More

    ಕೆರೆ ಕೋಡಿ ಬಿದ್ದು ಕೊಚ್ಚಿ ಹೋದ ರಸ್ತೆ: ಮಂಡ್ಯದ 6 ಗ್ರಾಮಗಳಿಗೆ ಸಂಪರ್ಕ ಕಡಿತ, ಪ್ರವಾಹದ ನೀರಲ್ಲಿ ಜನರ ದುಸ್ಸಾಹಸ

    ಮಂಡ್ಯ: ವರುಣನ ಆರ್ಭಟಕ್ಕೆ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಕೆರೆ ಕೋಡಿ ಬಿದ್ದ ಪರಿಣಾಮ ರಸ್ತೆ ಕೊಚ್ಟಿ ಹೋಗಿ ಆರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

    ಕೆ.ಆರ್‌.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿಯಲ್ಲಿ ಘಟನೆ ನಡೆದಿದೆ. ರಸ್ತೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. 4 ಕಿಮೀ ದೂರದ ಕೆ.ಆರ್.ಪೇಟೆ ತಲುಪಲು ಹತ್ತು ಕಿ.ಮೀ. ಕ್ರಮಿಸಬೇಕಾದ ದುಸ್ಥಿತಿ ಎದುರಾಗಿದೆ.

    ಬಳಸಿಕೊಂಡು ಹೋಗುವ ಬದಲು ಕೆರೆ ಕೋಡಿಯಿಂದ ಬರುತ್ತಿರುವ ಪ್ರವಾಹದ ನೀರಿನಲ್ಲೇ ಜನರು ಸರ್ಕಸ್ ಮಾಡುವ ಮೂಲಕ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಸ್ವಲ್ಪ ಯಾಮಾರಿದ್ರು ನೀರುಪಾಲಾಗುವ ಸಾಧ್ಯತೆ ಇದೆ. ಪಾಚಿಕಟ್ಟಿರುವ ಕೋಡಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಅನಾಹುತಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.

    ಮೂರು ದಿನದಿಂದ ಮಳೆ ಕಡಿಮೆಯಾಗಿದ್ರೂ ಜಿಲ್ಲಾಡಳಿತ ಇನ್ನೂ ತಾತ್ಕಾಲಿಕ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇಷ್ಟು ದಿನ ನನ್ಗೆ ನಿತ್ಯಾ ಬೇಕೇ ಬೇಕು ಅಂತಿದ್ದ ಯುವಕ ಈಗ ಆಕೆಯ ಆ ಒಂದು ಮಾತಿಗೆ ಕೊಟ್ಟಿದ್ದು ಖಡಕ್​ ಪ್ರತಿಕ್ರಿಯೆ

    ವಿಶ್ವವಿಖ್ಯಾತ ದಸರಾ ಮಹೋತ್ಸವ: ಇಂದು ಗಜ ಪಯಣ ಆರಂಭ, ನಾಡಹಬ್ಬದ ಮೊದಲ ಕಾರ್ಯಕ್ರಮಕ್ಕೆ ಸಿದ್ಧತೆ

    ಕಳ್ಳ ನೀಡಿದ ಸುಳಿವು ಸಿಸ್ಟರ್ ಅಭಯಾ ಸಾವಿನ ಸುತ್ತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts