More

    ವಿವಾಹಿತೆಯನ್ನು ಅಪಹರಿಸಿ 20 ದಿನ ಟ್ರಕ್​ನಲ್ಲಿಟ್ಟು ರೇಪ್​: ಕಾಮಾಂಧ ಯುವಕರ ಅಟ್ಟಹಾಸ ಬಿಚ್ಚಿಟ್ಟ ಸಂತ್ರಸ್ತೆ!

    ನಯಾಗಢ: ವಿವಾಹಿತೆಯನ್ನು ಅಪಹರಿಸಿ ಸುಮಾರು 21 ದಿನಗಳವರೆಗೆ ಟ್ರಕ್​ ಕ್ಯಾಬಿನ್​ ಒಂದರಲ್ಲಿ ನಿರಂತವಾಗಿ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಒಡಿಶಾದ ಬಾಲಾಸೋರ್​ ಜಿಲ್ಲೆಯಲ್ಲಿ ನಡೆದಿದೆ.

    ಇದೀಗ ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ನಯಾಗಢದ ಫತೇಗಢ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯನ್ನು ಆಕೆಯ ಪತಿ ಮನೆಗೆ ಕರೆದೊಯ್ದಿದ್ದಾನೆ.

    ಮೂಲಗಳ ಪ್ರಕಾರ ಸಂತ್ರಸ್ತ ವಿವಾಹಿತೆ ಪದವಿ ಪೂರ್ವ ವಿದ್ಯಾರ್ಥಿನಿಯು ಹೌದು. ತನ್ನ ಪತಿ ಮತ್ತು ಐದು ವರ್ಷದ ಮಗು ಹಾಗೂ ಆಕೆಯ ಸಹೋದರಿಯೊಂದಿಗೆ ಬಾಲಾಸೋರ್​ ಜಿಲ್ಲೆ ಜಲೇಸ್ವರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಖುಲುದಾ ಏರಿಯಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಟ್ಟಿಗೆ ವಾಸವಿದ್ದರು.

    ಮಾರ್ಚ್​ 24ರಂದು ಸಂತ್ರಸ್ತೆ ಕೆಲವು ಪ್ರಮುಖ ದಾಖಲೆಗಳ ನಕಲು ಪ್ರತಿಗಳನ್ನು ತೆಗೆದುಕೊಳ್ಳಲೆಂದು ಹತ್ತಿರದ ಜೆರೆಕ್ಸ್​ ಶಾಪ್​ಗೆಂದು ತೆರಳಿದ್ದಾರೆ. ಈ ವೇಳೆ ಎಸ್​ಯುವಿ ಕಾರಿನಲ್ಲಿ ಬಂದವರು ಆಕೆಯನ್ನು ನಿಲ್ಲಿಸಿದ್ದಾರೆ. ಅದರಲ್ಲೊಬ್ಬ ವಿಳಾಸ ಕೇಳಿದ್ದಾನೆ. ಆಕೆ ಮಾತನಾಡುವಾಗ ಮತ್ತೊಬ್ಬ ವಾಹನದ ಬಾಗಿಲನ್ನು ದಿಢೀರನೇ ತೆಗೆದಿದ್ದಾನೆ. ಅದು ಆಕೆಯ ತಲೆಗೆ ಬಡಿದ ತಕ್ಷಣ ಪ್ರಜ್ಞೆ ತಪ್ಪಿದ್ದಾಳೆ.

    ಇದನ್ನೂ ಓದಿರಿ: ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೊರಟ್ಟಿದ್ದವರ ಕಾರು ಭೀಕರ ಅಪಘಾತ! ಸ್ಥಳದಲ್ಲೇ ಇಬ್ಬರ ಸಾವು, ಐವರ ಸ್ಥಿತಿ ಗಂಭೀರ

    ಮತ್ತೆ ಅವಳಿಗೆ ಪ್ರಜ್ಞೆ ಬಂದಾಗ ನಯಾಗಢ ಜಿಲ್ಲೆಯ ಟ್ರಕ್​ ಸ್ಟೇಷನ್​ನ ಟ್ರಕ್​ ಕ್ಯಾಬಿನ್​ ಒಂದರಲ್ಲಿ ಬೆತ್ತಲೆಯಾಗಿದ್ದಳು. ಸಹಾಯಕ್ಕಾಗಿ ಕೂಗಿಕೊಂಡಾಗ 25 ಮತ್ತು 30 ವರ್ಷದ ಯುವಕರಿಬ್ಬರು ತಮ್ಮ ಮಾತನ್ನು ಕೇಳದಿದ್ದರೆ ಕೊಲ್ಲುವುದಾಗಿ ಆಕೆಯನ್ನು ಬೆದರಿಸಿದ್ದಾರೆ. ಹೆದರಿದ ಮಹಿಳೆ ಸುಮ್ಮನಾಗಿದ್ದಾಳೆ. ಇದಾದ ಬಳಿಕ ಇಬ್ಬರು ಸೇರಿಕೊಂಡು ಸುಮಾರು 20 ದಿನಗಳು ಕಾಲ ಆಕೆಯನ್ನು ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ.

    ಯುವಕರಿಬ್ಬರು ಒಮ್ಮೆ ಊಟಕ್ಕೆಂದು ಹೋಟೆಲ್​ಗೆ ತೆರಳಿದಾಗ ಆಕೆ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಟ್ರಕ್​ನ ಒಂದು ಬಾಗಿಲು ಮುಚ್ಚದೇ ಇರುವುದನ್ನು ನೋಡಿ ಬಹಳ ಎಚ್ಚರಿಕೆಯಿಂದ ಕೆಳಗೆ ಇಳಿದು ಅಲ್ಲಿಂದ ಪರಾರಿಯಾಗಿದ್ದಾಳೆ. ಸುಮಾರು 5 ಕಿ.ಮೀ ದೂರ ನಡೆದು ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿದ್ದಾಳೆ.

    ಇದಾದ ಬಳಿಕ ಮಹಿಳೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಫತೇಗಢ ಪೊಲೀಸರು ಗಂಡನ ವಿಳಾಸ ಪಡೆದು ಮಾಹಿತಿ ನೀಡಿದಾಗ ಠಾಣೆಗೆ ಬಂದ ಆತ ಪತ್ನಿಯನ್ನು ಜತೆಗೆ ಕರೆದೊಯ್ದಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಟರಿಗಾಗಿ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಾಲ್ಕನಿಯಲ್ಲಿ ಬೆತ್ತಲಾದ ಮಾಡೆಲ್​ಗಳಿಗೆ​ ಶಾಕ್​ ಕೊಟ್ಟ ದುಬೈ: ಮುಂದಿನ 5 ವರ್ಷ ಈ ಷರತ್ತು ಅನ್ವಯ!

    ಮನೆಯ ಮುಖ್ಯದ್ವಾರದ ಚಿಲಕಕ್ಕೆ ಕಟ್ಟಿದ್ದ ಪತ್ರದಲ್ಲಿನ ಭಾಷೆ ನೋಡಿ ಬೆಚ್ಚಿಬಿದ್ದ ಕುಟುಂಬ!

    ಹಿಮೋಫಿಲಿಯಾ ಭಯ; ಕಾಯಿಲೆ ಬಂದರೆ ಪಡೆಯಬೇಕು ತಿಂಗಳಿಗೆರಡು ಬಾರಿ ಹೊಸ ರಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts