More

    ಒಂದೇ ಮನೆಯಲ್ಲಿ 2 ಕಾಳಿಂಗ ಸರ್ಪ, ಅದರಲ್ಲೊಂದು ದೈತ್ಯ ಹಾವು! ಎದೆ ಝಲ್​ ಎನಿಸುವ ವಿಡಿಯೋ ಇದು…

    ಲಖನೌ: ಮುರಳಿವಾಲೆ​ ಹೌಸ್ಲಾ, ಈತ ಉತ್ತರ ಪ್ರದೇಶದ ಜೌನ್​ಪುರದ ಖ್ಯಾತ ಉರಗ ರಕ್ಷಕ. 2000ದ ಇಸವಿಯಿಂದಲೂ ಹಾವುಗಳನ್ನು ರಕ್ಷಿಸಿಕೊಂಡು ಬರುತ್ತಿದ್ದಾರೆ. 22 ವರ್ಷದ ಅನುಭವದಲ್ಲಿ ಮುರಳಿವಾಲೆ ಅವರು ಒಂದೇ ಸಮಯದಲ್ಲಿ ಎರಡು ಕಾಳಿಂಗ ಸರ್ಪವನ್ನು ಎಂದಿಗೂ ರಕ್ಷಣೆ ಮಾಡಿಲ್ಲ. ಆದರೆ, ಇತ್ತೀಚೆಗೆ ಅವರು ಒಡಿಶಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎರಡು ಕಾಳಿಂಗ ಸರ್ಪಗಳನ್ನು ರಕ್ಷಣೆ ಮಾಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾರೆ.

    20 ನಿಮಿಷ 12 ಸೆಕೆಂಡ್​ ಉದ್ದದ ವಿಡಿಯೋದಲ್ಲಿ ಮುರುಳಿವಾಲೆ​ ಅವರು ತಮಗೆ ಒಡಿಶಾದ ನಿವಾಸಿ ಒಬ್ಬರಿಂದ ಮನೆಯಲ್ಲಿ ಎರಡು ಕಾಳಿಂಗ ಸರ್ಪ ಸೇರಿಕೊಂಡಿವೆ ಎಂದು ಕರೆ ಮಾಡಿದ್ದಾಗಿ ತಿಳಿಸಿದ್ದಾರೆ. ಕರೆ ಬಂದ ಹಿನ್ನೆಲೆಯಲ್ಲಿ ಒಡಿಶಾಗೆ ತೆರಳಿ ಕಾಳಿಂಗ ಸರ್ಪಗಳನ್ನು ಮುರಳಿವಾಲೆ​ ರಕ್ಷಣೆ ಮಾಡಿದ್ದಾರೆ. ಎರಡರಲ್ಲಿ ಹಾವು ಸಣ್ಣದು ಮತ್ತು ಇನ್ನೊಂದು ಹಾವು ದೊಡ್ಡದು. ಒಂದು ಹಾವು 4 ರಿಂದ 6 ಅಡಿ ಇದ್ದರೆ, ಇನ್ನೊಂದು ಹಾವು 8 ರಿಂದ 10 ಅಡಿ ಉದ್ದವಿದೆ.

    ಹಾವುಗಳನ್ನು ರಕ್ಷಿಸುವಾಗ, ಮುರಳಿವಾಲೆ ಅವರು ಹಾವುಗಳ ಬಗ್ಗೆ ಮತ್ತು ರಕ್ಷಣಾ ಪ್ರಕ್ರಿಯೆಯ ಬಗ್ಗೆ ಜನರಿಗೆ ನಿರಂತರವಾಗಿ ಎಚ್ಚರಿಸಿದರು. ಹಾವುಗಳನ್ನು ಕೊಲ್ಲದೆ, ಹಾವು ಹಿಡಿಯುವವರಿಗೆ ಕರೆ ಮಾಡಿ, ಯಾವುದೇ ಹಾನಿಯಾಗದಂತೆ ರಕ್ಷಿಸುವಂತೆ ಜನರಿಗೆ ಮನವಿ ಮಾಡಿದರು.

    ಮುರಳಿವಾಲೆ ಹಾವುಗಳನ್ನು ರಕ್ಷಿಸುವಾಗ ಒಂದು ಹಾವಿನ ತಲೆಯನ್ನು ಅದಕ್ಕೆ ತಿಳಿಯದೆ ಸ್ಪರ್ಶಿಸುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು ಆದರೆ, ಅದನ್ನು ಹಾವು ಅರಿತುಕೊಂಡಲೇ ತನ್ನ ಕೈಯನ್ನು ಹಿಂತೆಗೆದುಕೊಂಡರು. ತಮ್ಮ ಎಲ್ಲ ಕೌಶಲ್ಯ ಮತ್ತು ಅನುಭವವನ್ನು ಬಳಸಿದ ಮುರಳಿವಾಲೆ ಹಾವನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. (ಏಜೆನ್ಸೀಸ್​)

    ಯುವ ಪೀಳಿಗೆಯ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ: ಏಕ್ತಾ ಕಪೂರ್​ಗೆ ಸುಪ್ರೀಂ ಕೋರ್ಟ್​ ತರಾಟೆ

    ಭಾರಿ ಮಳೆಗೆ ಕೇಬಲ್​ ಬ್ರಿಡ್ಜ್​ ಕುಸಿತ: ದೂಧ್​ಸಾಗರ್ ಫಾಲ್ಸ್​ನಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ

    ರಷ್ಯಾ ಸೇನೆಯೊಂದಿಗೆ ನ್ಯಾಟೋ ಪಡೆಗಳ ನೇರ ಘರ್ಷಣೆ ಜಾಗತಿಕ ದುರಂತಕ್ಕೆ ಕಾರಣವಾಗಲಿದೆ: ಪುಟಿನ್ ಎಚ್ಚರಿಕೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts