More

    VIDEO| ಕಂಠಪೂರ್ತಿ ಕುಡಿದ ಯುವತಿಯಿಂದ ರಸ್ತೆಯಲ್ಲೇ ಹೈಡ್ರಾಮ: ಆಕೆಯ ಆಟಾಟೋಪಕ್ಕೆ ಯೋಧನೆ ಕಂಗಾಲು!

    ಭೋಪಾಲ್​: ಗುಂಡಿನ ಮತ್ತೆ ಗಮ್ಮತ್ತು…ಅಳತೆ ಮೀರಿದರೆ ಆಪತ್ತು ಎನ್ನುವಂತೆ ದೆಹಲಿ ಮೂಲದ ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಡಿದ್ದಲ್ಲದೆ, ವಾಹನ ನಿಬಿಡ ರಸ್ತೆಯ ಮಧ್ಯೆಯೇ ಸೇನಾ ವಾಹನವನ್ನು ತಡೆದು ಅದನ್ನು ಜಖಂಗೊಳಿಸಲು ಪ್ರಯತ್ನಿಸಿ ಹೈಡ್ರಾಮ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.

    22 ವರ್ಷದ ಯುವತಿ ಮಾಡೆಲ್​ ಎಂದು ತಿಳಿದುಬಂದಿದೆ. ಆಕೆ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?: ಸೇನಾ ವಾಹನವನ್ನು ತಡೆದು ಅದಕ್ಕೆ ಒರಗಿಕೊಂಡು ಫೋನ್​ನಲ್ಲಿ ಮಾತನಾಡುತ್ತಿರುತ್ತಾಳೆ. ಈ ವೇಳೆ ಎಷ್ಟೇ ಹಾರ್ನ್​ ಮಾಡಿದರೂ ಆಕೆ ದಾರಿಯನ್ನು ಬಿಡುವುದಿಲ್ಲ. ಕಾರಿನ ಎದುರಿಗೆ ತಿರುಗಿ ಒಳಗೆ ಕುಳಿತಿದ್ದ ಯೋಧನನ್ನು ನಿಂದಿಸಲು ಶುರು ಮಾಡುತ್ತಾಳೆ. ಬಳಿಕ ಮಾತನಾಡುವುದನ್ನು ಮುಂದುವರಿಸುತ್ತಲೇ ಸೇನಾ ಕಾರಿಗೆ ಕಾಲಿನಿಂದ ಒದೆಯುತ್ತಾಳೆ. ಈ ವೇಳೆ ಅವಳ ಬ್ಯಾಗ್​ನಿಂದ ಒಂದು ಮದ್ಯದ ಬಾಟಲ್​ ರಸ್ತೆ ಬಿದ್ದು ಚೂರಾಗುತ್ತದೆ. ಅದನ್ನು ಗಮನಿಸಿದ ಮಾಡೆಲ್​, ಕಾರು ಒದೆಯುವುದನ್ನು ಮುಂದುವರಿಸುತ್ತಾಳೆ. ಅದನ್ನು ನೋಡಿ ಕಾರಿನ ಒಳಗಿದ್ದ ಯೋಧ ಕೆಳಗಿಳಿದು ಬರುತ್ತಾರೆ. ಆದರೆ, ಅವರಿಗೂ ಕ್ಯಾರೆ ಎನ್ನದ ಯುವತಿ, ಯೋಧನನ್ನು ನೂಕುತ್ತಾಳೆ. ಕೊನೆಗೆ ದಾರಿ ಬಿಡುತ್ತಾಳೆ.

    ಯುವತಿ ಹೈಡ್ರಾಮವನ್ನು ದಾರಿಹೋಕರು ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಯುವತಿಯನ್ನು ಘಟನಾ ನಂತರ ಸ್ಥಳೀಯ ಪೊಲೀಸ್​​ ಠಾಣೆಯ ಕಾನ್ಸ್​ಟೇಬಲ್​ ಒಬ್ಬರು ಠಾಣೆಗೆ ಕರೆದೊಯ್ದರು ಎಂಬ ಮಾಹಿತಿ ಇದೆ. ಆಕೆ ಪಾನಮತ್ತಳಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದ್ದು, ಅಬಕಾರಿ ಕಾಯ್ದೆಯನ್ನು ಸೂಕ್ತ ಸೆಕ್ಷನ್​ ಅಡಿಯಲ್ಲಿ ಆಕೆಯ ಮೇಲೆ ಪ್ರಕರಣ ದಾಖಲಿಸಿಲಾಗಿದೆ. ಇದಾದ ಬೆನ್ನಲ್ಲೇ ಜಾಮೀನಿನ ಮೇಲೆ ಆಕೆಯನ್ನು ಬಿಟ್ಟು ಕಳುಹಿಸಲಾಗಿದೆ.

    ಯೋಧನಿಂದ ಇಲ್ಲಿಯವರೆಗೆ ಆಕೆಯ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಯುವತಿ ದೆಹಲಿ ಮೂಲದ ಮಾಡೆಲ್​ ಆಗಿದ್ದು, ತನ್ನ ಇಬ್ಬರು ಫ್ರೆಂಡ್ಸ್​ ಜತೆ ಗ್ವಾಲಿಯರ್​ಗೆ ಭೇಟಿ ನೀಡಿದ್ದಳು. ಈ ಸಂದರ್ಭದಲ್ಲಿ ಈ ಹೈಡ್ರಾಮ ನಡೆದಿದೆ. (ಏಜೆನ್ಸೀಸ್​)

    ಡ್ರಾಪ್​ ಕೇಳಿದಳೆಂದು ಬೈಕ್​ ನಿಲ್ಲಿಸಿದ ಯುವಕ: ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಶಾಕ್​ ಕೊಟ್ಟ ಯುವತಿ!

    VIDEO| ಇಳಿವಯಸ್ಸಿನಲ್ಲಿ ಬುಲೆಟ್ಟು ಬಂಡಿ ಹಾಡಿಗೆ ಹೆಜ್ಜೆ ಹಾಕಿ ಗಂಡನನ್ನು ರಂಜಿಸಿದ ಅಜ್ಜಿ

    ಗಣೇಶ ಹಬ್ಬದಂದೇ ಮೆಗಾಸ್ಟಾರ್​ ಕುಟುಂಬಕ್ಕೆ ಶಾಕ್​: ಭೀಕರ ಅಪಘಾತದಿಂದ ನಟ ಸಾಯಿ ಧರಮ್​ ತೇಜ್ ಸ್ಥಿತಿ ಗಂಭೀರ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts