More

    ಹಿಂದು ಹುಡುಗಿಯನ್ನು ಅಪಹರಿಸಿದ ಆರೋಪಿ ಪರ ತೀರ್ಪು ನೀಡಿದ ಪಾಕ್​ ಕೋರ್ಟ್! ಕಣ್ಣೀರಿಟ್ಟ ಸಂತ್ರಸ್ತೆಯ ಪಾಲಕರು

    ಕರಾಚಿ: ಹಿಂದು ಹುಡುಗಿಯನ್ನು ಕಿಡ್ನ್ಯಾಪ್​ ಮಾಡಿದ್ದ ಅಪಹರಣಕಾರನ ಪರವಾಗಿಯೇ ಪಾಕಿಸ್ತಾನದ ಕರಾಚಿ ನ್ಯಾಯಾಲಯ ತೀರ್ಪು ನೀಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಹುಡುಗಿ ಅಪ್ರಾಪ್ತೆ ಎಂದು ಹೇಳಿದರು ಕೋರ್ಟ್​ ಆರೋಪಿ ಪರವಾಗಿ ನಡೆದುಕೊಳ್ಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ.

    ಚಂದಾ ಮಹರಾಜ್​ (15) ಎಂಬ ಹಿಂದು ಹುಡುಗಿಯನ್ನು ಅ. 13ರಂದು ಸಿಂಧ್​ ಪ್ರಾಂತ್ಯದ ಹೈದರಾಬಾದ್​ ನಗರದಿಂದ ಶಾಮನ್​ ಮಾಗ್ಸಿ ಬಲೂಚ್​ ಎಂಬಾತ ಅಪಹರಿಸಿದ್ದ. ಇಬ್ಬರನ್ನು ಕರಾಚಿ ನಗರದಲ್ಲಿ ಮನೆಯೊಂದರಲ್ಲಿ ಕರಾಚಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸಂತ್ರಸ್ತೆಯನ್ನು ಕರಾಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿ, ಆಕೆ ಒಂದು ವಾರಗಳ ಕಾಲ ಅನುಭವಿಸಿದ ಸಂಕಷ್ಟವನ್ನು ನ್ಯಾಯಾಲಯದ ಮುಂದೆ ಹೇಳಿಕೊಂಡಳು. ನನ್ನನ್ನು ಅಪಹರಿಸಲಾಯಿತು ಮತ್ತು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಯಿತು. ಇಷ್ಟೇ ಅಲ್ಲದೆ, ಲೈಂಗಿಕವಾಗಿ ಮತ್ತು ದೈಹಿಕವಾಗಿ ಹಲ್ಲೆ ಮಾಡಲಾಯಿತು ಎಂದು ಹೇಳಿಕೊಂಡಳು.

    ಇದಾದ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಸಂತ್ರಸ್ತೆಯನ್ನು ಆಶ್ರಯ ಶಿಬಿರಕ್ಕೆ ಕಳುಹಿಸಲಾಯಿತು. ಆದರೆ, ಈವರೆಗೂ ಆರೋಪಿ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸಂತ್ರಸ್ತೆಯು ತನ್ನ ಪಾಲಕರೊಂದಿಗೆ ತೆರಳಲು ಕೋರ್ಟ್​ ಅನುಮತಿ ನೀಡಲಿಲ್ಲ. ತೀರ್ಪಿನ ಬಳಿಕ ಸಂತ್ರಸ್ತೆ ಓಡಿ ಹೋಗಿ ಪಾಲಕರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾಳೆಂದು ತಿಳಿದುಬಂದಿದೆ.

    ಇದೇ ಸಂದರ್ಭದಲ್ಲಿ ಹುಡುಗಿಯೊಬ್ಬಳು ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ನ್ಯಾಯಾಲಯವು ತನ್ನ ನಿರ್ಧಾರವನ್ನು ಸ್ವಲ್ಪ ಬದಲಾಯಿಸಿತು. ಚಂದಾ ಅವರನ್ನು ಸುರಕ್ಷಿತ ಮನೆಗೆ ತೆರಳಿ ವೈದ್ಯಕೀಯ ವರದಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ವೀಂಗಾಸ್ ವರದಿ ಮಾಡಿದ್ದಾರೆ. ತನಗೆ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಆದರೆ, ಸರ್ಕಾರ ಮತ್ತು ನ್ಯಾಯಾಲಯವು ಅವರಿಗೆ ನ್ಯಾಯವನ್ನು ನೀಡುತ್ತದೆ ಎಂದು ಈಗಲೂ ಭಾವಿಸುತ್ತೇನೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. (ಏಜೆನ್ಸೀಸ್​)

    ದ್ವೇಷಭಾಷಣಕ್ಕೆ ಕ್ರಮ: ಸ್ವಯಂಪ್ರೇರಿತ ಕೇಸ್​ಗೆ ಸುಪ್ರೀಂ ನಿರ್ದೇಶನ

    ಕನ್ನಡ ವಿಧೇಯಕ ಸಲಹೆಗೆ ಭೈರಪ್ಪ ನೇತೃತ್ವದಲ್ಲಿ ಸಮಿತಿ

    ವಾಪಸ್ಸಾದರು ಶುಭ್ರಾ ಅಯ್ಯಪ್ಪ; 2 ಚಿತ್ರಗಳಲ್ಲಿ ಬಿಜಿಯಾದ ವಜ್ರಕಾಯ ಬೆಡಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts