More

    ಮೈಸೂರು ವಿಶ್ವವಿದ್ಯಾಲಯದಿಂದ ನಟ ಪುನೀತ್​​ ರಾಜ್​ಕುಮಾರ್​ಗೆ ಗೌರವ ಡಾಕ್ಟರೇಟ್ ಘೋಷಣೆ​

    ಮೈಸೂರು: ಮರಣೋತ್ತರ ಕರ್ನಾಟಕ ರತ್ನ ಗೌರವದ ಬೆನ್ನಲ್ಲೇ ದಿವಂಗತ ನಟ ಪುನೀತ್ ರಾಜ್‍ಕುಮಾರ್‌ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಘೋಷಣೆಯಾಗಿದ್ದು, ಚಿತ್ರರಂಗ ಮಾತ್ರವಲ್ಲದೆ, ಸಮಾಜಮುಖಿ ಕೆಲಸಗಳನ್ನು ಮಾಡಿ ಅಕಾಲಿಕವಾಗಿ ಮರೆಯಾದ ಅಪ್ಪುಗೆ ಮತ್ತೊಂದು ಗೌರವ ಸಿಕ್ಕಂತಾಗಿದೆ.

    ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್​ ಅವರು ಪುನೀತ್​ ಅವರಿಗೆ ಗೌರವ ಡಾಕ್ಟರೇಟ್​ ಅನ್ನು ಘೋಷಣೆ ಮಾಡಿದ್ದಾರೆ.‌ ಮೈಸೂರಿನ ಕ್ರಾಫರ್ಡ್​ ಭವನದಲ್ಲಿ ಗೌರವ ಡಾಕ್ಟರೇಟ್​ ಅನ್ನು ರಾಜ್ಯಪಾಲರು ಪ್ರದಾನ ಮಾಡಲಿದ್ದಾರೆ.

    ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಕುಲಪತಿಗಳ ನಿಯೋಗ ಭೇಟಿ ಮಾಡಿ ಗೌರವ ಡಾಕ್ಟರೇಟ್​ ಬಗ್ಗೆ ಚರ್ಚಿಸಿತ್ತು. ಶತಮಾನೋತ್ಸವ ಪೂರೈಸಿರುವ ವಿವಿಯಿಂದ ಡಾಕ್ಟರೇಟ್ ಸ್ವೀಕರಿಸಲು ಅಶ್ವಿನಿ ಅವರು ಒಪ್ಪಿದ್ದಾರೆ. ಶತಮಾನೋತ್ಸವ ಘಟಿಕೋತ್ಸವದಲ್ಲಿ ದಿವಂಗತ ನಟ ಪುನೀತ್ ರಾಜ್​​ಕುಮಾರ್‌ಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

    ಶಹನಾಯಿ ವಾದಕ ಎಂ.ಮಹದೇವಸ್ವಾಮಿ, ವಿಜ್ಞಾನಿ ಅತ್ರಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ. (ದಿಗ್ವಿಜಯ ನ್ಯೂಸ್​)

    ಒಂದೇ ದಿನದಲ್ಲಿ ಪೆಟ್ರೋಲ್​ 77, ಡೀಸೆಲ್​ 55 ರೂ. ಹೆಚ್ಚಳ; ಭಾರತೀಯರಿಗೂ ಕಾದಿದೆ ತೈಲಾಘಾತ!

    ಮಂಡ್ಯದಲ್ಲಿ ನಿಖಿಲ್​​ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ: ಹೊಸ ಬಾಂಬ್​ ಸಿಡಿಸಿದ ಸಚಿವ ನಾರಾಯಣ ಗೌಡ

    ರಹಸ್ಯವಾಗಿ ಮದ್ವೆಯಾದ ನಯನತಾರಾ-ವಿಘ್ನೇಶ್ ಶಿವನ್​: ದೇವಸ್ಥಾನದಲ್ಲೇ ಹೊರಬಿತ್ತು ಮಹತ್ವದ ಸುಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts