More

    ಕಾಲಿವುಡ್​ನ ಖ್ಯಾತ ನಟನ ಜತೆ ಹಸೆಮಣೆ ಏರಲು ಸಜ್ಜಾದ ನಟಿ ನಿಕ್ಕಿ ಗಲ್ರಾನಿ

    ಚೆನ್ನೈ: ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಕರ್ನಾಟಕ ಮೂಲದ ನಟಿ ನಿಕ್ಕಿ ಗಲ್ರಾನಿ ಕಾಲಿವುಡ್​ನ ಖ್ಯಾತ ನಟನ ಜತೆ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

    ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ತಮಿಳಿನ “ಪಯ್ಯ” ರಿಮೇಕ್​ “ಅಜಿತ್” ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಕ್ಕಿ, ಕನ್ನಡದಲ್ಲಿ ಕೇವಲ ಬೆರಳಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಿ ನಿರೀಕ್ಷಿತ ಯಶಸ್ಸು ಸಿಗದ ಕಾರಣ ನಿಕ್ಕಿ ಕಾಲಿವುಡ್​ಗೆ ಹಾರಿದರು. ಅಲ್ಲಿಂದಾಚೆಗೆ ಅವರ ಅದೃಷ್ಟವೇ ಬದಲಾಯಿತು. ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನು ನೀಡಿದರು.

    ಸದ್ಯ ನಿಕ್ಕಿ ಕಾಲಿವುಡ್​ನಲ್ಲೇ ಒಳ್ಳೆಯ ಹೆಸರು ಮಾಡಿದ್ದಾರೆ. ಇದೀಗ ನಿಕ್ಕಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ‘ಯಗವರಯಿನುಮ್​ ನಾ ಕಾಕ್ಕಾ’ ಚಿತ್ರದ ಸಹನಟ ಆದಿ ಪಿನಿಸೆಟ್ಟಿ ಅವರನ್ನು ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಾಲಿವುಡ್​ನ ಖ್ಯಾತ ನಟನ ಜತೆ ಹಸೆಮಣೆ ಏರಲು ಸಜ್ಜಾದ ನಟಿ ನಿಕ್ಕಿ ಗಲ್ರಾನಿ

    ಇತ್ತೀಚೆಗಷ್ಟೇ ನಿಕ್ಕಿ, ಆದಿ ಅವರ ಫ್ಯಾಮಿಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮದುವೆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಶೀಘ್ರದಲ್ಲೇ ಇಬ್ಬರು ಸಪ್ತಪದಿ ತುಳಿಯಲಿದ್ದಾರಂತೆ. ಮೊದಲು ನಿಶ್ಚಿತಾರ್ಥ ನೆರವೇರಿಸಿಕೊಳ್ಳಲಿದ್ದು, ಅದರ ಸಿದ್ಧತೆ ಭರದಿಂದ ನಡೆಯುತ್ತಿದೆಯಂತೆ. ಇದಾದ ಬಳಿಕ ಮದುವೆ ದಿನಾಂಕ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ವಿಚಾರವನ್ನು ನಿಕ್ಕಿಯಾಗಲಿ ಅಥವಾ ಆದಿಯಾಗಲಿ ಖಚಿತಪಡಿಸಿಲ್ಲ.

    ಇತ್ತೀಚೆಗೆ ಆದಿ ಮತ್ತು ನಿಕ್ಕಿ ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದು ಕೂಡ ಮದುವೆ ವದಂತಿಗೆ ಪುಷ್ಠಿ ನೀಡಿದೆ. ಈ ಜೋಡಿ ಇಲ್ಲಿಯವರೆಗೆ ಎರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರು ಕೊನೆಯ ಬಾರಿಗೆ 2017 ರ ಸಾಹಸ ಹಾಸ್ಯ ಚಿತ್ರ ಮರಗತ ನಾನಯಂನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

    ಸಿನಿಮಾ ವಿಚಾರಕ್ಕೆ ಬಂದರೆ, ಆದಿ ಅವರು ಪ್ರಸ್ತುತ ಎರಡು ದ್ವಿಭಾಷಾ ಚಿತ್ರಗಳಾದ ‘ಕ್ಲ್ಯಾಪ್’ ಮತ್ತು ‘ದಿ ವಾರಿಯರ್’ ನಟಿಸುತ್ತಿದ್ದಾರೆ. ಇವು ತಮಿಳು ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಮತ್ತೊಂದೆಡೆ ನಿಕ್ಕಿ ಮುಂಬರುವ ಮಿರ್ಚಿ ಶಿವನೊಂದಿಗೆ ‘ಈಡಿಯಟ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

    ಐದು ವರ್ಷದ ಪ್ರೀತಿ ಬೆಂಕಿಯಲ್ಲಿ ದಹನ: ಪ್ರಿಯಕರನನ್ನು ಹುಡುಕಿಕೊಂಡು ಬಂದ ಯುವತಿ ದುರಂತ ಸಾವು

    ಒಳ್ಳೇದಾಗ್ಲಿ ನನ್​​ ಕಂದನಿಗೆ… ಅಪ್ಪು‌ ಸಾವಿನ ಸುದ್ದಿ ಗೊತ್ತಿಲ್ದೆ ಬರ್ತ​ಡೇ, ಜೇಮ್ಸ್‌ಗೆ ಶುಭಕೋರಿದ‌ ಸೋದರತ್ತೆ

    ಹೃದಯಾಘಾತ: ಮುಧೋಳ ತಹಸೀಲ್ದಾರ್ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts