More

    ‘ದ್ರೌಪದಿ ಮುರ್ಮ ಕೇರಳದಿಂದ ಪಡೆದ ಒಂದೇ ಒಂದು ಮತವು 139 ಮತಗಳಿಗಿಂತಲೂ ಹೆಚ್ಚು’

    ತಿರುವನಂತಪುರಂ: ಕೇರಳದ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗೆ ಮತ ಹಾಕಲು ಮೊದಲೇ ನಿರ್ಧರಿಸಿದರು ಕೂಡ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಕೇರಳದಿಂದ ಒಂದು ಮತ ಬಿದ್ದಿದ್ದು, ಈ ಬಗ್ಗೆ ಕೇರಳದ ಬಿಜೆಪಿ ಅಧ್ಯಕ್ಷ ಸುರೇಂದ್ರನ್​ ತಮ್ಮ ಅಭಿಪ್ರಾಯವನ್ನು ವ್ಯಕ್ತಪಿಸಿದ್ದಾರೆ.

    'ದ್ರೌಪದಿ ಮುರ್ಮ ಕೇರಳದಿಂದ ಪಡೆದ ಒಂದೇ ಒಂದು ಮತವು 139 ಮತಗಳಿಗಿಂತಲೂ ಹೆಚ್ಚು'
    ಕೇರಳದ ಬಿಜೆಪಿ ಅಧ್ಯಕ್ಷ ಸುರೇಂದ್ರನ್​

    ಸಾಮಾಜಿಕ ಜಾಲತಾಣದಲ್ಲಿ ಅಡ್ಡ ಮತದಾನದ ಬಗ್ಗೆ ಬರೆದುಕೊಂಡಿರುವ ಸುರೇಂದ್ರನ್​, ಕೇರಳದ ಶಾಸಕರೊಬ್ಬರಿಂದ ದ್ರೌಪದಿ ಮುರ್ಮು ಅವರು ಪಡೆದುಕೊಂಡಿರುವ ಮತ ಅವರ ವಿರುದ್ಧ ಚಲಾವಣೆಯಾದ 139 ಮತಗಳಿಗಿಂತ ಹೆಚ್ಚು ಮೌಲ್ಯವನ್ನು ಹೊಂದಿದೆ ಎಂದಿದ್ದಾರೆ.

    ಕೇರಳದ 140 ಶಾಸಕರ ಪೈಕಿ ದ್ರೌಪದಿ ಮುರ್ಮು ಅವರು ಕೇರಳದಿಂದ ಒಂದು ಮತ ಪಡೆದಿರುವುದು ದೃಢಪಟ್ಟ ನಂತರ ಸುರೇಂದ್ರನ್ ಅವರು ಈ ಪೋಸ್ಟ್ ಮಾಡಿದ್ದಾರೆ. ಮುರ್ಮು ಅವರು ಗಳಿಸಿದ ಮತವು ಕೇರಳದ ಎಡ ಮತ್ತು ಮಧ್ಯ ರಾಜಕೀಯ ರಂಗಗಳ ನಿಷೇಧಿತ ಧೋರಣೆಯ ವಿರುದ್ಧ ಚುನಾವಣೆಯಲ್ಲಿ ಪಡೆದ “ಸಕಾರಾತ್ಮಕ ಮತ” ಎಂದು ಸುರೇಂದ್ರನ್ ಹೇಳಿದ್ದಾರೆ.

    ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಭರ್ಜರಿ ಜಯ ಸಾಧಿಸಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲಿ ಸಂಸದರ ಮತಗಳನ್ನು ಎಣಿಸಲಾಯಿತು. ಇದರಲ್ಲಿ ಮುರ್ಮುಗೆ 540 ಮತಗಳು ಸಂದಾಯವಾದವು. ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾಗೆ 208 ಮತಗಳು ದೊರಕಿದವು. 15 ಮತ ಅಮಾನ್ಯಗೊಂಡವು. ಸಂಸದರ ಮತಗಳಲ್ಲಿ ಮುಮುಗೆ ಸಿಕ್ಕ ಮತಮೌಲ್ಯ 5,23,600. (ಶೇ. 72.19). ಯಶವಂತ ಸಿನ್ಹಾಗೆ ದೊರಕಿದ ಮತಮೌಲ್ಯ 1,45,600 (ಶೇ.27.81) ಪ್ರತಿಯೊಬ್ಬ ಸಂಸದರ ಮತಮೌಲ್ಯ 700 (ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲ). (ಏಜೆನ್ಸೀಸ್​)

    ತನ್ನದೇ ಚಾನೆಲ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿ ಸಾವಿನ ಹಾದಿ ಹಿಡಿದ ಯೂಟ್ಯೂಬರ್​!

    ಪ್ರೇಯಸಿಯ ತಲೆ ಕಡಿದು ಠಾಣೆಗೆ ತಂದ ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ದುರಂತ, ಪ್ರೇಯಸಿ ಕೊಂದು ಪ್ರಿಯಕರ ಆತ್ಮಹತ್ಯೆ!

    ನಮ್ಮಿಬ್ಬರನ್ನೂ ಒಂದು ಕೋಣೆಯಲ್ಲಿ ಇರಿಸಿದರೆ… ನಾಗಚೈತನ್ಯ ಬಗ್ಗೆ ಅಚ್ಚರಿಕೆ ಹೇಳಿಕೆ ನೀಡಿದ ಸಮಂತಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts