More

    ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಪ್ರಕರಣ: ಕೋರ್ಟ್​ ಮೆಟ್ಟಿಲೇರಿದ ಇಡೀ ಕುಟುಂಬ​

    ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಗೊಂಡಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕುಟುಂಬ ಸಮೇತ ಎಸ್ಕೇಪ್​ ಆಗಿರುವ ಆರೋಪಿಗಳು ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.

    ಮಹಾಲಕ್ಷ್ಮೀ ಲೇಔಟ್ ಪೊಲೀಸರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಇತ್ತ ಬಂಧನ ಭೀತಿಯಿಂದ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗಿದ್ದಾರೆ. ಸೌಂದರ್ಯ ಜಗದೀಶ್, ಪತ್ನಿ ರೇಖಾ, ಪುತ್ರ ಸ್ನೇಹಿತ್ ಮತ್ತು ಬೌನ್ಸರ್​​ಗಳಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗಿದೆ. ಒಟ್ಟು ಎಂಟು ಮಂದಿ ಆರೋಪಿಗಳಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗಿದೆ.

    ನಿನ್ನೆ ಸಿಸಿಎಚ್ 46ರ ನ್ಯಾಯಾಲಯಕ್ಕೆ ಆರೋಪಿಗಳು ಅರ್ಜಿ ಸಲ್ಲಿಸಿದ್ದು, ಇಂದು ಜಾಮೀನಿನ ಅರ್ಜಿ ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ಬರುವ ಸಾಧ್ಯತೆ ಇದೆ.

    ಶನಿವಾರ ಸಂಜೆ ಉದ್ಯಮಿ ಮಂಜುಳಾ ಪುರುಷೋತ್ತಮ್ ಎಂಬವರ ಮನೆ ಕೆಲಸವರಾದ ನೀಲಮ್ಮ ಮತ್ತು ಅವರ ಪುತ್ರಿ ಅನುರಾಧಾ ಮೇಲೆ ನಟ ಸ್ನೇಹಿತ್​ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನೀಲಮ್ಮ ಮತ್ತು ಅನುರಾಧಾ ಹೊರಗಡೆ ಮನೆ ಸ್ವಚ್ಛಗೊಳಿಸುತ್ತಿದ್ದಾಗ ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಮನೆ ಸಿಬ್ಬಂದಿಗೆ ಕಸ ತಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಬಳಿಕ ಸೌಂದರ್ಯ ಜಗದೀಶ್ ಅವರ ಪುತ್ರ, ನಟನೂ ಆಗಿರುವ ಮಾಸ್ಟರ್ ಸ್ನೇಹಿತ್, ಆತನ ತಾಯಿ ರೇಖಾ ಜಗದೀಶ್ ಮತ್ತು ಭದ್ರತಾ ಸಿಬ್ಬಂದಿ ಸೇರಿ ಕೆಲಸದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಥರ ಗಲಾಟೆ ಹೊಸದೇನಲ್ಲ. ಈ ಹಿಂದೆಯೂ ಮಾಸ್ಟರ್ ಸ್ನೇಹಿತ್ ಮತ್ತು ಸ್ನೇಹಿತರಿಂದ ಪುಂಡಾಟಿಕೆ ನಡೆದಿದ್ದು, ಇದು ಮೂರನೇ ಸಲ ಎನ್ನಲಾಗಿದೆ. ಈ ಪ್ರಕರಣ ಇದೀಗ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. (ದಿಗ್ವಿಜಯ ನ್ಯೂಸ್​)

    ಫೇಸ್​ಬುಕ್​ ನೋಡ್ತಿದ್ದ ಬಾಹುಬಲಿ ಸಿನಿಮಾ ನಟಿಗೆ ಬಿಗ್​ ಶಾಕ್​! ಲೈಂಗಿಕತೆಯ ಭರವಸೆ ನೆಪದಲ್ಲಿ ನೀಚ ಕೃತ್ಯ

    11 ಆಟಗಾರರಿರುವ ತಂಡದಲ್ಲಿ ಮುಸ್ಲಿಂನನ್ನೇ ಟಾರ್ಗೆಟ್​ ಮಾಡುತ್ತಿರುವುದೇಕೆ? ಅಸಾದುದ್ದೀನ್​ ಓವೈಸಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts