More

    ರಾಜ್ಯ ನಕ್ಷೆಯಿಂದ ಕಲ್ಯಾಣ ಕರ್ನಾಟಕವನ್ನು ಅಳಿಸಲಾಗಿದೆಯೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಬೆಂಗಳೂರು: ಭಾರೀ ಮಳೆಯಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿದ್ದು, ಜನರು ಮೂಲಭೂತ ಸೌಕರ್ಯಗಳಿಲ್ಲದೇ ಹೈರಾಣರಾಗಿದ್ದಾರೆ. ಆದರೂ ಕಲ್ಯಾಣ ಕರ್ನಾಟಕದ ಬಿಜೆಪಿ ಶಾಸಕರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

    ‘ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕರ್ನಾಟಕದ ನಕ್ಷೆಯಿಂದ ಅಳಿಸಿ ಹಾಕಿದಿಯೇ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

    ಮಳೆ ಹಣಿಗೆಯಾಗಿರುವ ರಾಜ್ಯದ ಎಲ್ಲ ಭಾಗಗಳ ರೈತರಿಗೆ ಪರಿಹಾರ ಧನ ನೀಡುವ ರಾಜ್ಯ ಸರ್ಕಾರ ಕೇವಲ ಕಲ್ಯಾಣ ಕರ್ನಾಟಕದ ಜನರನ್ನು ಮರೆತಿರುವುದೇಕೆ? ಆ ಭಾಗಗಳಲ್ಲಿಯೂ ಭಾರಿ ಮಳೆಯಾಗುತ್ತಿದ್ದು ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ರಸ್ತೆಗಳು ಮತ್ತು ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ’ ಎಂದು ಕೂ ಮಾಡಿದ್ದಾರೆ.

    ‘ಇಷ್ಟೆಲ್ಲ ಅನಾನುಕೂಲ ಆಗಿದ್ದರೂ ಈ ಭಾಗದ ಜನರಿಗೆ ಒಂದು ರೂಪಾಯಿ ಸಹ ಅನುದಾನ ನೀಡಿಲ್ಲ. ಇದೆಲ್ಲವನ್ನು ಕಂಡೂ ಈ ಭಾಗದ ಬಿಜೆಪಿ ಶಾಸಕರು ಮೂಕ ಪ್ರೇಕ್ಷಕರಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.

    ಸರ್ಕಾರ ಈಗ 21 ಜಿಲ್ಲೆಗಳಿಗೆ ರಾಜ್ಯ ವಿಪತ್ತು ನಿಧಿ ಅಡಿಯಲ್ಲಿ ಒಟ್ಟು 200 ಕೋಟಿ ಪರಿಹಾರ ಅನುದಾನ ಪ್ರಕಟಿಸಿದೆ.

    ರಾಜ್ಯ ನಕ್ಷೆಯಿಂದ ಕಲ್ಯಾಣ ಕರ್ನಾಟಕವನ್ನು ಅಳಿಸಲಾಗಿದೆಯೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಬಿಹಾರ ಸಿಎಂ: ಎನ್​ಡಿಎಗೆ ನಿತೀಶ್​ ವಿದಾಯ ಬಹುತೇಕ ಖಚಿತ

    ಮಸೀದಿಯೊಳಗೆ ವಧು ಎಂಟ್ರಿ: ತನ್ನ ಮದುವೆಗೆ ತಾನೇ ಬಂದು ಇತಿಹಾಸ ಸೃಷ್ಟಿಸಿದ ಮದುಮಗಳು- ಪರ, ವಿರೋಧ ಚರ್ಚೆ

    ಸಾಧನೆ ಮಾಡ್ಬೇಕು ಅಂತ ಮನೆ ಬಿಟ್ಟು ಹೋಗಿ ಅಡ್ಡದಾರಿ ಹಿಡಿದಿದ್ದ ಮಾರಿಮುತ್ತು ಮೊಮ್ಮಗಳ ಜೀವನ ಬದಲಾಗಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts