2 ಮದ್ವೆ, 3ನೇ ವ್ಯಕ್ತಿ ಜತೆ ಲಿವಿಂಗ್‌ ಟುಗೆದರ್​​, ಪೇದೆಯ ಜತೆ ಅಕ್ರಮ ಸಂಬಂಧ ಹೊಂದಿದ್ದವಳ ದುರಂತ ಕತೆಯಿದು ​

Andhra Woman
Published on

ವಿಜಯವಾಡ: ಎರಡು ಮದುವೆಯಾಗಿ ಪತಿಯಿಬ್ಬರಿಗೂ ಡಿವೋರ್ಸ್ ನೀಡಿ ಮೂರನೇ ವ್ಯಕ್ತಿಯ ಜತೆ ಲಿವ್​ ಇನ್​ ರಿಲೇಶನ್​ಶಿಫ್ ಇಟ್ಟುಕೊಂಡಿದ್ದಲ್ಲದೆ, ಕಾನ್ಸ್​ಟೇಬಲ್ ಒಬ್ಬನ​ ಜತೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಆಂಧ್ರ ಪ್ರದೇಶದ ವೆಂಪಲ್ಲಿ ಪಟ್ಟಣದ ಭರತ್​ ನಗರ ಬೀದಿಯಲ್ಲಿ ನಡೆದಿದೆ.

ಶೇಖ್​ ಫರ್ಹಾನ (28) ಕೊಲೆಯಾದ ಮಹಿಳೆ. ಪೊಲೀಸ್​ ಮೂಲಗಳ ಪ್ರಕಾರ ಫರ್ಹಾನಾ 11 ವರ್ಷಗಳ ಹಿಂದೆ ರಾಜೀವ್​ ನಗರ ಕಾಲನಿಯ ಪ್ರವೀಣ್​ ಎಂಬಾತನನ್ನು ಮದುವೆಯಾಗಿದ್ದಳು. ದಂಪತಿಗೆ ಲತೀಫ್​ ಹೆಸರಿನ ಗಂಡು ಮಗು ಇದೆ. ಆದರೆ, ಇಬ್ಬರ ನಡುವಿನ ವೈಮನಸ್ಸಿನಿಂದ ಇಬ್ಬರು ಡಿವೋರ್ಸ್​ ಪಡೆದುಕೊಂಡಿದ್ದರು.

ಇದಾದ ಬಳಿಕ ಜಾವೇದ್​ ಅಲಿಯಾಸ್​ ಮೊಹಮ್ಮದ್​ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಹಿರಿಯರನ್ನು ಒಪ್ಪಿಸಿ ಮದುವೆಯಾಗಿದ್ದಳು. ದಂಪತಿ ಝಹೀನ್​ ಶಾಯ್​ ಎಂಬ ಗಂಡು ಮಗನಿದ್ದಾನೆ. ಮೂರು ವರ್ಷಗಳ ಹಿಂದೆ ಜಾವೇದ್​ ಕೆಲಸದ ಮೇಲೆ ಕುವೈತ್​ಗೆ ತೆರಳಿದರು. ಇದರ ನಡುವೆ ಫರ್ಹಾನಾಗೆ ಶೇಖ್​ ಭಾಷಾ ಅಥವಾ ಇಡ್ಲಿ ಭಾಷಾ ಎಂಬಾತನ ಪರಿಚಯವಾಗಿ, ಆತನೊಂದಿಗೆ ಲಿನ್​ ಇನ್​ ರಿಲೇಶನ್​ನಲ್ಲಿದ್ದಳು. ಇದರ ನಡುವೆ ಇಬ್ಬರ ನಡುವೆ ಹಣದ ವಿಚಾರಕ್ಕೆ ಜಗಳ ಆಗುತ್ತಿತ್ತು. ಇದರಿಂದ ಬೇಸತ್ತಿದ್ದ ಫರ್ಹಾನಾ ಇಡ್ಲಿ ಭಾಷಾ ವಿರುದ್ಧ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಳು.

ಫರ್ಹಾನಾಗೆ ಕಾನ್ಸ್​ಟೇಬಲ್​ ಒಬ್ಬನ ಜತೆ ಅನೈತಿಕ ಸಂಬಂಧ ಇದೆ ಎಂಬ ಗುಮಾನಿ ಮೇಲೆ ಬುಧವಾರ ರಾತ್ರಿ ಆಕೆಯ ಮನೆಗೆ ಇಡ್ಲಿ ಭಾಷಾ ಹೋಗಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿ ಫರ್ಹಾನಾಳ ಕೊಲೆ ಮಾಡಿದ್ದಾರೆ. ಮಗಳು ಮೃತಪಟ್ಟಿರುವುದನ್ನು ನೋಡಿ ತಾಯಿ ಶೇಖ್​ ಶರ್ಹುನ್ನಿಶಾ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಗುರುವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಫರ್ಹಾನಾಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪುಲಿವೆಂದುಲ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪುಲಿವೆಂದುಲ ಡಿಎಸ್‌ಪಿ ಶ್ರೀನಿವಾಸು, ವೆಂಪಲ್ಲೆ ಸಿಐ ಸೀತಾರಾಮಿರೆಡ್ಡಿ, ಎಸ್‌ಐ ತಿರುಪಾಲ್‌ ನಾಯಕ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೇಖ್ ಬಾಷಾ ಅಲಿಯಾಸ್ ಇಡ್ಲಿ ಬಾಷಾ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net