More

    ಎಂದಿಗೂ ಈ ಒಂದು ಕೆಲಸ ಮಾಡದಂತೆ ಮಕ್ಕಳಿಗೆ ಯಾವಾಗಲೂ ಹೇಳ್ತಾರಂತೆ ನಾಗಾರ್ಜುನ..!

    ಹೈದರಾಬಾದ್​: ಕಳೆದ ಕೆಲವು ತಿಂಗಳಿಂದ ಟಾಲಿವುಡ್​ನ ಪ್ರಮುಖ ಸಿನಿ ಕುಟುಂಬಗಳಲ್ಲಿ ಒಂದಾದ ಅಕ್ಕಿನೇನಿ ನಾಗಾರ್ಜುನ ಕುಟುಂಬ ಭಾರಿ ಸುದ್ದಿಯಲ್ಲಿದೆ. ಸಮಂತಾ-ನಾಗಚೈತನ್ಯ ಡಿವೋರ್ಸ್​ ಬಳಿಕ ಸಾಕಷ್ಟು ಸುದ್ದಿ ಅಕ್ಕಿನೇನಿ ಕುಟುಂಬದ ಕುರಿತು ಓಡಾಡುತ್ತಿವೆ. ಅದರ ನಡುವೆ ನಾಗಚೈತನ್ಯರ ಲವ್​ ಸ್ಟೋರಿ, ಅಖಿಲ್​ ಅಭಿನಯದ ಮೋಸ್ಟ್​ ಎಲಿಜೆಬಲ್ ಬ್ಯಾಚುಲರ್​ ಸಿನಿಮಾ ಕೂಡ ತೆರೆಕಂಡಿದೆ. ಇದೀಗ ನಾಗಾರ್ಜುನ ಅಭಿನಯದ “ಘೋಸ್ಟ್​” ಸಿನಿಮಾ ಕೂಡ ತೆರೆಕಾಣಲು ಸಿದ್ಧವಾಗಿದೆ.

    ಈ ಮೇಲಿನ ಎಲ್ಲ ಕಾರಣಗಳಿಂದ ನಾಗಾರ್ಜುನ ಕುಟುಂಬ ಸುದ್ದಿಯಲ್ಲಿದೆ. ಇದೀಗ ಹೊಸ ಸುದ್ದಿ ಏನೆಂದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗಾರ್ಜುನ ಕೆಲವೊಂದು ವಿಚಾರಗಳನ್ನು ತಿಳಿಸಿದ್ದಾರೆ. ಕೃಷ್ಣವಂಶಿ ನಿರ್ದೇಶನದ ಹಾಗೂ ತಮ್ಮ ಅಭಿನಯದ 1996ರಲ್ಲಿ ತೆರೆಕಂಡ ನಿನ್ನೆ ಪೆಲ್ಲದಟ ಸಿನಿಮಾ ಕುರಿತು ವಿಶೇಷ ಸಂಗತಿಯೊಂದನ್ನು ನಾಗಾರ್ಜುನ ಹಂಚಿಕೊಂಡರು.

    ಈ ಚಿತ್ರ ರೊಮ್ಯಾಂಟಿಕ್​ ಫ್ಯಾಮಿಲಿ ಎಂಟರ್​ಟೈನರ್​ ಸಿನಿಮಾ ಆಗಿದ್ದು, ಸಿಕ್ಕಾಪಟ್ಟೆ ಯಶಸ್ಸನ್ನು ಗಳಿಸಿತ್ತು. ಈ ಚಿತ್ರದಲ್ಲಿ ಅತಿ ಹೆಚ್ಚು ಬೈಕ್​ ಚೇಸಿಂಗ್​ ದೃಶ್ಯಗಳಿವೆ. ಎಲ್ಲವೂ ಕೂಡ ಯಾವುದೇ ಡೂಪ್​ ಬಳಸದೇ ಮಾಡಲಾಗಿದೆ ಎಂದು ನಾಗಾರ್ಜುನ್​ ಹೇಳಿಕೊಂಡಿದ್ದಾರೆ.

    ಅಷ್ಟು ವೇಗವಾಗಿ ಓಡಿಸುವುದು ಗೊತ್ತಿಲ್ಲ. ನಾನೀಗ ಅದನ್ನು ಮಾಡುವುದೇ ಇಲ್ಲ. ಆ ರೀತಿ ಮಾಡದಂತೆ ನನ್ನ ಮಕ್ಕಳಿಗೂ ನಾನು ಹೇಳುತ್ತೇನೆ. ಬೈಕ್​ ಚೇಸಿಂಗ್​ ದೃಶ್ಯದಲ್ಲಿ ಗಂಟೆಗೆ ಸುಮಾರು 80 ರಿಂದ 90 ಕಿ.ಮೀ. ವೇಗದಲ್ಲಿ ಓಡಿಸುತ್ತಿದ್ದೆ. ಇಂದಿಗೂ ನೆನೆಸಿಕೊಂಡರೆ ಮೈ ಝುಮ್​ ಅನ್ನುತ್ತದೆ. ಬೈಕ್​ ಓಡಿಸುವಾಗ ಜಾಗೃತವಾಗಿರುವಂತೆ ಹಾಗೂ ಎಂದಿಗೂ ಇಂತಹ ಕಠಿಣ ಕೆಲಸಗಳನ್ನು ಮಾಡದಂತೆ ನನ್ನ ಮಕ್ಕಳಿಗೆ ಹೇಳುತ್ತೇನೆಂದು ನಾಗಾರ್ಜುನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಅಪಘಾತದಿಂದ ಕಾಲು ನೋವು: ಆಪರೇಷನ್​ಗೆ ಒಳಗಾದ ಎಂ.ಪಿ. ರೇಣುಕಾಚಾರ್ಯ

    ಭಿಕ್ಷಾಟನೆ ವಿರುದ್ಧ ಪೊಲೀಸರ ಡ್ರೈವ್: ಸುಮನಹಳ್ಳಿ ನಿರಾಶ್ರಿತರ ಕೇಂದ್ರಕ್ಕೆ 37 ಭಿಕ್ಷುಕರ ರವಾನೆ

    ಅಂತ್ಯ ಸಂಸ್ಕಾರದ ವೇಳೆ ತಂದೆಯ ಶವದ ಮುಂದೆ ಫೋಟೋಶೂಟ್ ಮಾಡಿಸಿದ ಮಾಡೆಲ್​ ವಿರುದ್ಧ ಆಕ್ರೋಶ..!​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts