕಳೆದುಕೊಂಡಿದ್ದಾರೆ. ಕ್ರೌರ್ಯವನ್ನೇ ತುಂಬಿರುವ ಪಬ್​ಜಿಯಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ.

    ಇದೀಗ ಪಬ್​ಜಿಯಿಂದ ಮತ್ತೊಂದು ದುರಂತ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರೈಲ್ವೇ ಹಳಿ ಮೇಲೆ ಕುಳಿತು ಪಬ್​ಜಿ ಆಡುವಾಗ ರೈಲು ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಲೋಕೇಶ್​ ಮೀನಾ (22) ಮತ್ತು ರಾಹುಲ್​ (19) ಎಂದು ಗುರುತಿಸಲಾಗಿದೆ. ಈ ವಿಷಯ ತಿಳಿದು ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

    ಲೋಕೇಶ್ ಮತ್ತು ರಾಹುಲ್​ ಇಬ್ಬರು ಪಬ್​ಜಿ ಗೇಮ್​ಗೆ ದಾಸರಾಗಿದ್ದರು. ಪಾಲಕರು ಎಷ್ಟೇ ಹೇಳಿದರು ಇಬ್ಬರು ಮಾತ್ರ ಪಬ್​ಜಿ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡಿಕೊಂಡಿರಲಿಲ್ಲ. ಬದಲಾಗಿ ಸದಾ ಅದರಲ್ಲೇ ಮುಳುಗಿರುತ್ತಿದ್ದರು. ಇದೀಗ ಅದೇ ಪಬ್​ಜಿಯಿಂದಾಗಿ ಇಬ್ಬರು ದುರಂತ ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts