ಸಿನಿಮಾ ಕ್ಷೇತ್ರಕ್ಕೆ ಗುಡ್ ​ಬೈ ಹೇಳಿ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿಕೊಂಡ ಪ್ರಖ್ಯಾತ ಹಾಸ್ಯನಟ!

blank

ತಿರುವನಂತಪುರಂ: ಮಲಯಾಳಂನ ಪ್ರಖ್ಯಾತ ಹಾಸ್ಯನಟ ಉನ್ನಿರಾಜನ್​ ಅವರು ಸಿನಿಮಾ ಕ್ಷೇತ್ರಕ್ಕೆ ಗುಡ್​ ಬೈ ಹೇಳಿ ಕಾಸರಗೋಡಿನ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್​ನಲ್ಲಿ ಸೋಮವಾರ (ಮೇ.9) ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿದ್ದಾರೆ.

ಮಲಯಾಳಂನ ಪ್ರಸಿದ್ಧ ಧಾರಾವಾಹಿ ಮರಿಮಯಮ್​ ಮೂಲಕ ಕೇರಳದಲ್ಲಿ ಖ್ಯಾತಿ ಗಳಿಸಿರುವ ಉನ್ನಿರಾಜನ್​, ಕಿರುತೆರೆ ಹೊರತಾಗಿ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಫಾಹದ್ ಫಾಸಿಲ್ ಅಭಿನಯದ ‘ತೊಂಡಿಮುತಾಳಂ ದೃಕ್ಷಾಕ್ಷಿಯುಂ’ ಮತ್ತು ಇನ್ವೆಸ್ಟಿಗೇಷನ್ ಥ್ರಿಲ್ಲರ್ ‘ಆಪರೇಷನ್ ಜಾವಾ’ ಸಿನಿಮಾದಲ್ಲಿನ ಅವರ ಅಭಿನಯವು ಪ್ರೇಕ್ಷಕರ ಹೃದಯದಲ್ಲಿ ಇಂದಿಗೂ ಅಚ್ಚುಮೆಚ್ಚಿನದಾಗಿದೆ.

ತಮ್ಮ ನಟನಾ ಕೆಲಸದಿಂದ ಅಂದುಕೊಂಡಿದ್ದನ್ನು ಮಾಡಲು ಆಗುವುದಿಲ್ಲ ಎಂಬ ಮನವರಿಕೆಯ ಬಳಿಕ ಉನ್ನಿರಾಜನ್​ ಸಿನಿಮಾ ಕ್ಷೇತ್ರ ತೊರೆದು ಸರ್ಕಾರಿ ಉದ್ಯೋಗದ ಕಡೆ ಗಮನ ಹರಿಸಿದ್ದಾರೆ. ಹುದ್ದೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದನ್ನು ತಿಳಿಯಲು ಸಂದರ್ಶನ ಮಂಡಳಿಯಿಂದ ಉನ್ನಿರಾಜನ್​ ಅವರನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ಉನ್ನಿರಾಜನ್​ ಯಶಸ್ವಿಯಾಗಿದ್ದಾರೆ.

ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿರುವ ಹತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಒಬ್ಬ ಸಫಾಯಿ ಕರ್ಮಚಾರಿಯಾಗಿ ತನ್ನ ಕರ್ತವ್ಯಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಉನ್ನಿರಾಜನ್​ ಸೋಮವಾರದಿಂದ ತಮ್ಮ ಕೆಲಸವನ್ನು ವಹಿಸಿಕೊಂಡಿದ್ದಾರೆ. ಸಂಬಳ ಕಡಿಮೆ ಇದ್ದರೂ ಸಹ ಇದು ಖಾಯಂ ಕೆಲಸ ಆಗಿರುವುದರಿಂದ ಉನ್ನಿರಾಜನ್​ ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಈ ಹುದ್ದೆಯ ವ್ಯಾಪ್ತಿಯಲ್ಲಿ ಅವರು ಸ್ವೀಪರ್, ಅಟೆಂಡರ್ ಇತ್ಯಾದಿಯಾಗಿ ಬಡ್ತಿಯನ್ನು ಪಡೆಯಬಹುದಾಗಿದೆ.

ಒಂದು ವೇಳೆ ಈ ಕೆಲಸವನ್ನು ನಾನು ಬೇಡ ಅಂದಿದ್ದರೂ ಆ ಕೆಲಸಕ್ಕೆ ಬೇರೊಬ್ಬರು ಆಯ್ಕೆ ಆಗಿರುತ್ತಿದ್ದರು. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಮೌಲ್ಯವಿದೆ ಎನ್ನುತ್ತಾರೆ ಉನ್ನಿರಾಜನ್​. ನಟನಿಗೆ ಶಾಶ್ವತ ಆದಾಯವನ್ನು ಮಾಡುವುದು ಅನಿವಾರ್ಯವಾದ ಕಾರಣ, ಅವರು ಈ ಆಫರ್ ಅನ್ನು ತೆಗೆದುಕೊಂಡಿದ್ದಾರೆ ಮತ್ತು ಸೋಮವಾರದಿಂದಲೇ ಕೆಲಸಕ್ಕೆ ಸೇರಿದ್ದಾರೆ.

ಸಿನಿಮಾಗಳಲ್ಲಿ ಅವಕಾಶಗಳು ಹಾವು-ಏಣಿ ಆಟದಂತಿರುತ್ತದೆ. ಅದರಲ್ಲೂ ಕೋವಿಡ್​ ನಂತರ ಸಿನಿಮಾ ಕ್ಷೇತ್ರ ತುಂಬಾ ಬದಲಾವಣೆಯಾಗಿದ್ದು, ಅನೇಕ ಕಲಾವಿದರು ಸಂಕಷ್ಟದಲ್ಲಿರುವ ಗೊತ್ತೇ ಇದೆ. ಹೀಗಾಗಿ ಶಾಶ್ವತ ಉದ್ಯೋಗ ದೃಷ್ಟಿಯಿಂದ ಉನ್ನಿರಾಜನ್​ ತೆಗೆದುಕೊಂಡಿರುವ ನಿರ್ಧಾರ ಸರಿ ಎನ್ನುವುದು ಹಲವರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)

blank

ಉದ್ಘಾಟನೆಯಾದ ಎರಡೇ ದಿನಕ್ಕೆ ಇಬ್ಭಾಗವಾದ ಮಲ್ಪೆ ಬೀಚ್​ ತೇಲುವ ಸೇತುವೆ: ದುರಸ್ಥಿಯ ಬಳಿಕ ಮತ್ತೆ ಬಳಕೆಗೆ ಲಭ್ಯ

ಮೋಹಕ ತಾರೆ ಜತೆಗಿರುವ ಯುವಕನ್ಯಾರು? ಮತ್ತೊಮ್ಮೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ ನಟಿ ರಮ್ಯಾ!

ವಧು ಪೊಲೀಸ್ ಅಧಿಕಾರಿ- ವರ ಕುಖ್ಯಾತ ಖದೀಮ: ಎಂಗೇಜ್‌ಮೆಂಟ್‌ ಆದೊಡನೆ ನಡೆಯಿತು ಅಸಲಿ ಆಟ…

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…