More

    ಪ್ರಕೃತಿ ಮಾತೆ ಇಲ್ಲದ ಜೀವನ ಏನೂ ಅಲ್ಲ…ಹೀಗಂದ ಮರುಕ್ಷಣವೇ ಪ್ರಕೃತಿ ವಿಕೋಪಕ್ಕೆ ಯುವ ವೈದ್ಯೆ ಬಲಿ!

    ನವದೆಹಲಿ: ಮಾನವನ ಜೀವ ನೀರಿನ ಮೇಲಿನ ಗುಳ್ಳೆಯಿದ್ದಂತೆ ಎಂಬ ಮಾತು ಅಕ್ಷರಶಃ ಸತ್ಯ. ಸಾವು ಯಾವಾಗ, ಯಾವ ರೀತಿ ಬರುತ್ತದೆ ಎಂದು ಊಹಿಸಲಾಗದು. ನಗು ನಗುತ್ತಲೇ ಕೊನೆಯುಸಿರೆಳೆದಿರವವರನ್ನು ನೋಡಿ ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ ಎಂದು ಶಪಿಸಿದ್ದು ಉಂಟು. ಕಣ್ಣ ಮುಂದೆ ಸುರಕ್ಷಿತವಾಗಿ, ಸಂತೋಷವಾಗಿ ಇರುವವರು ಮರು ಘಳಿಗೆ ದುರಂತ ಸಾವಿಗೀಡಾಗಿದಾಗ ದೇವರಿಗೆ ಹಿಡಿಶಾಪ ಹಾಕುವುದನ್ನು ನೋಡಿದ್ದೇವೆ. ಇದೇ ರೀತಿಯ ದುರಂತ ಘಟನೆ ನಿನ್ನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

    ಪ್ರವಾಸಿ ತಾಣಗಳ ರಾಜ್ಯವಾಗಿರುವ ಹಿಮಾಚಲ ಪ್ರದೇಶದಲ್ಲಿ ಭಾನುವಾರದಂದು ಘನ ಘೋರ ದುರಂತ ಸಂಭವಿಸಿದೆ. ಗುಡ್ಡದ ಮೇಲ್ಭಾಗದಲ್ಲಿದ್ದ ಕಲ್ಲು ಬಂಡೆಗಳು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು, ಅದರಿಂದಾಗಿ ಸೇತುವೆಯೂ ಮುರಿದುಬಿದ್ದಿದೆ. ಘಟನೆಯಲ್ಲಿ 9 ಪ್ರವಾಸಿಗರು ಬಲಿಯಾಗಿದ್ದಾರೆ.

    ಸಾಂಗ್ಲಾ ಕಣಿವೆಯಲ್ಲಿ ಈ ಘಟನೆ ನಡೆದಿದೆ. ಸೇತುವೆಯ ಬಳಿ ಪ್ರವಾಸಿಗರ ವಾಹನಗಳಿದ್ದವು. ಅದರ ಮೇಲೆ ಬಂಡೆ ಉರುಳಿ ಬಿದ್ದಿದ್ದರಿಂದಾಗಿ 11 ಪ್ರವಾಸಿಗರಿಗೆ ಗಾಯವಾಗಿದೆ. ಅದರಲ್ಲಿ 9 ಪ್ರವಾಸಿಗರು ಸಾವಿಗೀಡಾಗಿದ್ದಾರೆಂದು ಅಲ್ಲಿನ ಎಸ್​ಪಿ ಕಿನ್ನೌರ್ನ ಸಾಜು ರಾಮ್ ರಾಣಾ ತಿಳಿಸಿದ್ದಾರೆ.

    ಮೃತ ಒಂಬತ್ತು ಮಂದಿಯಲ್ಲಿ ಜೈಪುರ ಮೂಲದ ಆಯುರ್ವೆದ ಡಾಕ್ಟರ್​ ದೀಪಾ ಶರ್ಮಾ ಕೂಡ ಒಬ್ಬರು. ಸಾವಿಗೂ ಕೆಲವೇ ಕ್ಷಣಗಳ ಹಿಂದೆ ಟ್ವೀಟ್​ ಮಾಡಿದ್ದ ದೀಪಾ, “ನಾಗರಿಕರಿಗೆ ಅವಕಾಶವಿರುವ ಭಾರತದ ಕೊನೆಯ ಕೇಂದ್ರದಲ್ಲಿ ನಿಂತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

    34 ವರ್ಷದ ದೀಪಾ ಅವರ ಟ್ವಿಟರ್​ ತುಂಬಾ ಹಿಮಾಚಲ ಪ್ರದೇಶದ ಭೇಟಿಯ ಚಿತ್ರಗಳೇ ತುಂಬಿವೆ. ನಾಗಸ್ಟಿ ಐಟಿಬಿಪಿ ಚೆಕ್​ಪೋಸ್ಟ್​ ಬಳಿ ನಿಂತು ಕ್ಯಾಮೆರಾಗೆ ಪೋಸ್​​ ನೀಡಿರುವ ಫೋಟೋವನ್ನು ಭಾನುವಾರ ಮಧ್ಯಾಹ್ನ 12.59ಕ್ಕೆ ಪೋಸ್ಟ್​ ಮಾಡಿದ್ದಾರೆ.

    ಸಾಂಗ್ಲಾ-ಚಿಟ್ಕುಲ್​ ರಸ್ತೆಯ ಬಸ್ತೇರಿ ಬಳಿ ಮಧ್ಯಾಹ್ನ 1.25ರ ಸುಮಾರಿಗೆ ಅನೇಕ ಭೂಕುಸಿತಗಳು ಸಂಭವಿಸಿವೆ. ದೀಪಾ ಅವರು ತಮ್ಮ ಪ್ರಯಾಣದ ಫೋಟೋಗಳನ್ನು ಶೇರ್​ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ದುರಂತ ಸಂಭವಿಸಿದೆ. ಎತ್ತರ ಬೆಟ್ಟದಿಂದ ಬಂಡೆಗಳು ನೆಲಕ್ಕೆ ಉರುಳಿದವು. ಬೃಹತ್​ ಗಾತ್ರದ ಬಂಡೆಗಳ ವೇಗಕ್ಕೆ ದಾರಿಯಲ್ಲಿ ಸಿಕ್ಕ ವಸ್ತುಗಳೆಲ್ಲ ಪುಡಿ ಪುಡಿಯಾದವು. ಒಂದು ಬಂಡೆ ನೇರವಾಗಿ ಸೇತುವೆ ಬಡಿದ ಪರಿಣಾಮ ಕ್ಷಣಾರ್ಧದಲ್ಲೇ ಸೇತುವೆ ಉರುಳಿತು. ಈ ದೃಶ್ಯ ಪ್ರವಾಸಿಗರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್​ ಎನ್ನುವಂತಿದೆ.

    ಪ್ರಕೃತಿ ತಾಯಿಯಿಲ್ಲದ ಜೀವನ ಏನೇನೂ ಅಲ್ಲ ಎಂದು ದೀಪಾ ಬರೆದುಕೊಂಡಿದ್ದಾರೆ. ಆದರೆ, ಅದೇ ಪ್ರಕೃತಿ ವಿಕೋಪದ ಮಡಿಲಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಯುವ ವೈದ್ಯೆಯ ಸಾವಿಗೆ ಅನೇಕ ಮಂದಿ ಕಂಬನಿ ಮಿಡಿದಿದ್ದಾರೆ.

    ಪ್ರಧಾನಿ ಮೋದಿ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಅವರು ಮೃತರ ಸಾವಿಗೆ ಸಾಂತ್ವಾನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂ ಮತ್ತು ಗಾಯಗೊಂಡವರ ಚಿಕಿತ್ಸೆಗೆ 50 ಸಾವಿರ ರೂ. ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. (ಏಜೆನ್ಸೀಸ್​)

    ಇದ್ದಕ್ಕಿದ್ದಂತೆ ಗುಡ್ಡದಿಂದ ಕುಸಿದ ಬಂಡೆಗಳು; ಸೇತುವೆ ಮುರಿದುಬಿದ್ದು 9 ಸಾವು!

    ಮತ್ತೆ ಚಂದನವನಕ್ಕೆ ಬರ್ತಾರಾ ತ್ರಿಷಾ? ಪುನೀತ್ ‘ದ್ವಿತ್ವ’ಕ್ಕೆ ನಾಯಕಿಯಾಗ್ತಾರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts