More

    ರಾಜ್ಯದ ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆ: ಕಾಂಗ್ರೆಸ್​, ಜೆಡಿಎಸ್​ ಪಾಳಯದಲ್ಲಿ ಹೆಚ್ಚಿದ ಆತಂಕ

    ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಪೂರ್ವ ಚಟುವಟಿಕೆ ಆರಂಭವಾಗಿದ್ದು, ಘಟಾನುಘಟಿ ನಾಯಕರ ಪಕ್ಷಾಂತರ ಪರ್ವ ಜೋರಾಗಿದೆ. ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷದ ನಾಯಕರು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಇಂದು ಸಮರೋಪಾದಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

    ಮಾಜಿ ಸಚಿವ ವರ್ತೂರು ಪ್ರಕಾಶ್​, ಉಡುಪಿಯ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್​, ಜೆಡಿಎಸ್​ ನಾಯಕ, ವಿಧಾನ ಪರಿಷತ್​ ಮಾಜಿ ಸದಸ್ಯ ಹಾಗೂ ಸಿನಿಮಾ ನಿರ್ಮಾಪಕ ಸಂದೇಶ್​ ನಾಗರಾಜು, ಮಾಲೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್​ ನಾಯಕ ಕೆ.ಎಸ್​. ಮಂಜುನಾಥ್​ ಗೌಡ​ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹಾಗೂ ಹಲವು ಸಚಿವರ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರ್ಪಡೆಗೊಂಡರು.

    ಇದಿಷ್ಟೇ ಅಲ್ಲದೆ, ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್​ ನಾಯಕ ಕೆ.ಬಿ. ಕೃಷ್ಣಮೂರ್ತಿ, ಜೆಡಿಎಸ್​ನ ಮಂಡ್ಯ ಜಿಲ್ಲಾ ಮುಖಂಡರಾದ ಅಶೋಕ್ ಜಯರಾಮ್ ಹಾಗೂ ಮಾಜಿ ಐಆರ್‍ಎಸ್ ಅಧಿಕಾರಿ ಮತ್ತು ಜೆಡಿಎಸ್​ ಮುಖಂಡೆ ಡಾ. ಲಕ್ಷ್ಮೀ ಅಶ್ವಿನ್‍ಗೌಡ ಅವರು ಬಿಜೆಪಿ ಸೇರಿದರು.

    ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದ್ದು, ಘಟಾನುಘಟಿ ನಾಯಕರು ಬಿಜೆಪಿಗೆ ಮಹಾ ವಲಸೆ ಬರುತ್ತಿರುವುದರಿಂದ ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ಈಗಾಗಲೇ ಬಿಜೆಪಿ ಚುನಾವಣಾ ಸಿದ್ಧತೆಯನ್ನು ಆರಂಭಿಸಿದ್ದು, ಇತರೆ ಪಕ್ಷದ ನಾಯಕರನ್ನು ಬರ ಮಾಡಿಕೊಳ್ಳುವ ಮೂಲಕ ಮುಂದಿನ ಚುನಾವಣೆಗೆ ಬಲಿಷ್ಠವಾಗುತ್ತಿದೆ. ಇತ್ತ ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಂದೇನು ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ.

    ರಾಜ್ಯದ ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆ: ಕಾಂಗ್ರೆಸ್​, ಜೆಡಿಎಸ್​ ಪಾಳಯದಲ್ಲಿ ಹೆಚ್ಚಿದ ಆತಂಕ

    ಐಪಿಎಲ್​ ವಿರುದ್ಧ ಗಂಭೀರ ಆರೋಪ ಮಾಡಿ ಅಸಮಾಧಾನ ಹೊರಹಾಕಿದ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್!

    ಡಿಎಂಕೆ ಸರ್ಕಾರಕ್ಕೆ 1 ವರ್ಷ: ಸರ್ಕಾರಿ ಬಸ್​ ಏರಿ ಸರ್ಪ್ರೈಸ್​ ಕೊಟ್ಟ ತಮಿಳುನಾಡು ಸಿಎಂ ಸ್ಟಾಲಿನ್​!

    ಕಾಂಗ್ರೆಸ್​ಗೆ ಪ್ರಮೋದ್​ ಮಧ್ವರಾಜ್​ ರಾಜೀನಾಮೆ: ಉಸಿರುಗಟ್ಟುವಿಕೆ ವಾತಾವರಣದಿಂದ ಕೆಟ್ಟ ಅನುಭವ ಎಂದು ಪತ್ರದಲ್ಲಿ ಉಲ್ಲೇಖ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts