More

    ಪೊನಿ ವರ್ಮಾ ಜತೆ ಪ್ರಕಾಶ್​ ರಾಜ್​ ಮರುಮದುವೆ! ಎಲ್ಲದಕ್ಕೂ ಕಾರಣ ಮಗ ಎಂದ ಬಹುಭಾಷಾ ನಟ

    ಚೆನ್ನೈ: ಬಹುಭಾಷಾ ನಟ ಪ್ರಕಾಶ್​ ರಾಜ್​ ಅವರು ಪತ್ನಿ ಪೊನಿ ವರ್ಮಾ ಜತೆಯಲ್ಲಿ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ತಾರಾ ದಂಪತಿ ತಮ್ಮ ಮಗನ ಕೋರಿಕೆಯನ್ನು ಸಹ ಈಡೇರಿಸಿದ್ದಾರೆ.

    ಇಬ್ಬರ ಮದುವೆ ನೋಡಬೇಕೆಂಬ ಮಗ ವೇದಾಂತ್​ ಆಸೆಯನ್ನು ನೆರವೇರಿಸಿರುವ ಪ್ರಕಾಶ್​ ರಾಜ್, ಮತ್ತೊಮ್ಮೆ ಪೊನಿ ವರ್ಮಾರನ್ನು ಮರುಮದುವೆ ಆಗಿದ್ದಾರೆ. ಆಗಸ್ಟ್​ 24ರ ರಾತ್ರಿ ಇಬ್ಬರ ಮರುಮದುವೆ ಮಗನ ಮುಂದೆಯೇ ಸರಳವಾಗಿ ನಡೆದಿದೆ. ಇದನ್ನು ನೋಡಿ ಮಗ ವೇದಾಂತ್​ ತುಂಬಾ ಖುಷಿಯಾಗಿದ್ದಾಗಿ ಪ್ರಕಾಶ್​ ರಾಜ್​ ಹೇಳಿಕೊಂಡಿದ್ದಾರೆ. ​

    ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಕಾಶ್​ ರಾಜ್​, ಇಂದು ರಾತ್ರಿ ನಾವಿಬ್ಬರು ಮತ್ತೆ ಮದುವೆಯಾದೆವು. ನಮ್ಮ ಮದುವೆಯಲ್ಲಿ ಸಾಕ್ಷಿಯಾಗಬೇಕೆಂದು ನನ್ನ ಮಗ ವೇದಾಂತ್​ ಬಯಸಿದ್ದರಿಂದ ಆತನ ಬಯಕೆ ತೀರಿಸಲು ಮತ್ತೆ ಮದುವೆ ಆದೆವು. ಇದೊಂದು ಆನಂದ ತುಂಬಿದ ಕೌಟುಂಬಿಕ ಕ್ಷಣಗಳಾಗಿತ್ತು ಎಂದಿದ್ದಾರೆ.

    ಇದೇ ಸಂದರ್ಭದಲ್ಲಿ ಪ್ರಕಾಶ್​ ರಾಜ್​ ಅವರು ಮಂಡಿಯೂರಿ ಪೊನಿ ವರ್ಮಾ ಅವರಿಗೆ ಉಂಗುರ ತೊಡಿಸಿದರು. ಉಂಗುರ ಬದಲಾಯಿಸಿಕೊಂಡ ಬಳಿಕ ಇಬ್ಬರು ಮಗನ ಮುಂದೆಯೇ ಪರಸ್ಪರ ಚುಂಬಿಸಿದರು.

    ಕೌಟುಂಬಿಕ ಕ್ಷಣದಲ್ಲಿ ವೇದಾಂತ್​ ಮಾತ್ರವಲ್ಲದೆ, ಪ್ರಕಾಶ್​ ರಾಜ್​ ಅವರ ಮೊದಲ ಪತ್ನಿ ಲಲಿತಾ ಕುಮಾರಿ ಮಕ್ಕಳಾದ ಮೇಘನಾ ಮತ್ತು ಪೂಜಾ ಕೂಡ ಉಪಸ್ಥಿತರಿದ್ದರು. 2009ರಲ್ಲಿ ಇಬ್ಬರು ಡಿವೋರ್ಸ್​ ಆಗಿದ್ದಾರೆ.

    ಅದ್ಭುತ ಸ್ನೇಹಿತೆಯಾದ್ದಕ್ಕಾಗಿ, ನನ್ನ ಜೀವನದಲ್ಲಿ ಒಬ್ಬ ಪ್ರೇಮಿ ಮತ್ತು ಉತ್ತಮ ಸಹ ಪ್ರಯಾಣಿಕಳಾಗಿರುವ ಪ್ರೀತಿಯ ಹೆಂಡತಿ ಧನ್ಯವಾದಗಳು ಎಂದು ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪೊನಿ ವರ್ಮಾ ಬಗ್ಗೆ ಪ್ರಕಾಶ್​ ರಾಜ್​ ಟ್ವೀಟ್​ ಮಾಡಿದ್ದಾರೆ. ಇದರ ಜತೆಗೆ ಆರಂಭದಲ್ಲಿ ಇಬ್ಬರು ಮದುವೆ ಆದ ಫೋಟೋವನ್ನು ಸಹ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಪ್ರಕಾಶ್​ ರಾಜ್​ ಅವರು ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಒರ್ಚಾ ಸಿನಿಮಾದ ಚಿತ್ರೀಕರಣಕ್ಕಾಗಿ ಮಧ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದಾರೆ. (ಏಜೆನ್ಸೀಸ್​)

    ಖ್ಯಾತ ತಮಿಳು ನಿರ್ದೇಶಕನಿಂದ ಅಭಿನಯ ಚಕ್ರವರ್ತಿಗೆ ಆ್ಯಕ್ಷನ್ ಕಟ್! ಕಿಚ್ಚನ ಕೈರುಚಿಗೆ ಫಿದಾ

    ಪ್ರೇಯಸಿ ಜತೆಗಿನ ಸಂಭೋಗದ ವೇಳೆ ಗುಪ್ತಾಂಗಕ್ಕೆ ಗಮ್​ ಅಂಟಿಸಿಕೊಂಡ ಪ್ರಿಯಕರ: ಮುಂದಾಗಿದ್ದು ದುರಂತ

    ಐಶ್ವರ್ಯಾ ಲುಕ್ ಸೋರಿಕೆ; ಪೊನ್ನಿಯನ್ ಸೇಲ್ವನ್​ನಲ್ಲಿ ಮಂದಾಕಿನಿ ದೇವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts