More

    ನಯನತಾರಾ-ವಿಘ್ನೇಶ್​ ಬಳಿಯಿರುವ ಆಸ್ತಿ ಇಷ್ಟೊಂದಾ? ಒಟ್ಟು ಮೌಲ್ಯ ಕೇಳಿದ್ರೆ ನೀವು ಬೆರಗಾಗೋದು ಖಂಡಿತ!

    ಚೆನ್ನೈ: ಕಳೆದ ಏಳು ವರ್ಷಗಳಿಂದ ಪ್ರೀತಿಯ ಅಲೆಯಲ್ಲಿ ತೆಲುತ್ತಾ ಡೇಟಿಂಗ್​-ಮೀಟಿಂಗ್​ನಲ್ಲಿ ಬಿಜಿಯಾಗಿದ್ದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್​ ಜೂನ್​ 9ರಂದು ತಮ್ಮ ಸಂಬಂಧಕ್ಕೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಸಾಕಷ್ಟು ಕಲಾವಿ​ದರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮಹಾಬಲಿಪುರಂನ ರೆಸಾರ್ಟ್​ ಒಂದರಲ್ಲಿ ತಾರಾಜೋಡಿ ಸಪ್ತಪದಿ ತುಳಿಯುವ ಮೂಲಕ ತಾರಾದಂಪತಿಗೆ ಮುಂಬಡ್ತಿ ಪಡೆದಿದ್ದಾರೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಯನಾ ಮತ್ತು ವಿಘ್ನೇಶ್​ ಟ್ರೆಂಡಿಂಗ್​ನಲ್ಲಿದ್ದಾರೆ. ತಾರಾದಂಪತಿ ಕುರಿತಾದ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ವಿಘ್ನೇಶ್​ಗೆ ನಯನಾ ಕೊಟ್ಟ ದುಬಾರಿ ಉಡುಗೊರೆ ಹಾಗೂ ನಯನಾಗೆ ವಿಘ್ನೇಶ್​ ಕೊಟ್ಟ ಉಡುಗೊರೆ ಭಾರೀ ಸುದ್ದಿಯಾಗಿ ಎಲ್ಲ ಹುಬ್ಬೇರಿಸಿದೆ. ಇದೀಗ ಇಬ್ಬರ ಒಟ್ಟು ಆಸ್ತಿ ಕುರಿತಾದ ಸುದ್ದಿಯು ಕೂಡ ನಿಮ್ಮನ್ನು ಅಚ್ಚರಿಗೆ ದೂಡುವುದರಲ್ಲಿ ಸಂಶಯವೇ ಇಲ್ಲ.

    ನಯನಾ ಮತ್ತು ವಿಘ್ನೇಶ್​ ಇಬ್ಬರು ಸಿನಿ ರಂಗದಲ್ಲಿ ತೊಡಗಿಕೊಂಡಿರುವುದಲ್ಲದೆ, ಉದ್ಯಮದಲ್ಲೂ ಪಾಲುದಾರಿಕೆಯನ್ನು ಹೊಂದಿದ್ದಾರೆ. ರೌಡಿ ಪಿಕ್ಚರ್ಸ್​ ಹೆಸರಿನ ಪ್ರೊಡಕ್ಷನ್​ ಕಂಪನಿಯಲ್ಲಿ ಇಬ್ಬರದ್ದು ಪಾಲುದಾರಿಕೆ ಇದೆ. ಈ ಪ್ರೊಡಕ್ಷನ್​ ಕಂಪನಿಯಡಿ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೆ, ಸಾಕಷ್ಟು ಸಂಪಾದನೆಯು ಮಾಡಿದ್ದಾರೆ. ಇನ್ನು ನಯನಾ ಬಹುಕಾಲದಿಂದಲೇ ಸಿನಿಮಾದಲ್ಲಿದ್ದು, ಒಳ್ಳೆಯ ಹಣ ಸಂಪಾದಿಸಿದ್ದಾರೆ. ಇಬ್ಬರ ವೈಯಕ್ತಿಕ ಮತ್ತು ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ ನೀವು ಬಾಯಿ ಮೇಲೆ ಬೆರಳಿಡುವುದು ಖಂಡಿತ.

    ಹಲವು ಮೂಲಗಳ ಪ್ರಕಾರ ನಯನಾ ಅವರ ಅಂದಾಜು ಆಸ್ತಿಯ ಮೌಲ್ಯ 77 ಕೋಟಿ ರೂ. ಎನ್ನಲಾಗಿದೆ. ಚಂದ್ರಮುಖಿ, ರಪ್ಪಕಲ್, ಗಜಿನಿ ಮತ್ತು ದುಬೈ ಸೀನು ಸೇರಿದಂತೆ ಅನೇಕ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದು, ದೀರ್ಘಕಾಲದವರೆಗೆ ಬಹುಬೇಡಿಕೆ ನಟಿ ಎಂಬ ಪಟ್ಟವನ್ನು ನಯನಾ ಅಲಂಕರಿಸಿದ್ದಾರೆ. ಬಹುತೇಕ ಎಲ್ಲ ಸ್ಟಾರ್​ ನಟರ ಜತೆ ನಯನಾ ನಟಿಸಿದ್ದು, ಲೇಡಿ ಸೂಪರ್​ಸ್ಟಾರ್​ ಎಂದೇ ಖ್ಯಾತಿಯಾಗಿದ್ದಾರೆ.

    ಇನ್ನು ವಿಘ್ನೇಶ್​ ವಿಚಾರಕ್ಕೆ ಬಂದರೆ, ಇವರು ನಿರ್ದೇಶಕ ಮಾತ್ರವಲ್ಲ, ಸಾಹಿತಿಯು ಹೌದು. ವಿಘ್ನೇಶ್​ ಒಟ್ಟು ಆಸ್ತಿ ಮೌಲ್ಯ 50 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪ್ರತಿ ಸಿನಿಮಾಗೆ 1 ರಿಂದ 3 ಕೋಟಿ ರೂಪಾಯಿಯನ್ನು ವಿಘ್ನೇಶ್​ ಪಡೆದುಕೊಳ್ಳುತ್ತಾರೆ. ಒಂದು ಹಾಡಿಗೆ 1 ರಿಂದ 3 ಲಕ್ಷ ರೂಪಾಯಿ ಚಾರ್ಜ್​ ಮಾಡುತ್ತಾರೆ.

    ನಯನಾ ಹಾಗೂ ವಿಘ್ನೇಶ್​ ಶಿವನ್​ ಇಬ್ಬರ ಆಸ್ತಿಯನ್ನು ಒಟ್ಟುಗೂಡಿಸಿದರೆ, ಸುಮಾರು 130 ಕೋಟಿ ರೂ.ಗೂ ಅಧಿಕ ಆಸ್ತಿ ಇಬ್ಬರ ಹೆಸರಲ್ಲಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸುರಕ್ಷಿತ ಲೈಂಗಿಕ ಕ್ರಿಯೆ ಬಗ್ಗೆ ರಾಖಿ ಹೇಳಿದ್ದನ್ನು ಕೇಳಿ ಬೆಕ್ಕಸ ಬೆರಗಾದ ಮೈಸೂರಿನ ಬಾಯ್​ಫ್ರೆಂಡ್ ಆದಿಲ್​!​

    ಮದ್ವೆಯಾದ ಮಾರನೇ ದಿನವೇ ಭಾರಿ ಎಡವಟ್ಟು ಮಾಡಿಕೊಂಡು ವಿವಾದಕ್ಕೆ ಗುರಿಯಾದ ನಯನತಾರಾ!

    ಸೈಕಲ್​ ತುಳಿಯುತ್ತಲೇ ಕೆಳಗೆ ಬಿದ್ದ ಗೋರಿಲ್ಲಾಗೆ ಬಂತು ಎಲ್ಲಿಲ್ಲದ ಕೋಪ: ಮುಂದೇನಾಯ್ತು ನೀವೇ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts