More

    ಬಡವರನ್ನು ನೋಡಿದ್ರೆ ಕರುಳು ಕಿತ್ತು ಬರುತ್ತೆ ಸರ್! ಶಾಸಕರ ಕಾರಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು

    ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್​ ರೆಡ್ಡಿಯವರ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣವೀಗೆ ಮತ್ತೊಂದು ಸ್ಫೋಟಕ ತಿರುವು ಪಡೆದುಕೊಂಡಿದೆ. ಬಂಧಿತ ಆರೋಪಿಗಳು ಬಡತನದ ಕತೆ ಹೇಳಿ ಅನುಕಂಪ ಗಿಟ್ಟಿಸಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.

    ಶ್ರೀಮಂತರೇ ಶ್ರೀಮಂತರಾಗುತ್ತಾ ಇದ್ದಾರೆ, ಬಡವರು ಬಡವರಾಗಿಯೇ ಇದ್ದಾರೆ. ಹೀಗಾಗಿ ನಾವು ಬೆಂಕಿ ಇಟ್ಟೆವು ಎಂದು ಆರೋಪಿಗಳು ಆರಂಭದಲ್ಲಿ ಹೇಳಿದ್ದರು. ಆದರೆ, ಪ್ರಕರಣವೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಆರೋಪಿಗಳು ಅನಾಚಾರ ಮಾಡಿ, ಪೊಲೀಸರೆದುರು ಸಿನೆಮಾ ಸ್ಟೈಲ್ ಕಣ್ಣೀರ ಕಥೆ ಹೇಳಿದ್ದಾರೆಂದು ತಿಳಿದುಬಂದಿದೆ.

    ಬಂಧಿತ ಸಾಗರ್, ನವೀನ್ ಮತ್ತು ಶ್ರೀಧರ್ ತೀವ್ರ ವಿಚಾರಣೆ ವೇಳೆ ಕಣ್ಣೀರಿಟ್ಟು ಹೈಡ್ರಾಮಾ ಮಾಡಿದ್ದರು. ಬಡತನ ಹಾಗೂ ಸಮಾಜದ ಬಗ್ಗೆ ಆರೋಪಿಗಳು ಪೊಲೀಸರಿಗೆ ಕ್ಲಾಸ್ ತೆಗೆದಿಕೊಂಡಿದ್ದರು. ಬಡವರನ್ನ ನೋಡಿದ್ರೆ ಕರುಳು ಕಿತ್ತು ಬರುತ್ತೆ ಸರ್, ದೇವಸ್ಥಾನದ ಬಳಿ ಕುಳಿತಿರೋರನ್ನ ನೋಡಿದ್ರೆ ಅಯ್ಯೋ ಅನ್ನಿಸುತ್ತದೆ ಎಂದ ಸಾಗರ್ ಹೇಳಿದ್ದ. ಈ ಮಾತುಗಳನ್ನು ಕೇಳಿ ಪೊಲೀಸರು ಸಹ ಗಪ್ ಚುಪ್ ಆಗಿದ್ದರು.

    ಮನ ಮಿಡಿಯುವ ಮಾತುಗಳಿಂದ ಪೊಲೀಸರ ಬಾಯಿ ಮುಚ್ಚಿಸಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ಪೂರ್ವಪರ ವಿಚಾರಿಸಿದಾಗ ಅವರ ಕುರಾಳ ಮುಖ ಅನಾವರಣಗೊಂಡಿದೆ. ಮೂವರು ಸಹ 10ನೇ ತರಗತಿಗು ಮೊದಲೆ ಕ್ಲಾಸ್ ಔಟ್ ಎಂಬುದು ತಿಳಿದಿದೆ. ದಿನ ಬೆಳಗಾದರೆ ಬೇಗೂರು ರಸ್ತೆ ಸರ್ಕಾರಿ ಶಾಲೆ ಬಳಿ ಮೊಕ್ಕಾಂ ಹೂಡುತ್ತಿದ್ದರು. ದುಶ್ಚಟಗಳಿಗೆ ಬಲಿಯಾಗಿ ಓಡಾಡ್ಕೊಂಡಿದ್ದರು ಎಂದು ತಿಳಿದಿದೆ.

    ನೇಪಾಳ ಮೂಲದ ಸಾಗರ್ ತಾಪ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ. ನವೀನ್ ಮತ್ತು ಶ್ರೀಧರ್ ಕೆಲಸವಿಲ್ಲದೆ ಸುತ್ತಾಡುತ್ತಿದ್ದರು. ಈ ಮಧ್ಯ ಆರೋಪಿಗಳು ಕೃತ್ಯ ಎಸಗಿದ್ದಾರೆ. ಸದ್ಯ ಆರೋಪಿಗಳ ಹೇಳಿಕೆ ಆಧಾರದಲ್ಲಿ ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

    ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ: ಆ ಎರಡು ಸುಳಿವಿನಿಂದ ಸಿಕ್ಕಿಬಿದ್ದ ಆರೋಪಿಗಳು..!

    ಬಂಧನ ವೇಳೆ ಕೂಗಾಡಿ, ಕಣ್ಣೀರಿಟ್ಟು ನಟಿಯ ಹೈಡ್ರಾಮ: ಚೆನ್ನೈ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ ಮೀರಾ!

    ಇಡೀ ರಾಷ್ಟ್ರವೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವಾಗ ಗೋವಾ ಏಕೆ ಈ ಅಮೃತ ಘಳಿಗೆಯನ್ನು ಆಚರಿಸುವುದಿಲ್ಲ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts