More

    ಚಲಿಸುವ ಬಸ್​ ಮೇಲೆ ತೆಂಗಿನಕಾಯಿ ತೂರಿದ ಮಂಗಗಳು: ಅರಣ್ಯ ಇಲಾಖೆಯಿಂದಲೂ ಬಸ್​ ಮಾಲೀಕನಿಗೆ ಶಾಕ್​..!

    ಇರಿತ್ತಿ: ಚಲಿಸುವ ಬಸ್​ ಮೇಲೆ ಕೋತಿಗಳು ತೆಂಗಿನಕಾಯಿ ಎಸೆದ ಪರಿಣಾಮ ಬಸ್ಸಿನ ವಿಂಡ್​ಶೀಲ್ಡ್​ ಅಥವಾ ಮುಂಭಾಗದ ಗಾಜು ಪುಡಿ ಪುಡಿಯಾಗಿದ್ದು, ಪ್ರಯಾಣಿಕರಿಬ್ಬರು ಗಾಯಗೊಂಡಿರುವ ವಿಚಿತ್ರ ಘಟನೆ ಕೇರಳದ ಇರಿತ್ತಿಯಲ್ಲಿ ನಡೆದಿದೆ.

    ಸೆಂಟ್​ ಜ್ಯೂಡ್​ ಹೆಸರಿನ ಖಾಸಗಿ ಬಸ್​ ಇರಿತ್ತಿ ಮತ್ತು ನೆರುಂಪೊಯಿಲ್​ ನಡುವೆ ಸಂಚರಿಸುವಾಗ ಮಾರ್ಗ ಮಧ್ಯೆ ಮಂಗಗಳ ಗುಂಪು ದಾಳಿ ಮಾಡಿದೆ. ರಸ್ತೆ ಪಕ್ಕದ ತೆಂಗಿನಮರದ ಮೇಲೆ ಮಂಗಗಳು ಬೀಡು ಬಿಟ್ಟಿದ್ದ ವೇಳೆ ಬಸ್​ ವೇಗವಾಗಿ ಚಲಿಸಿದೆ. ಇದರಿಂದ ಉದ್ರಿಕ್ತಗೊಂಡ ಮಂಗಗಳ ಗುಂಪು ಬಸ್ಸಿನತ್ತ ತೆಂಗಿನಕಾಯಿಗಳನ್ನು ತೂರಿದೆ. ಇದರಿಂದ ಬಸ್ಸಿನ ವಿಂಡ್​ಶೀಲ್ಡ್​ ಅಥವಾ ಮುಂಭಾಗದ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ.

    ಇನ್ನು ಈ ಘಟನೆಯಿಂದ ಬಸ್​ ಸೇವೆ ಸುಮಾರು ಅರ್ಧ ದಿನ ಸ್ಥಗಿತಗೊಂಡಿತು. ಬಸ್​ ಮಾಲೀಕ ಜಾನ್ಸನ್​ ವಿಂಡ್​ಶೀಲ್ಡ್​ ಬದಲಿಸಲು 17 ಸಾವಿರ ರೂ. ಖರ್ಚು ಮಾಡಿದ್ದಾರೆ. ಇತ್ತ ಮಂಗಗಳು ಮಾಡಿದ ಕೆಲಸದ ಹೊಣೆಯನ್ನು ಹೊರಲು ನಿರಾಕರಿಸಿರುವ ಅರಣ್ಯ ಇಲಾಖೆ ಬಸ್​ ಮಾಲೀಕರಿಗೆ ಪರಿಹಾರ ನೀಡಲು ಶೂನ್ಯ ಅವಕಾಶವನ್ನು ಉಲ್ಲೇಖಿಸಿದ್ದಾರೆ.

    ಮಂಗಗಳ ನಿರಂತರ ದಾಳಿಯಿಂದಾಗಿ, ಈ ಪ್ರದೇಶದ ಮೂಲಕ ಕೇವಲ ಒಂದು ಬಸ್​ ಸೇವೆಯನ್ನು ಮಾತ್ರ ನಡೆಸಲಾಗುತ್ತದೆ. ಸ್ಥಳೀಯರು, ಪ್ರಯಾಣಿಕರು ಮತ್ತು ಪಾದಚಾರಿಗಳು ಸಹ ದಿನೇ ದಿನೇ ಕೋತಿಗಳ ದಾಳಿಯನ್ನು ಎದುರಿಸುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಪರಿಹರಿಸಲು ಇನ್ನೂ ನಿರ್ಣಾಯಕ ಹೆಜ್ಜೆಯನ್ನು ತೆಗೆದುಕೊಂಡಿಲ್ಲ. ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ ಎಂಬುದ ಇಲ್ಲಿನ ಜನರ ಆಸಯವಾಗಿದೆ. (ಏಜೆನ್ಸೀಸ್​)

    ಮದುವೆಗೂ ಮುನ್ನವೇ ಒಪ್ಪಂದವೊಂದಕ್ಕೆ ಸಹಿ ಹಾಕಿ ತನ್ನ ಹಕ್ಕನ್ನು ಕಳೆದುಕೊಂಡರಾ ನಟಿ ಸಮಂತಾ?

    ಪಾರ್ಟಿಯಲ್ಲಿ ಆಡಿದ ಆ ಒಂದು ಮಾತು, ಸಮಂತಾರ ನಿರ್ಧಾರವೇ ಡಿವೋರ್ಸ್​ಗೆ ಕಾರಣವಾಯ್ತಾ? ಇಬ್ಬರ ಅಹಂ ಕತೆಯಿದು..?!

    ಹಿರಿಯರಿಗೆ ಸಂಧ್ಯಾಸುರಕ್ಷೆ; ಮಾಸಿಕ 200 ರೂ. ಪಿಂಚಣಿ ಹೆಚ್ಚಳಕ್ಕೆ ಸಂಪುಟ ಅಸ್ತು

    ನಾಲ್ಕು ವರ್ಷದಿಂದ ಅಲೆದಾಟ ಸೌಲಭ್ಯಕ್ಕಾಗಿ ಪರದಾಟ; ಸಿಗದ ಬಿಪಿಎಲ್​ ಕಾರ್ಡ್, ತಪ್ಪದ ಜನರ ಗೋಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts