More

    ಮಾಜಿ ಸಿಎಂ ಬಿಎಸ್​ವೈ ಕಾರಿನ ಹಿಂದೆ ಹೋಗಲು ಪೈಪೋಟಿ: ಅಪಘಾತದ ಬೆನ್ನಲ್ಲೇ ವಾಗ್ವಾದಕ್ಕಿಳಿದ ನಾಯಕರು

    ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹಿಂದೆ ಹೋಗಲು ನಡೆದ ಪೈಪೋಟಿ ಸಮಯದಲ್ಲಿ ಎರಡು ಕಾರಗಳ ನಡುವೆ ಅಪಘಾತ ಸಂಭವಿಸಿರುವ ಘಟನೆ ಮೈಸೂರು ರಿಂಗ್ ರಸ್ತೆ ಬಳಿ ಮಂಗಳವಾರ ನಡೆದಿದೆ.

    ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಇಂದು (ಆ.23) ನಡೆದ ಸಾವರ್ಕರ್ ರಥಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಸಿಎಂ ಯಡಿಯೂರಪ್ಪ ಅವರ ಆಗಮಿಸಿದ್ದರು. ಈ ವೇಳೆ ಬಿಎಸ್‌ವೈ ಹಿಂದೆ ಸಾಗುವ ಬೆಂಗಾವಲು ವಾಹನಗಳ ಪೈಪೋಟಿಯ ವೇಳೆ ಅಪಘಾತ ಸಂಭವಿಸಿದೆ.

    ಕೆಎಸ್​ಐಐಡಿಸಿ ನಿರ್ದೇಶಕ ಮಹದೇವಸ್ವಾಮಿ ಹಾಗೂ ಬಿಜೆಪಿ ಮುಖಂಡ ಸಂದೇಶ್‌ಗೆ ಸೇರಿದ ಇನೋವಾ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ಬಳಿಕ ಇಬ್ಬರು ಮುಖಂಡರು ವಾಗ್ವಾದಕ್ಕೆ ವಾಗ್ವಾದಕ್ಕೆ ಇಳಿದಿದ್ದರು. ಬಳಿಕ ಇಬ್ಬರ ಮಧ್ಯ ಪ್ರವೇಶಿಸಿದ ಪೊಲೀಸರು ಇಬ್ಬರನ್ನು ಸಮಾಧಾನ ಪಡಿಸಿದರು. ಮೈಸೂರಿನ ಎನ್.ಆರ್. ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ‌

    ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಿದ ಬಿಎಸ್​ವೈ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶೇಷ ಇತಿಹಾಸವಿದೆ. ಮೈಸೂರಿನಂಥ ಪುಣ್ಯ ಭೂಮಿಯಲ್ಲಿ ಸಾವರ್ಕರ್ ರಥ ಯಾತ್ರೆಗೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯ. ದೇಶ ಮಹತ್ವದ ಕಾಲಘಟ್ಟದಲ್ಲಿದೆ. ವಿಶ್ವಗುರು ಆಗುವತ್ತ ದೇಶ ಸಾಗುತ್ತಿದೆ. ದೇಶದ ಮೌಲ್ಯಗಳಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಸಾವರ್ಕರ್ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದರು. (ದಿಗ್ವಿಜಯ ನ್ಯೂಸ್​)

    ವೀರ ಸಾವರ್ಕರ್ ಭಾರತ ಮಾತೆಯ ಹೆಮ್ಮೆಯ ಪುತ್ರ: ರಥಯಾತ್ರೆಗೆ ಚಾಲನೆ ನೀಡಿ ಮಾಜಿ ಸಿಎಂ ಬಿಎಸ್​ವೈ ಭಾಷಣ

    ಸೋಲಿನ ಸುಳಿಯಲ್ಲಿ ಬಾಲಿವುಡ್: ಸುಶಾಂತ್​ ಸಿಂಗ್ ಸಾವಿನ ಕಡೆ ಬೊಟ್ಟು ಮಾಡಿದ ಸ್ವರಾ ಭಾಸ್ಕರ್​!

    ಗೋವಾ ಪ್ರವಾಸದಲ್ಲಿದ್ದ ಬಿಜೆಪಿ ನಾಯಕಿ, ಟಿಕ್​ಟಾಕ್​ ಸ್ಟಾರ್​ ಸೊನಾಲಿ ಪೋಗಟ್​ ಹೃದಯಾಘಾತದಿಂದ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts