More

    ಹಿರಿಯರ ಮಾತಿಗೆ ಬೆಲೆ ಕೊಟ್ಟು ಬಂದ ಯುವಕನಿಗೆ ಪ್ರೇಯಸಿ ಮುಂದೆಯೇ ಬಿಗ್​ ಶಾಕ್​!

    ಹೈದರಾಬಾದ್​: ಪಾಲಕರ ಒಪ್ಪಿಗೆ ಇಲ್ಲದೆ ಪ್ರೀತಿಸಿದ ಯುವತಿಯನ್ನು ಮದುವೆಯಾದ ಯುವಕನನ್ನು ಯುವತಿಯ ಸಂಬಂಧಿಕರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ತೆಲಂಗಾಣದ ಆಸಿಫಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

    ಮಾತನಾಡಿ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಯುವಕನನ್ನು ಕರೆದು ಸಂಬಂಧಿಕರು ಚೆನ್ನಾಗಿ ಥಳಿಸಿದ್ದಾರೆ. ಈ ಘಟನೆ ಮಂಗಳವಾರ ಥಿರ್ಯಾನಿ ಮಂಡಲ ಕೇಂದ್ರದಲ್ಲಿ ಜರುಗಿದೆ. ಮಾತನಾಡಲು ಬರುವಾಗ ರಸ್ತೆಯಲ್ಲೇ ಯುವಕನನ್ನು ಅಡ್ಡಗಟ್ಟಿ ಯುವತಿ ಕಡೆಯವರು ಹಲ್ಲೆ ಮಾಡಿದ್ದಾರೆ. ಯುವಕ ರಾಮು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ.

    ಯುವತಿ ಮಾಧವಿ ತನ್ನ ಸಂಬಂಧಿಕರ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ನನ್ನ ಪತಿಯ ಮೇಲೆ ನನ್ನ ಪಾಲಕರು ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾಳೆ. ನಾವಿಬ್ಬರು ಇಷ್ಟಪಟ್ಟು ಮದುವೆ ಆಗಿದ್ದೇವೆಂದು ತಿಳಿಸಿದ್ದಾರೆ.

    ದೂರು ದಾಖಲಿಸಿಕೊಂಡಿರುವ ಪೊಲೀಸರು ಹಲ್ಲೆ ಮಾಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. (ಏಜೆನ್ಸೀಸ್​)

    ಏನೇ ಇರಲಿ ಅವರು ಮಾಡಿದ್ದು ತಪ್ಪು: ಐಎಎಸ್​ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್​ ಡಿ. ರೂಪಾ ವಾಗ್ದಾಳಿ!

    ಅರವಿಂದ್​ಗೆ ಟ್ರೋಫಿ ಗೆಲ್ಲುವ ಅವಕಾಶ ಕಸಿದ ಎರಡನೇ ಇನ್ನಿಂಗ್ಸ್​: ಇಲ್ಲಿದೆ ಅಚ್ಚರಿಯ ಮಾಹಿತಿ!

    ಬಿಜೆಪಿ-ಎಸ್​ಪಿ ನೇರಾನೇರ ಫೈಟ್​ಗೆ ಉತ್ತರ ಪ್ರದೇಶ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts