More

    ಗ್ರಾಹಕರಿಗೆ ಶಾಕ್​: ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಏರಿಕೆ, LPGಯು ತುಟ್ಟಿ!

    ನವದೆಹಲಿ: ನಾಲ್ಕೂವರೆ ತಿಂಗಳ ಬಳಿಕ ಮತ್ತೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದೆ. ಕೇವಲ ಪೆಟ್ರೋಲ್​-ಡೀಸೆಲ್​ ಮಾತ್ರವಲ್ಲದೆ, ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ದರವು ಏರಿಕೆಯಾಗಿದ್ದು, ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಹೊರೆಯಾಗಿದೆ. ಈ ದರ ಏರಿಕೆ ಬಿಸಿ ಇನ್ನೆಷ್ಟು ದಿನ ಅಂತಾ ಜನರು ಹಿಡಿಶಾಪ ಹಾಕುತ್ತಿದ್ದಾರೆ.

    ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಕ್ರಮವಾಗಿ 80 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ 95.41 ರೂಪಾಯಿ ಇದ್ದ ಪೆಟ್ರೋಲ್​ ಬೆಲೆ ಇದೀಗ 96.21 ರೂಪಾಯಿಯಾಗಿದೆ. 86.67 ರೂಪಾಯಿ ಇದ್ದ ಡೀಸೆಲ್​ ಬೆಲೆ 87.47 ರೂಪಾಯಿಗೆ ಏರಿಕೆ ಕಂಡಿದೆ.

    ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರಸ್ತುತ ಪೆಟ್ರೋಲ್​ ಮತ್ತು ಡೀಸೆಲ್​ ದರ 110.82 ಮತ್ತು 95 ರೂ. ಇದೆ. ಕೊಲ್ಕತದಲ್ಲಿ ಪೆಟ್ರೋಲ್​ 105.51 ಮತ್ತು ಡೀಸೆಲ್​ 90.62 ರೂಪಾಯಿ ಹಾಗೂ ಚೆನ್ನೈನಲ್ಲಿ ಪೆಟ್ರೋಲ್​ 102.16 ಮತ್ತು ಡೀಸೆಲ್​ 92.19 ರೂಪಾಯಿಗೆ ಏರಿಕೆ ಕಂಡಿದೆ.

    ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಇದೀಗ ಏರಿಕೆ ಕಂಡಿದೆ. ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಇಂಧರ ದರದಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ. ಇದೀಗ ಚುನಾವಣೆ ಮುಗಿದ್ದಿದ್ದು, ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದೆ.

    ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.

    ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ.

    ಎಲ್​ಪಿಜಿ ಶಾಕ್​
    ಪೆಟ್ರೋಲ್​ ಮತ್ತು ಡೀಸೆಲ್​ ಮಾತ್ರವಲ್ಲದೆ, ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿಯೂ 50 ರೂಪಾಯಿ ಏರಿಕೆ ಕಂಡಿದೆ. 2021ರ ಅಕ್ಟೋಬರ್​ 6ರಂದು ಕೊನೆಯ ಬಾರಿಗೆ ದರ ಏರಿಕೆಯಾಗಿತ್ತು. ದೆಹಲಿಯಲ್ಲಿ 14 ಕೆಜಿ ಎಲ್​ಪಿಜಿ ಸಿಲಿಂಡರ್​ನ 949.50 ರೂಪಾಯಿ ತಗುಲಿದರೆ, ಕೊಲ್ಕತದಲ್ಲಿ 976 ರೂಪಾಯಿ ಇದೆ. ಚೆನ್ನೈನಲ್ಲಿ 965 ಮತ್ತು ಲಖನೌದಲ್ಲಿ 987 ರೂಪಾಯಿ ಇದೆ. (ಏಜೆನ್ಸೀಸ್​)

    ಸವಿನಿದ್ದೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​ ಕೊಟ್ಟ ಎಸಿಬಿ: ಏಕಕಾಲದಲ್ಲಿ 9 ಕಡೆ ದಾಳಿ

    ದಕ್ಷಿಣ ಚೀನಾದಲ್ಲಿ ವಿಮಾನ ಪತನ: 132 ಪ್ರಯಾಣಿಕರ ದುರಂತ ಸಾವು, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

    ನೀನು ದಪ್ಪಗಿದ್ದೀಯ ಮಗಳೇ..; ಕಠುವಾದ ಮಾತು ಮಕ್ಕಳಿಗೆ ನೋವು ತರದಿರಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts