More

    ನಮಗೆ ಸಹಾಯ ಮಾಡಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ: ಭಾರತದ ಮೇಲೆ ಆಫ್ಘಾನ್​ ಪ್ರಜೆಗಳ ಭರವಸೆ

    ಕಾಬುಲ್​: ಪಾಕಿಸ್ತಾನದ ಉದ್ದೇಶಗಳನ್ನು ನಾವು ನಂಬುವುದಿಲ್ಲ. ನಾವೂ ಚೀನಾ ಮತ್ತು ಸೌದಿ ಅರೇಬಿಯಾವನ್ನೂ ಸಹ ಅವಲಂಬಿಸಿಲ್ಲ. ಭಾರತ ನಮ್ಮ ಬಹುಕಾಲದ ಸ್ನೇಹಿತನಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತ್ರ ನಮಗೆ ಸಹಾಯ ಮಾಡಲು ಸಾಧ್ಯ ಎಂದು ಕೊಲ್ಕತದ ಮುಲ್ಲಿಕ್​ ಬಜಾರ್​ನಲ್ಲಿ ವಾಸವಿರುವ ಅಫ್ಘಾನಿಸ್ತಾನ ಮೂಲದ ಉದ್ಯಮಿ ಜಹೀರ್​ ಖಾನ್​ ಭಾರತದೆಡೆಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

    ಇಡೀ ಆಫ್ಘಾನಿಸ್ತಾನವನ್ನು ತಾಲಿಬಾನ್​ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಅಲ್ಲಿನ ಪರಿಸ್ಥಿತಿಯನ್ನು ನೆನೆದು ಭಾರತದಲ್ಲಿರುವ ಆಫ್ಘಾನ್ನರು ಮರುಕ ವ್ಯಕ್ತಪಡಿಸಿದ್ದಾರೆ. ಜಹೀರ್​ ಖಾನ್​ ಅವರ ತಂದೆ 25 ವರ್ಷಗಳ ಹಿಂದೆ ಆಫ್ಘಾನ್​ ತೊರೆದು ಭಾರತಕ್ಕೆ ಬಂದ ನೆಲೆಸಿದರು. ಅಂದಿನಿಂದ ಜಹೀರ್​ ಇಲ್ಲಿಯೇ ವಾಸವಿದ್ದಾರೆ. ಇದೀಗ ತಮ್ಮ ತವರು ನೆಲದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಬಹಳ ದುಃಖ ವ್ಯಕ್ತಪಡಿಸಿದ್ದಾರೆ.

    ನಾನು ಈ ದೇಶದ (ಭಾರತ) ಯಾವುದನ್ನು ಬೇಕಾದರೂ ಒಪ್ಪಿಕೊಳ್ಳುತ್ತೇನೆ. ಬೇಕಿದ್ದರೆ ಜೈಲಿಗೆ ಹೋಗಲು ಕೂಡ ಸಿದ್ಧ. ಆದರೆ, ಯಾವುದೇ ಕಾರಣಕ್ಕೂ ತಾಲಿಬಾನ್​ ಆಡಳಿತ ಇರುವ ಅಫ್ಘಾನಿಸ್ತಾನಕ್ಕೆ ಹೋಗುವುದಿಲ್ಲ ಎಂದು ಜಹೀರ್​ ಹೇಳಿದ್ದಾರೆ. ಅನೇಕ ಆಫ್ಘಾನ್ನರಿಗೆ ಕೊಲ್ಕತ ತವರಾಗಿದೆ. ಕಾಬೂಲಿವಾಲಾಸ್​ ಎಂದೇ ಪರಿಚಿತರಾಗಿದ್ದೇವೆ. ಖಾನ್ಸ್​ ಅಂತಲೂ ಖ್ಯಾತಿಯಾಗಿದ್ದೇವೆ. ಆಫ್ಘಾನ್ನರು 1840ರಲ್ಲೇ ಭಾರತಕ್ಕೆ ಬಂದರು ಅಂದಿನಿಂದ ಕೊಲ್ಕತ ಇತಿಹಾಸದಲ್ಲಿ ನಾವು ಕೂಡ ಸೇರಿಕೊಂಡಿದ್ದೇವೆ ಎಂದು ಜಹೀರ್​ ಹೇಳಿದ್ದಾರೆ.

    ಕಾಬುಲಿವಾಲ ಎಂಬ ಶೀರ್ಷಿಕೆಯಲ್ಲಿ ರವಿಂದ್ರನಾಥ್​ ಠಾಗೋರ್​ ಅವರು 1892ರಲ್ಲಿ ಒಂದು ಸಣ್ಣ ಕತೆಯನ್ನು ಬರೆದಿದ್ದು, ಕೊಲ್ಕತದಲ್ಲಿ ಅವರ ಹೆಗ್ಗುರುತನ್ನು ಪರಿಚಯಿಸುತ್ತದೆ. ಒಣಹಣ್ಣು ಮಾರಾಟಗಾರರಾಗಿ ಭಾರತದಲ್ಲಿ ತಮ್ಮ ಕಾಯಕ ಆರಂಭಿಸಿದ ಆಫ್ಘಾನ್ನರು ಇಂದು ಕೊಲ್ಕತದಲ್ಲಿ ಅನೇಕರು ಟೈಲರಿಂಗ್ ಅಥವಾ ಬಟ್ಟೆ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ.

    ತಾಲಿಬಾನ್​ಗೆ ಬೆಂಬಲ ನೀಡುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಚೀನಾ ಹೇಳಿರುವುದರಿಂದ ಅವರನ್ನು ನಂಬಲು ಆಫ್ಘಾನ್​ ತಯಾರಿಲ್ಲ. ಪಾಕಿಸ್ತಾನದ ಬಗ್ಗೆ ಯಾವುದೇ ಆಫ್ಘಾನ್ನರ ಬಗ್ಗೆ ಕೇಳಿ ಅವರಿಂದ ಏನು ಬೇಡ ಎಂಬ ಮಾತುಗಳನ್ನು ಆಡುತ್ತಾರೆ. ನಾವು ಗುಲಾಮರು ಎಂದು ಇಮ್ರಾನ್​ ಖಾನ್​ ಹೇಳುತ್ತಾರೆ. ಹೇಳಬೇಕೆಂದರೆ, ಅವರು ಬೇರೆಯವರಿಗೆ ಗುಲಾಮರು ಎಂದಿದ್ದಾರೆ. ನಮಗೆ ಅವರಿಂದ ಏನು ಬೇಕಿಲ್ಲ. ನಮ್ಮ ಶತ್ರುಗಳ ಪಟ್ಟಿಯಲ್ಲಿ ಅವರು ಕೂಡ ಒಬ್ಬರು ಎಂದು ಕೊಲ್ಕತದ ಪಾರ್ಕ್​ ಸರ್ಕಸ್​ನಲ್ಲಿ ವಾಸವಿರುವ ಇಬ್ರಾಹಿಂ ಖಾನ್​ ಹೇಳಿದ್ದಾರೆ.

    ಮುಂದುವರಿದು ಮಾತನಾಡಿರುವ ಇಬ್ರಾಹಿಂ ಖಾನ್​, ಆಫ್ಘಾನ್​ನಲ್ಲಿರುವ ನಮ್ಮ ಕುಟುಂಬದೊಂದಿಗೆ ಮಾತನಾಡಿದ್ದೇನೆ. ಅವರು ಸುರಕ್ಷಿತವಾಗಿದ್ದಾರೆ. ಆದರೂ ಭಯದ ವಾತಾವರಣ ಇದೆ. ಪ್ರಧಾನಿ ಮೋದಿ ಅವರು ಮತ್ತಷ್ಟು ವಿಮಾನಗಳನ್ನು ಕಳುಹಿಸಿ ಸ್ಥಳಾಂತರ ಮಾಡಲು ಸಹಾಯ ಮಾಡಲಿದ್ದಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಭಾರತದ ಜನರೊಂದಿಗೆ ಒಳ್ಳೆಯ ಸಂಬಂಧ ಮತ್ತು ಸ್ನೇಹವನ್ನು ಬಯಸುತ್ತೇವೆ. ಭಾರತ ನಮ್ಮ ದೇಶ ಎಂದು ಭಾವಿಸಿದ್ದೇವೆ. ಪ್ರಧಾನಿ ಮೋದಿ ನಮಗೆ ಸಹಾಯ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಆಫ್ಘಾನ್​ ಬಾವುಟ ಹಿಡಿದು ಪ್ರತಿಭಟನೆ: ತಾಲಿಬಾನಿಗಳ ಗುಂಡೇಟಿಗೆ ಇಬ್ಬರು ಬಲಿ​

    ಅಫ್ಘಾನಿಸ್ತಾನ ಆಕ್ರಮಿಸಿಕೊಂಡ ಬೆನ್ನಲ್ಲೇ ತಾಲಿಬಾನ್​ ಸದಸ್ಯನನ್ನು ಜೈಲಿನಿಂದ ಬಿಡುಗಡೆ ಮಾಡಿದ ಪಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts