More

    ‘ಜನರು ದೇಶ ಒಗ್ಗೂಡಿಸುವ ವಿಚಾರಗಳ ಮೇಲೆ ಗಮನ ಹರಿಸಬೇಕೇ ಹೊರತು ದೇಶ ಒಡೆಯುವುದರ ಮೇಲಲ್ಲ’

    ನವದೆಹಲಿ: ಜನರು ದೇಶವನ್ನು ಒಗ್ಗೂಡಿಸುವ ವಿಚಾರಗಳ ಮೇಲೆ ತಮ್ಮ ಗಮನ ಹರಿಸಬೇಕೇ ಹೊರತು ದೇಶವನ್ನು ವಿಭಜಿಸುವ ವಿಚಾರಗಳ ಮೇಲಲ್ಲ ಎಂದು ಸುಪ್ರೀಂಕೊರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಶನಿವಾಸ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಸೋಸಿಯೇಷನ್ ಆಫ್ ಇಂಡಿಯನ್ ಅಮೆರಿಕನ್ಸ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರಮಣ ಅವರು ಮಾತನಾಡಿದರು.

    ಒಳಗೊಳ್ಳುವಿಕೆಯು ಸಮಾಜದಲ್ಲಿ ಏಕತೆಯನ್ನು ಬಲಪಡಿಸುತ್ತದೆ. ಇದು ದೇಶದ ಶಾಂತಿ ಮತ್ತು ಪ್ರಗತಿಗೆ ತುಂಬಾ ಪ್ರಮುಖವಾಗಿದೆ. ನಮ್ಮನ್ನು ಒಂದುಗೂಡಿಸುವ ವಿಚಾರಗಳ ಮೇಲೆ ನಾವು ಗಮನ ಹರಿಸಬೇಕಿದೆ ಹೊರತು, ನಮ್ಮನ್ನು ವಿಭಜಿಸುವ ಸಂಗತಿಗಳ ಮೇಲಲ್ಲ. ಈ 21ನೇ ಶತಮಾನದಲ್ಲಿ ಕ್ಷುಲ್ಲಕ, ಸಂಕುಚಿತ ಮತ್ತು ಒಡಕುಂಟು ಮಾಡುವ ಸಮಸ್ಯೆಗಳು, ಮಾನವ ಮತ್ತು ಸಾಮಾಜಿಕ ಸಂಬಂಧಗಳನ್ನು ನಿರ್ದೇಶಿಸಲು ನಾವು ಅನುಮತಿ ಮಾಡಿಕೊಡಬಾರದು. ಮಾನವ ಅಭಿವೃದ್ಧಿಯತ್ತ ಗಮನಹರಿಸಲು ನಾವು ಎಲ್ಲ ಸಮಸ್ಯೆಗಳನ್ನು ದಾಟಿ ಮುಂದೆ ಬರಬೇಕು. ಪರಸ್ಪರ ಒಳಗೊಳ್ಳದ ವಿಧಾನವೂ ಮುಂದಾಗುವ ವಿಪತ್ತಿಗೆ ಆಹ್ವಾನ ಎಂದು ರಮಣ ಅವರು ಹೇಳಿದರು.

    ದಯವಿಟ್ಟು ನೆನಪಿನಲ್ಲಿಟ್ಟಿಕೊಳ್ಳಿ. ನೀವೆಲ್ಲರೂ ಮಿಲಿಯನೇರ್​ ಅಥವಾ ಬಿಲಿಯನೇರ್​ಗಳಾಗಬಹುದು. ನಿಮ್ಮ ಸಂಪತ್ತನ್ನು ಸಹ ಎಂಜಾಯ್​ ಮಾಡಬಹುದು. ಆದರೆ, ಅದನ್ನು ಅನುಭವಿಸಬೇಕಾದರೆ, ನಿಮ್ಮ ಸುತ್ತಲೂ ಶಾಂತಿ ನೆಲೆಸಿರುವುದು ತುಂಬಾ ಮುಖ್ಯವಾಗಿರುತ್ತದೆ. ಮನೆಗೆ ಮರಳಿದ ನಿಮ್ಮ ಪಾಲಕರು ಸಹ ದ್ವೇಷ ಮತ್ತು ಹಿಂಸೆಯಿಂದ ಮುಕ್ತವಾದ ಸಮಾಜದಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಭಾರತ ಮತ್ತು ಅಮೆರಿಕ ಎರಡೂ ತಮ್ಮ ವೈವಿಧ್ಯತೆಯಿಂದಲೇ ಹೆಸರುವಾಸಿಯಾಗಿವೆ ಮತ್ತು ಪ್ರಪಂಚದ ಎಲ್ಲೆಡೆ ಈ ವೈವಿಧ್ಯತೆಯನ್ನು ಗೌರವಿಸಬೇಕು ಮತ್ತು ಪಾಲಿಸಬೇಕಿದೆ. ಕಠಿಣ ಪರಿಶ್ರಮ ಮತ್ತು ಅಸಾಧಾರಣ ಕೌಶಲ್ಯಗಳ ಮೂಲಕ ಛಾಪು ಮೂಡಿಸಲು ಸಾಧ್ಯವಾಗುವ ವೈವಿಧ್ಯತೆಯನ್ನು ಯುಎಸ್ ತುಂಬಾ ಗೌರವಿಸುತ್ತದೆ ಮತ್ತು ಗೌರವಿಸುವುದರಿಂದಲೇ ಇಂದು ಮುಂಚೂಣಿಯ ರಾಷ್ಟ್ರವಾಗಿದೆ ಎಂದು ರಮಣ ಅವರು ತಿಳಿಸಿದರು.

    ಇದೇ ಸಂದರ್ಭದಲ್ಲಿ ರಮಣ ಅವರು ರಾಜಕೀಯ ಪಕ್ಷಗಳು ನ್ಯಾಯಾಂಗದಿಂದ ಹೇಗೆ ಕೆಲವು ದೋಷಪೂರಿತ ನಿರೀಕ್ಷೆಗಳನ್ನು ಹೊಂದಿವೆ ಎಂಬುದನ್ನು ತಿಳಿಸಿದರು.

    ಪ್ರತಿಯೊಂದು ಸರ್ಕಾರಿ ಕ್ರಮವು ನ್ಯಾಯಾಂಗ ಅನುಮೋದನೆಗೆ ಅರ್ಹವಾಗಿದೆ ಎಂದು ಅಧಿಕಾರದಲ್ಲಿರುವ ಪಕ್ಷವು ನಂಬುತ್ತದೆ. ಹಾಗೇ ನ್ಯಾಯಾಂಗವು ತಮ್ಮ ರಾಜಕೀಯ ನಿಲುವುಗಳು ಮತ್ತು ಕಾರಣಗಳನ್ನು ಮುನ್ನಡೆಸಬೇಕೆಂದು ಪ್ರತಿಪಕ್ಷಗಳು ನಿರೀಕ್ಷಿಸುತ್ತವೆ. ಈ ಎರಡೂ ಕೂಡ ತಪ್ಪು ನಂಬಿಕೆಯಾಗಿದೆ. ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಜನರಲ್ಲಿ ಸರಿಯಾದ ತಿಳುವಳಿಕೆ ಇಲ್ಲದಿರುವಾಗ ಎಲ್ಲಾ ಕಡೆಗಳಲ್ಲೂ ಈ ದೋಷಪೂರಿತ ಚಿಂತನೆಯು ಕೂಡ ಅರಳುತ್ತದೆ ಎಂದು ರಮಣ ಅವರು ಹೇಳಿದರು.

    ಸಾರ್ವಜನಿಕರಲ್ಲಿ ತೀವ್ರವಾಗಿ ಪ್ರಚಾರ ಮಾಡಲಾದ ಅಜ್ಞಾನವು ಕೂಡ ರಾಜಕೀಯ ಶಕ್ತಿಗಳ ನೆರವಿಗೆ ಬರುತ್ತಿದೆ ಮತ್ತು ಏಕೈಕ ಸ್ವತಂತ್ರ ಅಂಗವಾದ ನ್ಯಾಯಾಂಗವನ್ನು ಓಡಿಸುವುದೇ ಅವರ ಏಕೈಕ ಗುರಿಯಾಗಿದೆ. ನಾನು ಸ್ಪಷ್ಟಪಡಿಸುವುದೇನೆಂದರೆ, ನಾವು ಸಂವಿಧಾನ ಮತ್ತು ಸಂವಿಧಾನಕ್ಕೆ ಮಾತ್ರ ಜವಾಬ್ದಾರರು ಎಂದು ರಮಣ ಅವರು ಸ್ಪಷ್ಟಪಡಿಸಿದರು. (ಏಜೆನ್ಸೀಸ್​)

    ರಾತ್ರಿಯೆಲ್ಲ ಒಂದೇ ರೂಮಿನಲ್ಲಿ ಯಾಕಿದ್ರು? ಮೈಸೂರಿನಲ್ಲಿ ಹೈಡ್ರಾಮ, ನರೇಶ್​-ಪವಿತ್ರಾ ವಿರುದ್ಧ ರಮ್ಯಾ ಕಿಡಿ

    ಮಾಜಿ ಪತ್ನಿ ಎರಡನೇ ಮದ್ವೆಯಾದ ಬೆನ್ನಲ್ಲೇ ತಾನೂ ಮತ್ತೊಂದು ವಿವಾಹಕ್ಕೆ ರೆಡಿಯಾದ IAS​ ಅಧಿಕಾರಿ

    ಗಾಲ್ಫ್​ ಆಡುವಾಗ ಬೆನ್ನ ಹಿಂದೆಯೇ ಹೊಂಚು ಹಾಕಿ ಬರುತ್ತಿರೋ ಮೊಸಳೆ: ಮುಂದೇನಾಯ್ತು ನೀವೇ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts