More

    ಪೊಲೀಸರಿಗೆ ಮಾಹಿತಿ ನೀಡದೆ ವಿದೇಶಕ್ಕೆ ಹಾರಿದ ಮುಸ್ಕಾನ್ ಕುಟುಂಬ? ತನಿಖೆ ನಡೆಸುವಂತೆ ಒತ್ತಾಯ

    ಮಂಡ್ಯ: ಕಾಲೇಜು ಕ್ಯಾಂಪಸ್​ನಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್​ ಪೊಲೀಸರಿಗೆ ಯಾಮಾರಿಸಿ ವಿದೇಶಕ್ಕೆ ಪ್ರಯಾಣ ಮಾಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.

    ಖಾಕಿಗೆ ಮಾಹಿತಿ ನೀಡದೆ ಮುಸ್ಕಾನ್ ಕುಟುಂಬ ಸೌದಿ ಪ್ರವಾಸಕ್ಕೆ ಹೊರಟಿದೆ ಎಂದು ಹೇಳಲಾಗಿದೆ. ಇದೀಗ ವಿದೇಶ ಪ್ರವಾಸದಿಂದ ಮತ್ತಷ್ಟು ಅನುಮಾನ ಹುಟ್ಟಿಕೊಂಡಿದೆ. ಕಾಲೇಜು ಕ್ಯಾಂಪಸ್​ನಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಸುದ್ದಿಯಾದ ಬಳಿಕ ಉಗ್ರ ಸಂಘಟನೆಯಿಂದ ಮುಸ್ಕಾನ್​ ಮೆಚ್ಚುಗೆ ಪಡೆದಿದ್ದಳು. ಅಲ್ ಖೈದಾ ಸಂಘಟನೆಯ ನಾಯಕ ಮುಸ್ಕಾನ್​ಗಳನ್ನು ಹಾಡಿ ಹೊಗಳಿ ಗುಣಗಾನ ಮಾಡಿದ್ದ.

    ಉಗ್ರ ಸಂಘಟನೆಯ ಹೊಗಳಿಕೆ ಬಳಿಕ ತನಿಖೆಗೆ ಆಗ್ರಹ ಹೆಚ್ಚಾಗಿತ್ತು. ಮುಸ್ಕಾನ್ ಮನೆಗೆ ಬಂದೋಗುವವರ ಮೇಲೆಯು ಪೊಲೀಸ್ ಇಲಾಖೆ ಕಣ್ಣಿಟ್ಟಿತ್ತು. ಖಾಕಿಗೆ ಮಾಹಿತಿ ನೀಡದೆ ಕಳೆದ ಏಪ್ರಿಲ್ 25ರಂದೇ ಮುಸ್ಕಾನ್ ಕುಟುಂಬ ಸೌದಿಗೆ ತೆರಳಿದೆ ಎನ್ನಲಾಗಿದೆ. ಧಾರ್ಮಿಕ ಪ್ರವಾಸಕ್ಕಾಗಿ ಸೌದಿ ಪ್ರವಾಸ ಮಾಡಿರುವ ಬಗ್ಗೆ ಮಾಹಿತಿ ಇದ್ದು, ವಿದೇಶ ಪ್ರವಾಸದ ಬಗ್ಗೆಯೂ ತನಿಖೆ ನಡೆಸುವಂತೆ ಒತ್ತಾಯ ಕೇಳಿಬರುತ್ತಿದೆ.

    ಮುಸ್ಕಾನ್ ಕುಟುಂಬದ ವಿರುದ್ಧ ತನಿಖೆಗೆ ಒತ್ತಾಯ ಕೇಳಿಬಂದ ಕಾರಣಗಳೇನೆಂದರೆ, ಅಲ್ಲಾ ಹು ಅಕ್ಬರ್ ಘೋಷಣೆ ಬಳಿಕ ಲಕ್ಷ ಲಕ್ಷ ಹಣ ಉಡುಗೊರೆಯಾಗಿ ಬಂದಿತು. ಹಣ ಮಾತ್ರವಲ್ಲದೆ ಸ್ಮಾರ್ಟ್ ಫೋನ್, ವಾಚ್ ಸೇರಿದಂತೆ ಬೆಲೆ ಬಾಳುವ ಉಡುಗೊರೆ ಹರಿದುಬಂದಿತು. ದೇಶದ ನಾನಾ ಮುಸ್ಲಿಂ ಮುಖಂಡರಿಂದ ಉಡುಗೊರೆ, ಪ್ರಶಂಸೆ ವ್ಯಕ್ತವಾಗಿತ್ತು. ವಿದೇಶದಿಂದಲೂ ಆಕೆಗೆ ಫಂಡ್ ಬಂದಿದೆ ಎಂಬ ಆರೋಪ ಕೇಳಿಬಂದಿದೆ. ಅಲ್‌-ಖೈದಾ ಉಗ್ರ ಸಂಘಟನೆ ಮುಖ್ಯಸ್ಥನು ಸಹ ಮುಸ್ಕಾನ್ ಹೊಗಳಿದ್ದಾನೆ. ಈ ಎಲ್ಲಾ ಬೆಳವಣಿಗೆ ಬಳಿಕ ಮುಸ್ಕಾನ್ ವಿರುದ್ಧ ತನಿಖೆಗೆ ಆಗ್ರಹ ಹೆಚ್ಚಾಗಿದೆ. ಮುಸ್ಕಾನ್ ಕುಟುಂಬದ ತನಿಖೆಗೆ ಆಗ್ರಹಿಸಿ ಮಂಡ್ಯ ಎಸ್‌ಪಿಗೆ ಹಲವರು ದೂರು ನೀಡಿದ್ದಾರೆ. ಮಹಾರಾಷ್ಟ್ರ ಶಾಸಕ ಉಡುಗೊರೆಯಾಗಿ ನೀಡಿದ್ದ ಮೊಬೈಲ್ ತನಿಖೆ ನಡೆಸುವಂತೆಯೂ ಒತ್ತಾಯ ಮಾಡಲಾಗಿದೆ. ಮುಸ್ಕಾನ್ ಕುಟುಂಬಕ್ಕೆ ಉಗ್ರ ಸಂಘಟನೆಯ ನಂಟಿರಬಹುದೆಂದು ಹಿಂದು ಸಂಘಟನೆಗಳು ಆರೋಪಿಸಿವೆ. ಈ ನಡುವೆ ಪೊಲೀಸರಿಗೆ ಮಾಹಿತಿ ನೀಡದೆ ಮೆಕ್ಕಾ ಪ್ರವಾಸ ತೆರಳಿರುವುದು ಮುಸ್ಕಾನ್ ಕುಟುಂಬದ ಮೇಲೆ ಮತ್ತಷ್ಟು ಅನುಮಾನ ಮೂಡವಂತಿದೆ. (ದಿಗ್ವಿಜಯ ನ್ಯೂಸ್​)

    ಮಗನಿಗೆ PSI ಹುದ್ದೆ ಕೊಡಿಸಲು ಅಕ್ರಮ ಹಾದಿ ಹಿಡಿದು ಲಕ್ಷ ಲಕ್ಷ ರೂ. ಕೊಟ್ಟ ಶಿಕ್ಷಕನ ಕತೆ ಇದೀಗ ಹೇಳತೀರದು!

    ಸಂಬಂಧಿಯೊಬ್ಬ ಕಳುಹಿಸಿದ ವಿಡಿಯೋ ನೋಡಿದ ಬೆನ್ನಲ್ಲೇ ತಂಗಿಯನ್ನೇ ಗುಂಡಿಟ್ಟು ಹತ್ಯೆಗೈದ ಸಹೋದರ..!

    ರಾಜಪಕ್ಸ ಮೇಲೆ ಜನಾಕ್ರೋಶ: ರಕ್ಷಣೆಗಾಗಿ ನೌಕಾ ನೆಲೆಗೆ ಮಹಿಂದ ಕುಟುಂಬ ಪಲಾಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts