More

    ರಶ್ಮಿಕಾ ಹೆಸರನ್ನು ತಪ್ಪಾಗಿ ಬರೆದು ಅಮೆಜಾನ್​ ಪ್ರೈಮ್​ ಎಡವಟ್ಟು: ಅಭಿಮಾನಿಗಳ ಸಿಟ್ಟು

    ಹೈದರಾಬಾದ್​: ಕಳೆದ ಡಿಸೆಂಬರ್​ 17ರಂದು ಬಿಡುಗಡೆಯಾದ ನಟ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ-1 ಚಿತ್ರ, ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದು, ಈಗಲೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

    ಇನ್ನೊಂದೆಡೆ ಪುಷ್ಪ ಚಿತ್ರವನ್ನು ಅಮೆಜಾನ್​ ಪ್ರೈಮ್ ನಿನ್ನೆ ರಾತ್ರಿ ಬಿಡುಗಡೆ ಮಾಡಿದೆ. ಕನ್ನಡ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆದರೆ, ಇದೀಗ ಅಮೆಜಾನ್​ ಪ್ರೈಮ್​ನಲ್ಲಿ ರಶ್ಮಿಕಾ ಹೆಸರಲ್ಲಿ ಇಂದು ಮಿಸ್ಟೇಕ್​ ಆಗಿ ಹೋಗಿದ್ದು, ಆ ಮಿಸ್ಟೇಕ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಸಿನಿಮಾದ ಟೈಟಲ್​ ಕಾರ್ಡ್​ನಲ್ಲಿ ರಶ್ಮಿಕಾ ಹೆಸರನ್ನು ರಶ್ಮಿಕಾ ಮಡೋನಾ ಎಂದು ಬರೆದು ಎಟವಟ್ಟು ಮಾಡಿದ್ದಾರೆ. ಮಂದಣ್ಣ ಹೆಸರನ್ನು ಗೊಂದಲ ಮಾಡಿಕೊಂಡು ಮಡೋನಾ ಎಂದು ಬರೆದಿದ್ದಾರೆ. ಇದು ನೆಟ್ಟಿಗರ ಗಮನಕ್ಕೆ ಬಂದಿದ್ದು, ಅದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ರಶ್ಮಿಕಾ ಹೆಸರನ್ನು ತಪ್ಪಾಗಿ ಬರೆದು ಅಮೆಜಾನ್​ ಪ್ರೈಮ್​ ಎಡವಟ್ಟು: ಅಭಿಮಾನಿಗಳ ಸಿಟ್ಟು

    ಪುಷ್ಪ ಚಿತ್ರವನ್ನು ಸುಕುಮಾರ್​ ನಿರ್ದೇಶನ ಮಾಡಿದ್ದಾರೆ. ರಕ್ತ ಚಂದನ ಕಳ್ಳಸಾಗಾಣೆ ಮೇಲೆ ಇಡೀ ಕತೆ ಸಾಗುತ್ತದೆ. ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್​ ನಿರ್ಮಾಣ ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts