More

    ಕಾರಿನ ಜತೆ ದೈಹಿಕ ಸಂಬಂಧ! ಈತ ಹೇಳುವುದನ್ನು ಕೇಳಿದ್ರೆ ಇಂಥವರೂ ಇರ್ತಾರಾ ಅಂತಿರಾ…

    ಲಿಟಲ್​ ರಾಕ್​: ಯುನೈಟೆಡ್​ ಸ್ಟೇಟ್ಸ್​ನ ಅರ್ಕಾನಸ್​ ಮೂಲದ ನಥಾನಿಯಲ್ ಎಂಬ ವ್ಯಕ್ತಿಯ ಬಗ್ಗೆ ತಿಳಿದರೆ, ಈ ಭೂಮಿಯ ಮೇಲೆ ಇಂಥವರು ಇರ್ತಾರಾ ಎಂದು ಅನಿಸುವುದರ ಜೊತೆಗೆ ಈ ಕಣ್ಣಲ್ಲಿ ಇನ್ನು ಏನೇನು ನೋಡಬೇಕು ಎಂಬ ಡೈಲಾಗ್​ ಕೂಡ ನೆನಪಾಗುವುದರಲ್ಲಿ ಸಂಶಯವೇ ಇಲ್ಲ.

    ಬಹುತೇಕರಿಗೆ ಸ್ವಂತ ಕಾರು ಖರೀದಿಸಬೇಕೆಂಬ ಆಸೆ ಇರುತ್ತದೆ. ಕಾರಿನಲ್ಲಿ ಜಾಲಿ ರೈಡ್​ ಹೋಗುತ್ತಿದ್ದರೆ ಅದರ ಮಜವೇ ಬೇರೆ. ಆದರೆ, ಈ ನಥಾನಿಯಲ್ ಎಂಬಾತ ಕಾರಿನ ಮೇಲಿಟ್ಟಿರುವ ಆಸೆಯೇ ಬೇರೆ. ಅಸಲಿಗೆ ಕಾರು ನಮಗೆಲ್ಲ ಒಂದು ವಸ್ತುವಾಗಿ ಕಂಡರೆ, ಈತನಿಗೆ ತನ್ನ ಬಾಳ ಸಂಗಾತಿಯಾಗಿ ಕಾಣುತ್ತದೆ. ಕಾರಿಗೆ ದಾಸನಾಗಿರುವ ನಥಾನಿಯಲ್​, ಅದರ ಜೊತೆ ಸಂಸಾರ ಸುಖವನ್ನು ಅನುಭವಿಸುತ್ತಿದ್ದಾನಂತೆ. ಅದು ಹೇಗೆ ಅಂತಿರಾ? ನಥಾನಿಯಲ್​ ಕುರಿತ ಒಂದು ಆಸಕ್ತಿದಾಯ ಸ್ಟೋರಿ ಇಲ್ಲಿದೆ ನೋಡಿ…

    ಮೈ ಸ್ಟ್ರೇಂಜ್​ ಅಡಿಕ್ಷನ್​ (ನನ್ನ ವಿಚಿತ್ರ ವ್ಯಸನ) ಹೆಸರಿನ ಟಿಎಲ್​ಸಿ ಡಾಕ್ಯುಮೆಂಟರಿ ಸರಣಿಯ ಆಬ್ಜೆಕ್ಟೋಫಿಲಿಯಾ ಎಪಿಸೋಡ್​ ಒಂದು 2012ರ ಫೆಬ್ರವರಿಯಲ್ಲಿ ಪ್ರಸಾರವಾಯಿತು. ಇದರಲ್ಲಿ ನಥಾನಿಯಲ್​ ಎಂಬಾತ ತನ್ನ ಕಾರಿನ ಜತೆ ರೊಮ್ಯಾಂಟಿಕ್​ ಸಂಬಂಧ ಹೊಂದಿರುವ ಬಗ್ಗೆ ಪ್ರಸಾರ ಮಾಡಲಾಯಿತು. ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಜನರ ಕುತೂಹಲಕ್ಕೆ ಕಾರಣವಾಗಿದೆ.

    ಮೊದಲನೆಯದಾಗಿ ಆಬ್ಜೆಕ್ಟೋಫಿಲಿಯಾ ಎಂದರೆ ಏನು ಎಂಬುದನ್ನು ತಿಳಿಯೋಣ. ಇದರರ್ಥ ಜನರು ತಮಗೆ ಇಷ್ಟವಾದ ವಸ್ತುವಿನ ಜತೆ ಬಲವಾದ ಭಾವನೆ ಇಟ್ಟುಕೊಳ್ಳುವುದು ಅಥವಾ ಲೈಂಗಿಕ ಸಂಬಂಧವನ್ನು ಹೊಂದುವುದು. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಒಂದು ಭಾಗ. ಅನೇಕ ಜನರು ಈ ಗೀಳನ್ನು ಹೊಂದಿದ್ದು, ತಮ್ಮ ಅಚ್ಚುಮೆಚ್ಚಿನ ವಸ್ತುಗಳ ಜತೆ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ. ಇದನ್ನು ಕೇಳಲು ಒಂದು ರೀತಿ ಮುಜುಗರ ಅನಿಸಿದರೂ ಇದು ಸತ್ಯ.

    ನಥಾನಿಯಲ್​ಗೆ ಸಂಬಂಧಿಸಿದ ಡಾಕ್ಯುಮೆಂಟರಿಯಲ್ಲಿ 1998ರ ಸರಣಿಯ ಛೆವೆ ಮೊಂಟೆ ಕಾರ್ಲೋ ಕಾರಿನ ಜತೆ ನಥಾನಿಯಲ್​ ಹೇಗೆ ಸಂಬಂಧ ಹೊಂದಿದ್ದ ಎಂದು ವಿವರಿಸಲಾಗಿದೆ. ತನ್ನ ಕಾರಿನ ಜತೆಗೆ ಟೆಲಿಪತಿ (ಮನೋವಿಜ್ಞಾನದ ಪ್ರಕಾರ ಮನಸ್ಸಿನಿಂದ ಮನಸ್ಸಿನ ಜತೆ ನಡೆಸುವ ಸಂವಹನ) ಸಂವಹನ ಹೊಂದಿದ್ದ ಈತ, ಹಾಡನ್ನು ಹೇಳುತ್ತಾ ಅದರ ಜತೆಗೆ ಲೈಂಗಿಕ ಸಂಭೋಗ ನಡೆಸುತ್ತಿದ್ದ ಎಂಬುದನ್ನು ತಿಳಿಸಲಾಗಿದೆ.

    ಈ ಬಗ್ಗೆ ಮಾತನಾಡಿರುವ ನಥಾನಿಯಲ್​, 2005ರಲ್ಲಿ ಕಾರು ಡೀಲರ್‌ಶಿಪ್‌ನಲ್ಲಿ ಚೇಸ್‌ನನ್ನು ನೋಡಿದಾಗ ಮೊದಲ ನೋಟದಲ್ಲೇ ಪ್ರೀತಿಯಾಯಿತು. ಬಳಿಕ ಅದನ್ನು ಖರೀದಿಸಿ ಬಳಸಲು ಆರಂಭಿಸಿದ ಕೆಲ ದಿನಗಳ ನಂತರ ಪ್ರೀತಿ ರೊಮ್ಯಾಂಟಿಕ್​ ಸಂಬಂಧಕ್ಕೆ ತಿರುಗಿತು. ಕೆಲವೊಮ್ಮೆ ದೈಹಿಕ ಸಂಬಂಧವು ನಮ್ಮಿಬ್ಬರು ನಡುವೆ ಇರಲಿದೆ. ನಾನು ನನ್ನ ಕಾರಿನ ಜತೆ ತುಂಬಾ ಗಾಢವಾದ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಿದರು.

    ತನ್ನ ಹದಿಹರೆಯದಿಂದಲೂ ನಥಾನಿಯಲ್​ಗೆ ಕಾರುಗಳೆಂದರೆ ತುಂಬಾ ಪ್ರೀತಿ. ಆದರೆ, ಹದಿಹರೆಯದಲ್ಲಿ ಏಳು ಗೆಳತಿಯರೊಂದಿಗೆ ಡೇಟಿಂಗ್ ಮಾಡಿದ್ದರಿಂದ ಕಾರಿನ ಬಗ್ಗೆ ಆತ ಹೆಚ್ಚು ಯೋಚಿಸುತ್ತಿರಲಿಲ್ಲವಂತೆ. ಯಾವಾಗ ಚೇಸ್ ಭೇಟಿಯಾದನೋ ಅಂದಿನಿಂದ ಅದರ ಪ್ರೀತಿಯಲ್ಲಿ ಮುಳುಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಪ್ರತಿನಿತ್ಯ 3 ಕೆಜಿ ಅನ್ನ, 4 ಕೆಜಿ ರೊಟ್ಟಿ, 3.5 ಕೆಜಿ ಮಾಂಸ ತಿನ್ನುವ ಇಬ್ಬರು ಹೆಂಡಿರ ಗಂಡನ ಕಣ್ಣೀರ ಕತೆಯಿದು!

    ಚಪ್ಪಲಿ ವಿವಾದದ ಬಳಿಕ ನಯನತಾರಾಗೆ ಮತ್ತೊಂದು ಬಿಗ್​ ಶಾಕ್​: ಇನ್ನೊಂದು ಮಿಸ್ಟೇಕ್​ CCTVಯಲ್ಲಿ ಸೆರೆ

    ಗ್ರಾ.ಪಂ. ಚುನಾವಣೆಯಲ್ಲಿ ಮಾಜಿ ಚಂಬಲ್ ಡಕಾಯಿತ ಮಲ್ಖಾನ್​ ಸಿಂಗ್​ ಪತ್ನಿ ಅವಿರೋಧ ಆಯ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts