ಭೋಪಾಲ್: ಯಾರೇ ಆಗಲಿ ತಾವು ತುಂಬಾ ಪ್ರೀತಿ ಮಾಡುವವರಿಗೋಸ್ಕರ ಏನು ಬೇಕಾದರು ಮಾಡಲು ತಯಾರಾಗಿರುತ್ತಾರೆ. ತಮ್ಮ ಕೈಯಲ್ಲಿ ಆಗದಿದ್ದರೂ ಒಂದು ಪ್ರಯತ್ನವನ್ನಾದರೂ ಮಾಡೇ ಮಾಡುತ್ತಾರೆ. ಏಕೆಂದರೆ, ಪ್ರೀತಿಗೆ ಆ ಶಕ್ತಿ ಇದೆ. ಇದಕ್ಕೆ ಪೂರಕವಾದ ಒಂದು ಘಟನೆ ಇದೀಗ ಮಧ್ಯಪ್ರದೇಶದಲ್ಲಿ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಪ್ರೀತಿಯ ಪತ್ನಿಗೋಸ್ಕರ ಮಧ್ಯಪ್ರದೇಶದ ಭಿಕ್ಷುಕನೊಬ್ಬ 90 ಸಾವಿರ ರೂಪಾಯಿ ಮೌಲ್ಯದ ಮೊಪೆಡ್ ಖರೀದಿಸಿರುವುದು ಇದೀಗ ಸುದ್ದಿಯಾಗಿದೆ. ಅದರಲ್ಲೂ ಮೊಪೆಡ್ ಖರೀದಿ ಹಿಂದಿರುವ ಉದ್ದೇಶ ಮಾತ್ರ ಮನಮುಟ್ಟುವಂತಿದೆ. ಈ ಮೊದಲು ಭಿಕ್ಷುಕ ದಂಪತಿ ತ್ರಿಚಕ್ರದ ಬೈಸಿಕಲ್ ಮೇಲೆ ಪ್ರಯಾಣಿಸುತ್ತಿದ್ದರು. ಪತ್ನಿ ಬೆನ್ನು ನೋಯುತ್ತದೆ ಎಂದು ಆಗಾಗ ಹೇಳುತ್ತಿದ್ದಳು. ಹೀಗಾಗಿ ಆಕೆಯ ನೋವಿಗೆ ಪರಿಹಾರ ನೀಡಲು ಭಿಕ್ಷುಕ ಮೊಪೆಡ್ ಖರೀದಿಸಿದ್ದಾನೆ.
ಅಂದಹಾಗೆ ಭಿಕ್ಷುಕನ ಹೆಸರು ಸಂತೋಷ್ ಕುಮಾರ್ ಸಾಹು. ಈತ ಮಧ್ಯಪ್ರದೇಶದ ಚಿಂದ್ವಾರ ಮೂಲದವನು. ತನ್ನ ಪತ್ನಿ ಮುನ್ನಿಗಾಗಿ ಮೊಪೆಡ್ ಖರೀದಿಸಿದ್ದಾನೆ. ಸುಮಾರು 4 ವರ್ಷಗಳಿಂದ ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಅಷ್ಟೂ ಹಣವನ್ನು ನಗದು ರೂಪದಲ್ಲಿ ನೀಡಿ ಮೊಪೆಡ್ ಖರೀದಿ ಮಾಡಿದ್ದಾನೆ.
ಈ ಬಗ್ಗೆ ಮಾತನಾಡಿರುವ ಸಾಹು, ನಾವು ತ್ರಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದೆವು. ನನ್ನ ಪತ್ನಿಗೆ ಆರಾಮದಾಯಕವಾಗಿರಲೆಂದು 90 ಸಾವಿರ ಕೊಟ್ಟ ಮೊಪೆಡ್ ಖರೀದಿ ಮಾಡಿದ್ದೇನೆ. ಇದೀಗ ನಾವಿಬ್ಬರು ಆರಾಮಾಗಿ ಸಿಯೋನಿ, ಭೋಪಾಲ್ ಮತ್ತು ಇಂದೋರ್ನಲ್ಲಿ ಓಡಾಡಬಹುದು ಎಂದಿದ್ದಾರೆ.
ಸಾಹು ಕಾಲಿನಲ್ಲಿ ಸಮಸ್ಯೆ ಇರುವುದರಿಂದ ತಿರುಗಾಡಲು ಆಗುವುದಿಲ್ಲ. ಹೀಗಾಗಿ ತ್ರಿಚಕ್ರ ವಾಹನದಲ್ಲಿ ಕೂರಲು ತನ್ನ ಹೆಂಡತಿಯ ಮೇಲೆ ಆತ ಅವಲಂಬಿತನಾಗಿದ್ದಾನೆ. ಸಾಹು ಮೊಪೆಡ್ ಓಡಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಉದ್ದೇಶ ತಿಳಿದಿರುವ ನೆಟ್ಟಿಗರು ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಆತ ತನ್ನ ಪತ್ನಿ ಮೇಲಿಟ್ಟಿರುವ ಪ್ರೀತಿಗೆ ಎಲ್ಲರೂ ಮನಸೋತಿದ್ದಾರೆ. (ಏಜೆನ್ಸೀಸ್)
#WATCH A beggar, Santosh Kumar Sahu buys a moped motorcycle worth Rs 90,000 for his wife Munni in Chhindwara, MP
Earlier, we had a tricycle. After my wife complained of backache, I got this vehicle for Rs 90,000. We can now go to Seoni, Itarsi, Bhopal, Indore, he says. pic.twitter.com/a72vKheSAB
— ANI MP/CG/Rajasthan (@ANI_MP_CG_RJ) May 24, 2022
ಇನ್ಮುಂದೆ ಸಂಸಾರ ಉಳಿಸಿಕೊಳ್ಳಲು ಆಗುವುದಿಲ್ಲ: ಗಂಡನ ಕರಾಳ ಮುಖ ಬಿಚ್ಚಿಟ್ಟ ನಟಿ ಚೈತ್ರಾ ಹಳ್ಳಿಕೇರಿ
ಅನೇಕ ಕುಟುಂಬಗಳ ಉಳಿತಾಯ ಹಣಕ್ಕೆ ಕನ್ನ: IPL ಬೆಟ್ಟಿಂಗ್ ಆಡಿ 1 ಕೋಟಿ ರೂ. ಕಳ್ಕೊಂಡ ಪೋಸ್ಟ್ ಮಾಸ್ಟರ್!
ಗೌರಿಬಿದನೂರಿನ ಕಲ್ಯಾಣ ಮಂಟಪದಿಂದ ರಾತ್ರೋರಾತ್ರಿ ಪ್ರಿಯಕರನ ಜತೆ ವಧು ಎಸ್ಕೇಪ್! ಕಂಗಾಲಾದ ಕುಟುಂಬ