More

    ಕಡು ಬಡತನದಲ್ಲಿ ಹುಟ್ಟಿ 30 ಕೋಟಿ ರೂ. ಬೆಲೆ ಬಾಳುವ ಆಸ್ತಿ ಗಳಿಸಿದ್ಹೇಗೆ? ಕಿಲಾಡಿ ಲೇಡಿಯ ಹಿನ್ನೆಲೆ ತಿಳಿದ್ರೆ ದಂಗಾಗ್ತೀರಾ!

    ಭುವನೇಶ್ವರ್​: ಒಡಿಶಾದ ಹಸಿವುಯುಕ್ತ ವಲಯಗಳಲ್ಲಿ ಒಂದಾಗಿದ್ದ ಕಲಹಂಡಿ ಜಿಲ್ಲೆಯ ನಿವಾಸಿಯಾದ ಹಾಗೂ ಬಡ ಕುಟುಂಬದಿಂದ ಅರ್ಚನಾ ನಾಗ್​, ಇದೀಗ ಆಮದು ಸ್ವಂತ ಹೆಸರಿನಲ್ಲಿ ಅರಮನೆಯಂತಹ ಮನೆಯನ್ನು ಹೊಂದಿದ್ದಾಳೆ ಮತ್ತು ಐಷಾರಾಮಿ ಕಾರುಗಳು, ನಾಲ್ಕು ಹೈಬ್ರೀಡ್​ ನಾಯಿಗಳು ಹಾಗೂ ಒಂದು ಬಿಳಿ ಬಣ್ಣದ ಕುದುರೆ ಹೊಂದಿರುವ ಅರ್ಚನಾ ನಾಗ್​ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾಳೆ. ಈ ಹಂತಕ್ಕೆ ಬರಲು ಈಕೆ ಆಯ್ದುಕೊಂಡಿದ್ದು ಅಕ್ರಮದಾರಿ.

    ಹೌದು, ಈ ಅರ್ಚನಾ ನಾಗ್​​ ಸಾಮಾನ್ಯ ಮಹಿಳೆಯಲ್ಲ. ಈಕೆ ಖತರ್ನಾಕ್​ ಲೇಡಿ. ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು, ಬೆದರಿಕೆವೊಡ್ಡಿ, ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್​ಳನ್ನು ಒಡಿಶಾ ಪೊಲೀಸರು ಕಳೆದ ವಾರ ಬಂಧಿಸಿದ್ದಾರೆ. ಇದೀಗ ಪ್ರತಿದಿನ ಈಕೆಯ ಕುರಿತಾದ ಸಾಕಷ್ಟು ಶಾಕಿಂಗ್​ ಸಂಗತಿಗಳು ಬೆಳಕಿಗೆ ಬರುತ್ತಿವೆ.

    ಈಕೆ ಕಡು ಬಡತನಿಂದ ಆಗರ್ಭ ಶ್ರೀಮಂತೆ ಆಗಿ, ಸುಲಿಗೆ ಪ್ರಕರಣದಲ್ಲಿ ಇದೀಗ ಬಂಧನವಾಗಿರುವ ಆಧಾರದ ಮೇಲೆ ಒಡಿಶಾದ ಸಿನಿಮಾ ನಿರ್ದೇಶಕರೊಬ್ಬರು ಸಿನಿಮಾ ಮಾಡಲು ಆಸಕ್ತಿ ಹೊಂದಿದ್ದಾರೆ. ಅಷ್ಟು ರೋಚಕವಾಗಿದೆ ಈಕೆಯ ಲೈಫ್​ ಜರ್ನಿ.

    26 ವರ್ಷದ ಅರ್ಚನಾ ಓರ್ವ ಬ್ಲಾಕ್​ಮೇಲರ್​. ಈಕೆಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಸಿ, ಹಣ ಸುಲಿಗೆ ಮಾಡುವುದೇ ಈಕೆಯ ನಿತ್ಯದ ಕೆಲಸವಾಗಿದೆ. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.

    ಕಲಹಂಡಿ ಜಿಲ್ಲೆಯ ಲಾಂಜಿಗಢದಲ್ಲಿ ಜನಿಸಿದ ಅರ್ಚನಾ, 2015ರಲ್ಲಿ ಭುವನೇಶ್ವರಕ್ಕೆ ಬರುವ ಮೊದಲು ಆಕೆಯ ತಾಯಿ ಕೆಲಸ ಮಾಡುತ್ತಿದ್ದ ಅದೇ ಜಿಲ್ಲೆಯ ಕೆಸಿಂಗಾ ಎಂಬ ಪಟ್ಟಣದಲ್ಲಿ ಅರ್ಚನಾ ಬೆಳೆದಳು. ಆರಂಭದಲ್ಲಿ ಖಾಸಗಿ ಸೆಕ್ಯುರಿಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅರ್ಚನಾ, ನಂತರ ಬ್ಯೂಟಿ ಪಾರ್ಲರ್​ಗೆ ಸೇರಿಕೊಂಡಳು. ಅಲ್ಲಿ ಆಕೆಗೆ ಬಾಲಸೋರ್​ ಜಿಲ್ಲೆಯ ಜಗಬಂಧು ಚಂದು ಎಂಬುವನ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ 2018ರಲ್ಲಿ ಇಬ್ಬರು ಮದುವೆ ಆದರು. ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದಾಗಲೇ ಆಕೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು ಎಂಬ ಆರೋಪವಿದೆ.

    ಪತಿ ಜಗಬಂಧು ಬಳಸಿದ ಕಾರು ಶೋರೂಮ್​ ನಡೆಸುತ್ತಿದ್ದ. ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಇತರೆ ಹಣವಂತರ ಪರಿಚಯ ಆತನಿಗೆ ಇತ್ತು. ಕೆಲವು ಶಾಸಕರು ಸೇರಿದಂತೆ ಪ್ರಭಾವಿ ವ್ಯಕ್ತಿಗಳೊಂದಿಗಿನ ಜಗಬಂಧು ಮತ್ತು ಅರ್ಚನಾಳ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ.

    ಅರ್ಚನಾ ಸಹ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳ ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ಅವರಿಗೆ ಹೆಣ್ಣು ಮಕ್ಕಳನ್ನು ಪೂರೈಸುತ್ತಿದ್ದಳು. ಬಳಿಕ ಏಕಾಂತದಲ್ಲಿದ್ದ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದಳು. ಬಳಿಕ ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಯರ ಜೊತೆ ಇರುವ ಫೋಟೋಗಳನ್ನು ತೋರಿಸಿ 3 ಕೋಟಿ ರೂಪಾಯಿಗೆ ಅರ್ಚನಾ ಬೇಡಿಕೆ ಇಟ್ಟಳು ಎಂದು ಸಿನಿಮಾ ನಿರ್ಮಾಪಕರೊಬ್ಬರು ನ್ಯಾಯಪಲ್ಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನನ್ನನ್ನು ಸೆಕ್ಸ್​ ದಂಧೆಗೆ ಬಲವಂತವಾಗಿ ಬಳಸಿಕೊಂಡಳು ಎಂದು ಯುವತಿ ಒಬ್ಬಳು ನೀಡಿರುವ ದೂರಿನ ಆಧಾರದ ಮೇಲೆ ಅರ್ಚನಾಳನ್ನು ಅ.6ರಂದು ಪೊಲೀಸರು ಬಂಧಿಸಿದ್ದಾರೆ. ಬಂಧನ ಬೆನ್ನಲ್ಲೇ ಈಕೆಯ ಅಸಲಿ ಕತೆಯನ್ನು ತಿಳಿದ ಒಡಿಶಾದ ಸಿನಿಮಾ ನಿರ್ದೇಶಕ ಶ್ರೀಧರ್​ ಮಾರ್ಥ ಎಂಬುವರು ಸಿನಿಮಾ ಮಾಡಲು ಪ್ಲಾನ್​ ಹಾಕಿಕೊಂಡಿದ್ದಾರೆ. ಇನ್ನೊಂದೆಡೆ ಅರ್ಚನಾಳ ಬ್ಲಾಕ್​ಮೇಲ್​ ಪ್ರಕರಣದಲ್ಲಿ ನಡೆದಿರುವ ಹಣಕಾಸಿನ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಆರ್ಥಿಕ ಅಪರಾಧಗಳ ವಿಭಾಗವನ್ನು ಒಡಿಶಾ ಪೊಲೀಸರು ಕೇಳಿಕೊಂಡಿದ್ದಾರೆ.

    2018 ರಿಂದ 2022 ರವರೆಗಿನ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ದಂಪತಿ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ ಎಂದು ಪೊಲೀಸರು ಮಾಡಿದ ಆಂತರಿಕ ಮೌಲ್ಯಮಾಪನದಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈವರೆಗೂ ದಂಪತಿ ವಿರುದ್ಧ ಎರಡು ಪ್ರಕರಣಗಳು ಮಾತ್ರ ದಾಖಲಾಗಿದೆ ಎಂದು ಭವನೇಶ್ವರ್​ ಡಿಸಿಪಿ ಪ್ರತೀಕ್​ ಸಿಂಗ್​ ಹೇಳಿದ್ದಾರೆ. ಅಲ್ಲದೆ, ಮತ್ತಷ್ಟ ತನಿಖೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.

    25 ಪ್ರಭಾವಿಗಳು ಹನಿಟ್ರ್ಯಾಪ್​ ಬಲೆಗೆ
    18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಅರ್ಚನಾ, ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಧಾಮ್​ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಮುನ್ನವೇ ಈ ಸಂಗತಿ ಬೆಳಕಿಗೆ ಬಂದಿರುವುದು ರಾಜಕೀಯ ವಾತಾವರಣವನ್ನೇ ಕೆಡಿಸಿದೆ. ಹನಿಟ್ರ್ಯಾಪ್​ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ. ಲೇಡಿ ಬ್ಲಾಕ್‌ಮೇಲರ್ ಅರ್ಚನಾ ಪ್ರಕರಣದಲ್ಲಿ ಬಿಜೆಡಿ ಶಾಸಕರು ಮತ್ತು ಸಚಿವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಒಡಿಶಾ ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ. ಲೇಡಿ ಬ್ಲಾಕ್‌ಮೇಲರ್ ಅರ್ಚನಾಳಿಂದ ಹನಿಟ್ರ್ಯಾಪ್ ಆಗಿರುವ ಆರೋಪ ಹೊತ್ತಿರುವ 11 ಶಾಸಕರಲ್ಲಿ ರಾಜ್ಯ ಸರ್ಕಾರದ 3 ಸಚಿವರೂ ಇದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಬಾಬು ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಆಡಳಿತಾರೂಢ ಬಿಜೆಡಿಯ ಹಲವಾರು ಯುವ ನಾಯಕರು ಅರ್ಚನಾ ಅವರ ಮನೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಇದೆಲ್ಲವು ಗೊತ್ತಿದ್ದರೂ ಪೊಲೀಸರು ಉದ್ದೇಶಪೂರ್ವಕವಾಗಿ ಪ್ರಕರಣದ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಮತ್ತು ಅರ್ಚನಾ ಮತ್ತು ಆಕೆಯ ಪತಿಗೆ ಡ್ರಗ್ಸ್ ದಂಧೆಯೊಂದಿಗೆ ಸಂಪರ್ಕವಿದೆ ಎಂದು ಬಾಬು ಆರೋಪಿಸಿದ್ದಾರೆ.

    ಬಿಜೆಪಿಯ ಹಿರಿಯ ನಾಯಕ ಪ್ರತಾಪ್ ಸಾರಂಗಿ ಅವರು ಅರ್ಚನಾ ಪ್ರಕರಣದಿಂದ ಹೆಚ್ಚಿನ ಅಂಶಗಳನ್ನು ಹೊರ ತೆಗೆಯಲು ಸಿಬಿಐನಂತಹ ನಿಷ್ಪಕ್ಷಪಾತ ಸಂಸ್ಥೆಯಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರದ ಹಲವು ಶಾಸಕರು ಮತ್ತು ಸಚಿವರು ಭಾಗಿಯಾಗಿರುವ ಬಗ್ಗೆ ಸತ್ಯ ಬಹಿರಂಗವಾದರೆ ಬಿಜೆಡಿ ಸರ್ಕಾರ ಪತನವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಂತೋಷ್ ಸಲೂಜಾ ಹೇಳಿದ್ದಾರೆ. ಅಲ್ಲದೆ, ಅರ್ಚನಾ ಅವರ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನಲ್ಲಿ ಅವರ ಎಲ್ಲ ವ್ಯವಹಾರಗಳ ವಿವರಗಳಿವೆ ಎಂದು ತಿಳಿಸಿದ್ದಾರೆ.

    ಆದರೆ, ಇಷ್ಟೆಲ್ಲ ಆರೋಪಗಳು ಬಂದರೂ ಆಡಳಿತಾರೂಢ ಬಿಜೆಡಿ ಮಾತ್ರ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. (ಏಜೆನ್ಸೀಸ್​)

    18 ಶಾಸಕರು ಸೇರಿ 25 ಪ್ರಭಾವಿಗಳನ್ನು ಹನಿಟ್ರ್ಯಾಪ್​ ಬಲೆಗೆ ಕಡೆವಿ ಸರ್ಕಾರಕ್ಕೆ ಕುತ್ತು ತಂದಿಟ್ಟ ಖತರ್ನಾಕ್​ ಲೇಡಿ!

    ಫೋನ್​ ಮಾಡಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಪ್ರೇಯಸಿ: ಮುಂದೆ ನಡೆದಿದ್ದು ಘನ ಘೋರ ದುರಂತ

    ಒಂದೇ ಮನೆಯಲ್ಲಿ 2 ಕಾಳಿಂಗ ಸರ್ಪ, ಅದರಲ್ಲೊಂದು ದೈತ್ಯ ಹಾವು! ಎದೆ ಝಲ್​ ಎನಿಸುವ ವಿಡಿಯೋ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts