More

    ಬಾಂಬ್​ ದಾಳಿ ನಡುವೆಯೂ ಕಾಬುಲ್​ನಿಂದ ಮರಳಿದ ಭಾರತೀಯ ದಂಪತಿ ಬಿಚ್ಚಿಟ್ಟ ಕರಾಳ ಅನುಭವವಿದು!

    ನವದೆಹಲಿ: ತಾಲಿಬಾನ್​ ಆಕ್ರಮಣದ ಬಳಿಕ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡುವ ಪ್ರಯತ್ನ ವೇಗ ಪಡೆದುಕೊಂಡಿದ್ದು, ಈವರೆಗೆ 800 ಭಾರತೀಯರನ್ನು ಆಫ್ಘಾನ್​ನಿಂದ ಕರೆತರಲಾಗಿದೆ. ಅಲ್ಲಿಂದ ಬಂದವರು ಆಫ್ಘಾನ್​ನಲ್ಲಿ ನಡೆಯುತ್ತಿರುವ ಕರಾಳತೆಯನ್ನು ಬಿಚ್ಚಿಡುತ್ತಿದ್ದಾರೆ.

    ಕಳೆದ ಕೆಲವು ದಿನಗಳಿಂದ ಭಯದ ನಡುವೆಯೇ ಬದುಕಿ ಕೊನೆಗೆ ಭಾರತಕ್ಕೆ ಮರಳುವ ಮೂಲಕ ನಿಟ್ಟುಸಿರುವ ಬಿಟ್ಟಿರುವ ಶಿವಾಂಗ್​ ದೇವ್​ ಮತ್ತು ಅವರ ಪತ್ನಿ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಇಬ್ಬರು ಸುಮಾರು 15 ವರ್ಷಗಳಿಂದ ಕಾಬುಲ್​ನಲ್ಲಿ ನೆಲೆಸಿದ್ದರು. ಶಿವಾಂಗ್​ ದೇವ್​ ಆಫ್ಘಾನ್​ನ ಖಾಸಗಿ ಕಂಪನಿ ಒಂದರಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರು. ಶಿವಾಂಗ್​ ಅವರು ಗುಜರಾತ್​ನ ಪ್ರಖ್ಯಾತ ಕವಿ ಹರೀಂದ್ರ ದೇವ್​​ ಅವರ ಹಿರಿಯ ಮಗನಾಗಿರುವ ರೋಹಿತ್​ಭಾಯ್​ ದೇವ್​ ಅವರ ಮಗ.

    ತಾವು ನೋಡಿದ ಕೆಲ ಘಟನೆಗಳನ್ನು ಮಾಧ್ಯಮಗಳ ಮುಂದೆ ಶಿವಾಂಗ್​ ಬಿಚ್ಚಿಟ್ಟಿದ್ದಾರೆ, ನನ್ನ ಕಣ್ಣೆದುರೇ ಬಹಳಷ್ಟು ಸಂಗತಿಗಳು ತೆರೆದುಕೊಂಡವು. ತಾಲಿಬಾನ್​ ಆಫ್ಘಾನ್​ ವಶಕ್ಕೆ ಪಡೆದುಕೊಂಡ ಬಳಿಕ ರಸ್ತೆಗಳು ಬಂದ್​ ಆದವು. ಇದರಿಂದ ಭಾರಿ ಪ್ರಮಾಣದಲ್ಲಿ ಟ್ರಾಫಿಕ್​ ಜಾಮ್​ ಉಂಟಾಯಿತು ಎಂದಿದ್ದಾರೆ.

    ಶಿವಾಂಗ್​ ಪತ್ನಿ ಮಾತನಾಡಿ, ಕಾಬುಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುದು ಹೇಗೆ ಎಂಬ ಚಿಂತೆ ಕಾಡಲು ಶುರುವಾಯಿತು. ಹೇಗೋ ವಿಮಾನ ನಿಲ್ದಾಣವನ್ನು ತಲುಪಿದೆವು. ನನ್ನ ಪತಿಯನ್ನು ತಾಲಿಬಾನ್​ ಸೆರೆಹಿಡಿದರು. ಮತ್ತೆ ಮನೆಗೆ ಮರಳುತ್ತೇವೆ ಎಂಬ ಭರವಸೆಯು ಇರಲಿಲ್ಲ ಎಂದಿದ್ದಾರೆ.

    ಅದೃಷ್ಟವಶಾತ್​ ತಾಲಿಬಾನ್​ ಕಪಿಮುಷ್ಠಿಯಿಂದ ದಂಪತಿ ಹೇಗೋ ಬಿಡಿಸಿಕೊಂಡು ಭಾರತೀಯ ವಿಮಾನವೇರಿ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ವಿಮಾನ ಟೇಕಾಫ್​ ಆಗುವವರೆಗೂ ನಮ್ಮ ಉಸಿರನ್ನು ಬಿಗಿ ಹಿಡಿದುಕೊಂಡಿದ್ದೆವು. ವಿಮಾನ ನಿಲ್ದಾಣದ ಹೊರಗಡೆ ನಡೆಯುವ ಸ್ಫೋಟಗಳಿಂದ ಏನಾದರೂ ಅವ್ಯವಸ್ಥೆಯಾಗಬಹುದೆಂಬ ಭಯ ನಮ್ಮನ್ನು ಕಾಡುತ್ತಿತ್ತು ಎಂದು ಶಿವಾಂಗ್​ ಪತ್ನಿ ಹೇಳಿದ್ದಾರೆ.

    ನಾವು ತುಂಬಾ ಹೆದರಿದ್ದೆವು. ಅನೇಕ ಸ್ಫೋಟಗಳು ಸಂಭವಿಸುವುದನ್ನು ನಾವು ನೋಡಿದ್ದೆವು. ಕೇವಲ 40-50 ಮೀಟರ್​ದಲ್ಲೇ ಎಲ್ಲವನ್ನು ನೋಡಿದ್ದೆವು. ನಾವೆಂದಿಗೂ ಈ ರೀತಿಯ ಭಯವನ್ನು ಅನುಭವಿಸಿರಲಿಲ್ಲ ಎಂದು ಶಿವಾಂಗ್​ ದೇವ್​ ಹೇಳಿಕೊಂಡಿದ್ದಾರೆ.

    ಸ್ಫೋಟದ ನಡುವೆಯೇ ಭಾರತಕ್ಕೆ ಹಾರಿದ ಶಿವಾಂಗ್​ ದೇವ್​ ದಂಪತಿ ಗುರುವಾರ ಗುಜರಾತಿನ ಭಾವನಗರದಲ್ಲಿರುವ ತಮ್ಮ ಮನೆಯನ್ನು ತಲುಪಿದರು. ಮುಂದೆ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ, ಈಗ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ನಮ್ಮ ಬಳಿ ಹಣವಿಲ್ಲ ಅಥವಾ ನಮಗೆ ಯಾವುದೇ ಉದ್ಯೋಗವಿಲ್ಲ. ಭವಿಷ್ಯವು ಏನನ್ನು ತರುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ ಎಂದರು. (ಏಜೆನ್ಸೀಸ್​)

    ಕಾಬುಲ್​ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ: ಐಸಿಸ್​-ಕೆ ವಿರುದ್ಧ ಗುಡುಗಿದ ಜೋ ಬೈಡೆನ್​

    ಮೈಸೂರು ಗ್ಯಾಂಗ್​ರೇಪ್​ ಪ್ರಕರಣ: ತನಿಖಾಧಿಕಾರಿಗಳಿಗೆ ತಲೆನೋವಾದ ಸಂತ್ರಸ್ತೆಯ ನಡೆ!

    ಬರಲಿವೆ ಸಾಲು ಹಬ್ಬ, ಇರಲಿ ಎಚ್ಚರ: ಕೇರಳ ಪರಿಸ್ಥಿತಿ ಕುರಿತು ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts