More

    ಅನಾರೋಗ್ಯ ಎಂದು ಮನೆಗೆ ಕರೆದ ಕೂಡಲೇ ಮಹಿಳೆಯ ಮಾತು ನಂಬಿ ಹೋದ ವೈದ್ಯನಿಗೆ ಕಾದಿತ್ತು ಶಾಕ್​!

    ಕೊಚ್ಚಿ: ವೈದ್ಯರೊಬ್ಬರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸಿ 5 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಸ್ನೇಹಿತನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಗುಡಲೂರ್​ ಮೂಲದ ನಾಸೀಮಾ ಮತ್ತು ಆಕೆಯ ಸ್ನೇಹಿತ ಮುಹಮ್ಮದ್​ ಆಮೀನ್​ ಎಂದು ಗುರುತಿಸಲಾಗಿದೆ. ಈ ಘಟನೆ ಏಪ್ರಿಲ್ 5 ರಂದು ನಡೆದಿದೆ.

    ಇದನ್ನೂ ಓದಿ: ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ 2 ಬೆಕ್ಕುಗಳನ್ನು ಪತ್ತೆಹಚ್ಚಿ!

    ಮಹಿಳೆ ಚಿಕಿತ್ಸೆಗಾಗಿ ಮೊದಲ ಬಾರಿಗೆ ವೈದ್ಯರನ್ನು ಭೇಟಿಯಾದರು. ಆ ಬಳಿಕ ತನಗೆ ಅನಾರೋಗ್ಯವಿದೆ ಎಂದು ಪಣಂಪಳ್ಳಿ ನಗರದಲ್ಲಿರುವ ತನ್ನ ಮನೆಗೆ ವೈದ್ಯರನ್ನು ಕರೆಸಿ ಮೊಬೈಲ್‌ನಲ್ಲಿ ತೆಗೆದ ಖಾಸಗಿ ಚಿತ್ರಗಳನ್ನು ತೋರಿಸಿ ಬ್ಲಾಕ್‌ಮೇಲ್ ಮಾಡಿದ್ದಾಳೆ. ವೈದ್ಯನ ಕಾರು ಮತ್ತು 4 ಸಾವಿರ ರೂಪಾಯಿಯನ್ನು ಕಸಿದುಕೊಂಡರು.

    ಮರುದಿನ ಕಾರನ್ನು ಹಿಂತಿರುಗಿಸಿ ಆತನಿಂದ 5 ಲಕ್ಷ ರೂ ಸುಲಿಗೆ ಮಾಡಿದರು. ಮತ್ತೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಾಗ ವೈದ್ಯರು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಬಳಿಕ ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

    ಬಿಜೆಪಿ ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪಲು ಕಾರಣವೇನು? ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು…

    ಕ್ರೀಡೆಯಲ್ಲೂ ಟಿಕೆಟ್ ಗೊಂದಲ; ಚಿನ್ನಸ್ವಾಮಿ ಕ್ರೀಡಾಂಗಣದ ಮುಂಬಾಗದಲ್ಲಿ RCB ನಾಮಜಪ!

    ಮರ್ಯಾದಾ ಹತ್ಯೆ; ಪ್ರೀತಿಯ ವಿಷಯ ತಿಳಿದು ಹೆಣ್ಣು ಮಕ್ಕಳಿಬ್ಬರನ್ನು ಕೊಂದೇ ಬಿಟ್ಟ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts