More

    ನೀವು ನನಗೋಸ್ಕರ ನಾನು ಹೇಳಿದ್ದನ್ನು ಮಾಡಿದ್ರೆ ನಿಮಗೋಸ್ಕರ ನಾನು ಬೆತ್ತಲಾಗ್ತೀನಿ ಅಂದ್ರು ಪೂನಂ ಪಾಂಡೆ!

    ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ನಡೆಸಿಕೊಡುತ್ತಿರುವ “ಲಾಕಪ್” ಹೆಸರಿನ ರಿಯಾಲಿಟಿ ಹಲವು ಸಂಗತಿಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್​ನಲ್ಲಿ 72 ದಿನಗಳ ಕಾಲ ಬಂಧಿಸಿಡುವುದೇ ಈ ಶೋ ತಿರುಳಾಗಿದೆ. ಈ ಶೋ ಅನ್ನು ಎಕ್ತಾ ಕಪೂರ್​ ನಿರ್ಮಾಣ ಮಾಡುತ್ತಿದ್ದು, ಆಲ್ಟ್​ ಬಾಲಾಜಿ ಮತ್ತು ಎಂಎಕ್ಷ್​ ಪ್ಲೇಯರ್​ನಲ್ಲಿ 24X7 ಪ್ರಸಾರ ಮಡುತ್ತಿದೆ.

    ಈ ಶೋನಲ್ಲಿ ಕೇವಲ ವಿವಾದಿತ ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮ ನಡೆಸಿಕೊಡುವ ಕಂಗನಾ ಕೂಡ ವಿವಾದಗಳಿಂದ ಹೊರತಾಗಿಲ್ಲ. ಕಾರ್ಯಕ್ರಮ ಒಳ್ಳೆಯ ವೀಕ್ಷಣೆ ಪಡೆದುಕೊಳ್ಳುತ್ತಿದ್ದು, ಹೆಚ್ಚು ಸದ್ದು ಮಾಡುತ್ತಿದೆ. ಇದೇ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಮಾಡಲ್​ ಕಂ ನಟಿ ಪೂನಂ ಪಾಂಡೆ ವೀಕ್ಷಕರಿಗೆ ಇದೀಗ ಆಫರ್​ ಒಂದನ್ನು ನೀಡಿದ್ದಾರೆ.

    ನನಗೆ ವೋಟ್​ ಮಾಡಿ ನನ್ನನ್ನು ಉಳಿಸಿದರೆ ನಾನು ಲೈವ್​ ಕ್ಯಾಮೆರಾದಲ್ಲಿ ನನ್ನ ಟಿ-ಶರ್ಟ್​ ತೆಗೆಯುತ್ತೇನೆಂದು ಹೇಳಿದ್ದಾರೆ. ಚಾರ್ಜ್​ಶೀಟ್​ನಿಂದ ನನ್ನನ್ನು ಬಚಾವ್​ ಮಾಡಿ, ನಿಮಗೆ ಸರ್ಪ್ರೈಸ್​ ಕಾದಿದೆ ಎಂದಿದ್ದಾರೆ.

    ತನ್ನ ಸಹ-ಸ್ಪರ್ಧಿಗಳಾದ ಅಜ್ಮಾ ಫಲ್ಲಾಹ್, ಮುನಾವರ್ ಫರುಕಿ, ಅಂಜಲಿ ಅರೋರಾ, ವಿನಿತ್ ಕಾಕರ್ ಮತ್ತು ಇತರರ ಸಮ್ಮುಖದಲ್ಲೇ ಪೂನಂ ತನ್ನ ನಿರ್ಧಾರವನ್ನು ಘೋಷಿಸಿದರು. ಆದರೆ, ಅಜ್ಮಾ ಮತ್ತು ಮುನಾವರ್ ಏನು ತಯಾರಿ ನಡೆಸುತ್ತಿದ್ದಾರೆಂದು ಹಂಚಿಕೊಳ್ಳಲು ಒತ್ತಾಯಿಸಿದರು. ಅಲ್ಲದೆ, ಸರ್ಪ್ರೈಸ್​ ನೀಡುವವರೆಗೂ ಅದರ ಟ್ರೇಲರ್ ಅನ್ನು ಅಭಿಮಾನಿಗಳಿಗೆ ತೋರಿಸುವಂತೆ ಕಿಚಾಯಿಸಿದರು. ಆಗ ಮಧ್ಯ ಪ್ರವೇಶಿಸಿದ ವಿನಿತ್, ಪೂನಂ ಸುಮ್ಮನೆ ಹೇಳುತ್ತಾಳಷ್ಟೇ, ಅವಳು ಏನನ್ನೂ ಮಾಡುವುದಿಲ್ಲ ಎಂದರು. ಇದಾದ ಬಳಿಕ ಲೈವ್​ ಕ್ಯಾಮೆರಾದಲ್ಲಿ ತನ್ನ ಟಿ-ಶರ್ಟ್ ತೆಗೆದುಹಾಕುವುದಾಗಿ ಪೂನಂ ಘೋಷಿಸಿದರು. ಇದನ್ನು ಕೇಳಿದ ಸ್ಪರ್ಧಿಗಳೆಲ್ಲ ಸುಮ್ಮನಾದರು, ಆದರೆ ಪೂನಂಗೆ ನಗು ತಡೆಯಲಾಗಲಿಲ್ಲ.

    ಕಂಗನಾ ಅವರು ಲಾಕ್ ಅಪ್‌ನಲ್ಲಿನ ಮೊದಲ ವಾರಗಳಲ್ಲಿ ಪೂನಂ ಅವರನ್ನು ವಿಚಾರಣೆಗೆ ಒಳಪಡಿಸಿದರು, ಅವರು ವಯಸ್ಕರ ಚಿತ್ರಗಳನ್ನು ಮಾಡಲು ಒಪ್ಪಿಕೊಳ್ಳುತ್ತಾರೆಯೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಪೂನಂ ನಾನು ಇಲ್ಲಿಯವರೆಗೆ ಮಾಡಿದ ಯಾವುದೇ ವಿಡಿಯೋ ಅಥವಾ ನಾನು ಕ್ಲಿಕ್ ಮಾಡಿದ ಫೋಟೋಗಳಲ್ಲಿ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ. ಜನರು ನಕಲಿಯನ್ನು ಪ್ರೀತಿಸಬಹುದಾದರೆ, ಅವರು ನಿಜವಾದದನ್ನು ಪ್ರೀತಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಉತ್ತರಿಸಿದರು. (ಏಜೆನ್ಸೀಸ್​)

    ಥೂ ಇದೆಂಥಾ ನೀಚ ಕೃತ್ಯ? ಒಂದೇ ದಿನದಲ್ಲಿ 17 ಮಂದಿಯ ಜತೆ 16ರ ಹುಡುಗಿಯ ಒತ್ತಾಯದ ಲೈಂಗಿಕ ಕ್ರಿಯೆ

    ಚಾಯ್​-ಸ್ಯಾಮ್​ ಭವಿಷ್ಯ ನಿಜವಾಯ್ತು ಇದೀಗ ಪ್ರಭಾಸ್​ ಬಗ್ಗೆ ಭಯಾನಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

    ಪೆಟ್ರೋಲ್ ಬೆಲೆ ಏರಿಕೆ ಹಿಂದೆ ಕೇಂದ್ರ ಸರ್ಕಾರದ ಪಾತ್ರವಿಲ್ಲ, ಹಿಂದಿನ ಸರ್ಕಾರದ ತಪ್ಪು ನೀತಿ ಕಾರಣವೆಂದ ಡಿವಿಎಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts