ತ್ರಿಸ್ಸೂರ್: ಶಾಲಾ ಮಕ್ಕಳ ಮುಂದೆ ಗುಪ್ತಾಂಗ ಪ್ರದರ್ಶಿಸುವ ಮೂಲಕ ಅಶ್ಲೀಲ ವರ್ತನೆ ತೋರಿ ಬಂಧನವಾಗಿರುವ ಮಲಯಾಳಂ ನಟ ಶ್ರೀಜಿತ್ ರವಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಈ ಪ್ರಕರಣದ ಬಗ್ಗೆ ಸ್ಥಳೀಯ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ನಾನು ಅನಾರೋಗ್ಯ ಪೀಡಿತನಾಗಿದ್ದು, ಔಷಧಿಯನ್ನು ತೆಗೆದುಕೊಳ್ಳದಿದ್ದರಿಂದ ಗೊತ್ತಿಲ್ಲದೇ ಈ ತಪ್ಪು ನಡೆದಿದೆ. ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ ಎಂದು ಪೊಲೀಸರ ಮುಂದೆ ಶ್ರೀಜಿತ್ ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
ಜುಲೈ 4ರಂದು ಮಧ್ಯಾಹ್ನ 3.30ಕ್ಕೆ ಅಯ್ಯಂಥೋಲ್ನಲ್ಲಿರುವ ಎಸ್.ಎನ್ ಪಾರ್ಕ್ ಬಳಿ ಕಾರಿನಲ್ಲಿ ಬಂದ ಶ್ರೀಜಿತ್ ರವಿ, ಶಾಲಾ ಮಕ್ಕಳ ಮುಂದೆ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಅಶ್ಲೀಲವಾಗಿ ವರ್ತಿಸಿದ್ದಾರೆ. ನಂತರ ಮಕ್ಕಳು ತಮ್ಮ ಪಾಲಕರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ತಕ್ಷಣವೇ ಪಾಲಕರು ತ್ರಿಸ್ಸೂರ್ನ ವೆಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯನ್ನು ಪತ್ತೆಹಚ್ಚಿದ್ದಾಗ ಆರೋಪಿ ಶ್ರೀಜಿತ್ ರವಿ ಎಂಬುದು ಬೆಳಕಿಗೆ ಬಂದಿದೆ. ಈ ಹಿಂದೆ 2016ರಲ್ಲೂ ಶ್ರೀಜಿತ್ರನ್ನು ಬಂಧಿಸಲಾಗಿತ್ತು. ಆವಾಗಲೂ ಶಾಲಾ ಮಕ್ಕಳಿಗೆ ಗುಪ್ತಾಂಗ ಪ್ರದರ್ಶಿಸಿದ ಆರೋಪದ ಮೇಲೆ ಬಂಧನವಾಗಿತ್ತು. ಆಗಲೂ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಈಗ ಆರೋಪಿಯ ಕೃತ್ಯ ಸಿಸಿಟಿವಿಯಿಂದ ಬಯಲಾಗಿದ್ದು, ಮಾತ್ರೆ ತೆಗೆದುಕೊಳ್ಳದಿದ್ದರಿಂದ ಈ ತಪ್ಪು ನಡೆದು ಹೋಗಿದೆ ಎಂದು ಸಬೂಬು ನೀಡಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್)

15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ATM ಕಸದ ಬುಟ್ಟಿಗೆ ಎಸೆದು ಹೋದ ಮಹಿಳೆ! ಕಾರಣ ಕೇಳಿದ್ರೆ ದಂಗಾಗ್ತೀರಾ
ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮಕ್ಕಳ ಮುಂದೆಯೇ ಪತ್ನಿಯನ್ನು ಹತ್ಯೆಗೈದ ಪಾಪಿ ಪತಿ
ಕೆಎಸ್ಸಾರ್ಟಿಸಿ ಬಸ್-ಕಾರಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ