More

    ಪ್ರಧಾನಿ ಮೋದಿ ಟ್ವಿಟರ್​ ಖಾತೆ ಹ್ಯಾಕ್​ ಮಾಡಿ ಸರಣಿ ಟ್ವೀಟ್: ಹ್ಯಾಕ್​ ಮಾಡಿದವನ ಹೆಸರು ಬಹಿರಂಗ​

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟರ್​ ಖಾತೆಯನ್ನು ಭಾನುವಾರ (ಡಿ. 12) ನಸುಕಿನ ಜಾವ ಕೆಲವೊತ್ತು ಹ್ಯಾಕ್​ ಮಾಡಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಖಾತೆಯನ್ನು ಮರುಸ್ಥಾಪಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಪ್ರಧಾನಿ ಖಾತೆಯನ್ನು ಹ್ಯಾಕ್​ ಮಾಡಿ ಬಿಟ್​ಕಾಯಿನ್​ ಬಗ್ಗೆ ಪ್ರಚಾರ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಟ್ವೀಟ್​ ಅನ್ನು ಡಿಲೀಟ್​ ಮಾಡಲಾಗಿದೆ. ಪ್ರಧಾನಿ ಅವರ ಟ್ವಿಟರ್​ ಖಾತೆ ಅಲ್ಪಾವಧಿವರೆಗೆ ಹ್ಯಾಕ್​ ಆಗಿತ್ತು. ತಕ್ಷಣ ಟ್ವಿಟರ್​ ಖಾತೆಯನ್ನು ಭದ್ರಪಡಿಸಲಾಗಿದೆ. ಹ್ಯಾಕ್​ ಮಾಡಿದ ಕ್ಷಣದಲ್ಲಿ ಮಾಡಲಾದ ಯಾವುದೇ ಟ್ವೀಟ್​ಗಳನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ಟ್ವಿಟರ್​ ಸಂಸ್ಥೆಯೊಂದಿಗೆ ಮಾತನಾಡಿ ಪ್ರಧಾನಿ ಕಾರ್ಯಾಲಯ ಸಮಸ್ಯೆ ಬಗೆಹರಿಸಿದೆ.

    ಖಾತೆಯನ್ನು ಮರುಸ್ಥಾಪಿಸುವ ಮುನ್ನ ಪ್ರಧಾನಿ ಮೋದಿ ಟೈಮ್​ಲೈನ್​ನಲ್ಲಿ ಟ್ವೀಟ್​ ಒಂದು ಶೇರ್​ ಆಗಿದ್ದು, ಭಾರತವು ಲೀಗಲ್​ ಟೆಂಡರ್​ ಆಗಿ ಬಿಟ್​ಕಾಯಿನ್​ ಅನ್ನು ಸ್ವೀಕರಿಸಲಾಗಿದೆ. ಸರ್ಕಾರವು ಅಧಿಕೃತವಾಗಿ 500 ಬಿಟ್​ಕಾಯಿನ್​ ತೆಗೆದುಕೊಂಡಿದ್ದು, ದೇಶದ ಎಲ್ಲ ನಿವಾಸಿಗಳಿಗೆ ಅವುಗಳನ್ನು ವಿತರಿಸುತ್ತದೆ ಎಂದು ಬರೆಯಲಾಗಿದೆ.

    ಪ್ರಧಾನಿ ಮೋದಿ ಟ್ವಿಟರ್​ ಖಾತೆ ಹ್ಯಾಕ್​ ಮಾಡಿ ಸರಣಿ ಟ್ವೀಟ್: ಹ್ಯಾಕ್​ ಮಾಡಿದವನ ಹೆಸರು ಬಹಿರಂಗ​

    ಅಲ್ಲದೆ, ಪ್ರಧಾನಿ ಖಾತೆಯಿಂದ ಸರಣಿ ಟ್ವೀಟ್​ ಮಾಡಲಾಗಿದ್ದು, ಪ್ರಧಾನಿ ಮೋದಿ ಅವರ ಕೋವಿಡ್​ 19 ಪರಿಹಾರ ನಿಧಿಗೆ ದೇಣಿಗೆ ನೀಡಿ. ಇದೀಗ ಭಾರತ ಕ್ರಿಪ್ಟೋಕರೆನ್ಸಿಯನ್ನು ಅಳವಡಿಸಿಕೊಂಡಿದೆ. ದಯವಿಟ್ಟು ದೇಣಿಗೆ ನೀಡಿ ಎಂತಲೂ ಬರೆಯಲಾಗಿದೆ.

    ಇದಾದ ಕೆಲವೇ ಕ್ಷಣಗಳಲ್ಲಿ ಈ ಖಾತೆ ಹ್ಯಾಕ್​ ಆಗಿದೆ ಎಂಬ ಸಂದೇಶವನ್ನು ಟ್ವೀಟ್​ ಮಾಡಿದ್ದಾರೆ. ಜಾನ್​ ವಿಕ್​ ಎಂಬ ಹೆಸರಿನಿಂದ ಖಾತೆ ಹ್ಯಾಕ್​ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

    ಎಲ್ಲಾ ಟ್ವೀಟ್​ಗಳನ್ನು ಸದ್ಯ ಡಿಲೀಟ್​ ಮಾಡಲಾಗಿದ್ದು, ಪ್ರಧಾನಿ ಮೋದಿ ಖಾತೆಯನ್ನು ಮರಳಿ ಪಡೆಯಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. (ಏಜೆನ್ಸೀಸ್​)

    ಜೂಜಿನಿಂದ ಹಾಳಾದ ನಿವೃತ್ತ ಸೈನಿಕ: ಆ ಕ್ಷಣ.. ಅಂಕಣ..

    ಭಾರತದಲ್ಲಿ 33ಕ್ಕೇರಿದ ಒಮಿಕ್ರಾನ್ ರೂಪಾಂತರಿ ಕೇಸ್: 27 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಸ್ಥಿತಿ ಗಂಭೀರ

    ತಗೋಳ್ರೀ ರಾಜೀನಾಮೆ!; ಅಮೆರಿಕದಲ್ಲಿ ಗ್ರೇಟ್ ರಿಸೆಷನ್ ನಂತರ ಈಗ ಗ್ರೇಟ್ ರೆಸಿಗ್ನೇಶನ್ ಅಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts