More

    ಬಂಧನ ವೇಳೆ ಕೂಗಾಡಿ, ಕಣ್ಣೀರಿಟ್ಟು ನಟಿಯ ಹೈಡ್ರಾಮ: ಚೆನ್ನೈ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ ಮೀರಾ!

    ಚೆನ್ನೈ: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕಾಲಿವುಡ್​ ನಟಿ ಮೀರಾ ಮಿಥುನ್ ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದು, ಸಾಕಷ್ಟು ಆಕ್ರೋಶಗಳ ಬೆನ್ನಲ್ಲೇ ಆಕೆಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬೆನ್ನಲ್ಲೇ ನಟಿ ಮೀರಾ, ಕೂಗಾಡಿ ಹೈಡ್ರಾಮ ಸೃಷ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಕೇರಳದಲ್ಲಿ ಅವಿತು ಕುಳಿತಿದ್ದ ಮೀರಾಳನ್ನು ಪೊಲೀಸರು ಶನಿವಾರ ಬಂಧಿಸಿ ಚೆನ್ನೈಗೆ ಕರೆತಂದಿದ್ದಾರೆ. ಬಂಧನದ ವೇಳೆ ತುಂಬಾ ಕೂಗಾಡಿರುವ ಮೀರಾ, ಚೆನ್ನೈ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮೊಬೈಲ್​ ಹಸ್ತಾಂತರಿಸುವಂತೆ ಕೇಳುತ್ತಿದ್ದಾರೆ. ನನ್ನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿರುವ ಮೀರಾ, ನನ್ನನ್ನು ಉಳಿಸಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿಕೊಂಡಿದ್ದಾರೆ.

    ನನ್ನ ಬಂಧಿಸುವುದು ಕನಸಷ್ಟೇ…
    ಮೀರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಚೆನ್ನೈ ಪೊಲೀಸರು ಮೀರಾಗೆ ಸಮನ್ಸ್​ ಕಳುಹಿಸಿದ್ದರು. ಈ ವೇಳೆ ಮೊದಲು ವಿಡಿಯೋ ಬಿಡುಗಡೆ ಮಾಡಿದ್ದ ಮೀರಾ, ನನ್ನ ಸೌಜನ್ಯಯುತವಾಗಿ ಬಂಧಿಸಿ ಎಂದಿದ್ದರು. ಗಾಂಧಿ ಮತ್ತು ನೆಹರು ಏಕೆ ಜೈಲಿಗೆ ಹೋಗಲಿಲ್ಲ ಎಂದು ಪ್ರಶ್ನಿಸಿದ್ದರು. ನನ್ನನ್ನು ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದ ಮೀರಾ, ಬಂಧಿಸುತ್ತಾರೆ ಅಂತಾ ಯಾರಾದರೂ ಭಾವಿಸಿದ್ದರೆ, ಅದು ನಿಮ್ಮ ಕಸನು ಎಂದು ಹೇಳಿದ್ದರು.

    ಏನಿದು ಪ್ರಕರಣ?
    ಆಗಸ್ಟ್​ 7ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿರುವ ವಿಡಿಯೋದಲ್ಲಿ ದಲಿತ ಸಮುದಾಯದ ಬಗ್ಗೆ ಮೀರಾ ಕೆಲ ಅವಹೇಳಕಾರಿ ಮಾತುಗಳನ್ನು ಆಡಿದ್ದಾರೆ. ಸಿನಿಮಾ ಫಸ್ಟ್​ ಲುಕ್​ಗೆ ಬಳಸಿಕೊಳ್ಳಲು ನಿರ್ದೇಶಕರೊಬ್ಬರು ನನ್ನ ಫೋಟೋವನ್ನು ಕದ್ದಿದ್ದರು ಎಂದು ಮಾತು ಆರಂಬಿಸಿದ್ದ ಮೀರಾ, ಇದಾದ ಬಳಿಕ ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ದಲಿತ ಸಮುದಾಯದವರು ಅಪರಾಧ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹೀಗಾಗಿ ಅವರು ಸಮಾಜದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿರುವ ದಲಿತ ಸಮುದಾಯದ ನಿರ್ದೇಶಕರು ಮತ್ತು ಜನರನ್ನು ಹೊರಗಾಕಬೇಕೆಂದು ಹೇಳಿದ್ದರು.

    ಎಲ್ಲೆಡೆ ತೀವ್ರ ಆಕ್ರೋಶ?
    ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ, ತಮಿಳುನಾಡಿನ ದಲಿತ ಕೇಂದ್ರಿತ ಪಕ್ಷ ವಿದುತಲೈ ಸಿರುತೈಗಲ್ ಕಚ್ಚಿ ನಾಯಕ ವನ್ನಿ ಅರಸ್​ ಅವರು ನಟಿ ಮೀರಾ ಮಿಥುನ್​ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೆ, ಮೀರಾ ವಿರುದ್ಧ ಚೆನ್ನೈ, ಕೊಯಮತ್ತೂರು ಮತ್ತು ಈರೋಡ್​ ಸೇರಿದಂತೆ ಒಟ್ಟು ಏಳು ಜಿಲ್ಲೆಗಳ ವಿವಿಧ ಪೊಲೀಸ್​ ಠಾಣೆಗಳಲ್ಲಿ ದೂರು ದಾಖಲಾಗಿದೆ. ಇದರಿಂದಿಗೆ ನಟಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅನೇಕ ನೆಟ್ಟಿಗರು ಸಹ ಒತ್ತಾಯ ಮಾಡಿದ್ದರು.

    ನಟಿಯ ಮೇಲೆ ಭಾರತೀಯ ದಂಡ ಸಂಹಿತೆಯ​ 153, 153ಎ (1) (ಎ), 505 (1) (ಬಿ), 505 (2) ಸೆಕ್ಷನ್ ಸೇರಿದಂತೆ SC/ST ದೌರ್ಜನ್ಯ ತಡೆ ಕಾಯ್ದೆ ಅಡಿಯ ಅನೇಕ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಿನಿಮಾ ವಿಚಾರಕ್ಕೆ ಬರುವುದಾರೆ, ಮೀರಾ ಕೆಲ ತಮಿಳು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಬಿಗ್​ಬಾಸ್​ 3ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ವಿಜಯ್​ ಹಾಗೂ ಸೂರ್ಯ ಸೇರಿದಂತೆ ಅನೇಕ ನಟರ ವಿರುದ್ಧವೂ ನಾಲಿಗೆ ಹರಿಬಿಡುವ ಮೂಲಕ ಹಿಂದೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. (ಏಜೆನ್ಸೀಸ್​)

    ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟ ವಿವಾದಿತ ನಟಿ ಮೀರಾ ಮಿಥುನ್​ ಬಂಧನ..!

    ಗಾಂಧಿ, ನೆಹರು ಯಾಕೆ ಜೈಲಿಗೆ ಹೋಗ್ಲಿಲ್ಲ? ನನ್ನನ್ನು ಬಂಧಿಸಲು ಯಾರಿಂದ್ಲೂ ಸಾಧ್ಯವಿಲ್ಲ ಎಂದ ನಟಿ ಮೀರಾ!

    ಇವರೆಲ್ಲಾ ಯಾಕೆ ನನ್ನ ಹಿಂದೆ ಬಿದ್ದಿದ್ದಾರೆ? ಮೀರಾ ಮಿಥುನ್​ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts