More

    ಅತಿ ಕಡಿಮೆ ಬೆಲೆಗೆ ಚಿಕನ್​ ಮಾರಾಟ ಮಾಡುತ್ತಿದವನನ್ನು ಬಂಧಿಸಿದ ಪೊಲೀಸರು! ಕಾರಣ ಹೀಗಿದೆ ನೋಡಿ…

    ಎಡಪ್ಪಾಲ್​: ರಿಮೋಟ್​ ಕಂಟ್ರೋಲ್​ ಬಳಸಿಕೊಂಡು ವಿದ್ಯುತ್​ ಚಾಲಿತ ತೂಕದ ಯಂತ್ರದ ಮೂಲಕ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ಚಿಕನ್​ ಮಾರಾಟಗಾರನನ್ನು ಬಂಧಿಸಿರುವ ಘಟನೆ ಕೇರಳದ ಎಡಪಾಲ್​ನಲ್ಲಿ ನಡೆದಿದೆ.

    ಬಂಧಿತ ಆರೋಪಿಯನ್ನು ವಟ್ಟಮ್​ಕುಲಮ್​ ನಿವಾಸಿ ಅಫ್ಸಾಲ್​ (31) ಎಂದು ಗುರುತಿಸಲಾಗಿದೆ. ಇತರೆ ಚಿಕನ್​ ಮಾರಟ ಮಳಿಗೆಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ದರ ನಿಗದಿ ಮಾಡಿ ಈತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ. ಬೆಲೆ ಕಡಿಮೆ ಇರುವುದನ್ನು ನೋಡಿ ಚಿಕನ್​ ಕೊಳ್ಳಲು ಮುಗಿ ಬೀಳುತ್ತಿದ್ದ ಗ್ರಾಹಕರಿಗೆ ವಿದ್ಯುತ್​ ಚಾಲಿತ ತೂಕದ ಯಂತ್ರವನ್ನು ರಿಮೋಟ್​ ಮೂಲಕ ಕಂಟ್ರೋಲ್​ ಮಾಡಿ, ತೂಕದಲ್ಲಿ ವ್ಯತ್ಯಾಸ ಬರುವಂತೆ ಮಾಡಿ ವಂಚಿಸುತ್ತಿದ್ದ.

    ಆರೋಪಿ ಅಫ್ಸಾಲ್​, ಬಕ್ರೀದ್​ನಂತಹ ಹಬ್ಬದ ಸಮಯದಲ್ಲಿ 10 ರಿಂದ 20 ರೂಪಾಯಿವರೆಗೂ ರಿಯಾಯಿತಿ ನೀಡಿ ಚಿಕನ್​ ಮಾರಾಟ ಮಾಡಿದ್ದಾರೆ. ಇದರಿಂದ ಈತ ಅಂಗಡಿ ಮುಂದೆ ಜನರ ದಂಡೇ ಸೇರುತ್ತಿತ್ತು. ಇದರಿಂದ ಇತರೆ ಅಂಗಡಿಗಳಿಗೆ ತುಂಬಾ ನಷ್ಟ ಉಂಟಾಗುತ್ತಿತ್ತು. ಇದರಿಂದ ಅನುಮಾನಗೊಂಡ ಇತರೆ ಚಿಕನ್​ ಅಂಗಡಿ ಮಾಲೀಕರು ಆತನನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದು ಕೊಟ್ಟಿದ್ದಾರೆ.

    ತೂಕದ ಯಂತ್ರದ ಮೇಲೆ 1 ಕೆಜಿ ಕೋಳಿ ಮಾಂಸವನ್ನು ಇಡುವ ಮೊದಲು ಯಂತ್ರದ ಪರದೆಯಲ್ಲಿ 1 ಕಿಲೋಗ್ರಾಂ ತೋರಿಸುತ್ತಿತ್ತು. ಇದನ್ನು ರಿಮೋಟ್​ ಕಂಟ್ರೋಲ್​ನಿಂದ ಮಾಡಿದ್ದ. ಈ ಬಗ್ಗೆ ದೂರು ನೀಡಿದ ಬಳಿಕ, ವಿಚಾರಣೆ ನಡೆಸಿದ ಪೊಲೀಸರು, ವಿದ್ಯುತ್​ ಚಾಲಿತ ತೂಕದ ಯಂತ್ರದಲ್ಲಿ ವಂಚನೆ ನಡೆದಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಅಫ್ಸಾಲ್​ನನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)

    ಅಪಘಾತ ಆಗಿದೆ ಅಂತ ಕರೆ ಮಾಡಿದ್ರೆ ಕಾಪಾಡುವ ಬದಲು ಪತಿಗೆ ಸಾವಿನ ದಾರಿ ತೋರಿದ ಪತ್ನಿ: ಪ್ರೀತಿ ಕೊಂದ ಕಿರಾತಕಿ?

    ಒಳಉಡುಪು ಬಿಚ್ಚಿಟ್ಟು ಪರೀಕ್ಷೆ ಬರೆಯುವಂತೆ ಪಟ್ಟು: ಪಾಲಕರ ಮುಂದೆ ಕಣ್ಣೀರಿಟ್ಟ ವಿದ್ಯಾರ್ಥಿನಿಯರು

    ನಾಪತ್ತೆಯಾದ ಮುದ್ದಿನ ಗಿಣಿಗಾಗಿ ಕಣ್ಣೀರಿಡುತ್ತಿರುವ ಕುಟುಂಬ: ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts