ದಿಯಾ ಸಿನಿಮಾ ಖ್ಯಾತಿಯ ಯುವನಟ ಪೃಥ್ವಿ ಅಂಬಾರ್​ಗೆ ಮಾತೃ ವಿಯೋಗ

Pruthvi ambara
Published on

ಬೆಂಗಳೂರು: ಕನ್ನಡ ಚಿತ್ರರಂಗದ ಭರವಸೆಯ ಯುವ ನಟ ಹಾಗೂ ದಿಯಾ ಸಿನಿಮಾ ಖ್ಯಾತಿ ಪೃಥ್ವಿ ಅಂಬಾರ್​ ಅವರಿಗೆ ಮಾತೃ ವಿಯೋಗವಾಗಿದೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಜಾತ ವೀರಪ್ಪ ಅಂಬಾರ್​ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ (ಜುಲೈ 15) ರಾತ್ರಿ ವಿಧಿವಶರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಕಾಸರಗೋಡಿನ ಉಪ್ಪಳ ಸಮೀಪದ ಐಲದಲ್ಲಿ ನಡೆಯಲಿದೆ.

ಸುಜಾತ ಅವರ ಪತಿ ವೀರಪ್ಪ ಅಂಬಾರ್​ ಸಂಘ ಪರಿವಾರದ ಹಿರಿಯ ಮುಖಂಡರಲ್ಲಿ ಒಬ್ಬರು. ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತ ಅವರು ಸಾಮಾಜಿಕ ಸೇವೆಯಲ್ಲೂ ತೊಡಗಿಕೊಂಡಿದ್ದರು. ಇದೀಗ ಸುಜಾತ ಅವರನ್ನು ಕಳೆದುಕೊಂಡ ಪೃಥ್ವಿ ಅಂಬರ್​ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ದಿಯಾ ಸಿನಿಮಾ ಮೂಲಕ ಭರವಸೆಯ ನಾಯಕ ನಟನಾಗಿ ಪೃಥ್ವಿ ಅಂಬಾರ್​ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಬೈರಾಗಿ ಮತ್ತು ಶುಗರ್​ಲೆಸ್​ ಸಿನಿಮಾ ಬಿಡುಗಡೆಯಾಗಿದೆ. ಸಾಲು ಸಾಲು ಚಿತ್ರಗಳಲ್ಲಿ ಪೃಥ್ವಿ ನಟಿಸುತ್ತಿದ್ದಾರೆ. ಇದೀಗ ತಾಯಿಯನ್ನು ಕಳೆದುಕೊಂಡಿರುವ ಪೃಥ್ವಿ ಅಂಬಾರ್​ ದುಃಖ ಸಾಗರದಲ್ಲಿ ಮುಳುಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net