More

    ಒಂದೇ ಸೂರಿನಡಿ 3,308 ಗಣಪ ತಯಾರಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಕೆಎಸ್‌ಪಿಸಿಬಿ

    ಬೆಂಗಳೂರು: ಕೈಯಲ್ಲೇ ತಯಾರಿಸಿದ ಗಣಪತಿಯನ್ನು ಮನೆಗೆ ಸಾಗಿಸಿದ ಸ್ಪರ್ಧಿಗಳು, ಪುಳಕಿತಗೊಂಡ ಚಿಣ್ಣರು, ವಯಸ್ಸಿನ ಬೇಧ ಭಾವವಿಲ್ಲದೆ ಒಂದೇ ಸೂರಿನಡಿ ಮೂರ್ತಿ ತಯಾರಿಸಿ ಖುಷಿಪಟ್ಟ ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರು…….

    ರಾಸಾಯನಿಕ ಬಣ್ಣಲೇಪಿತ ಮೂರ್ತಿಗಳ ಬದಲು ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಬೆಂಗಳೂರು ಗಣೇಶ ಉತ್ಸವ ಸಹಯೋಗದಲ್ಲಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪರಿಸರ ಸ್ನೇಹಿ ಗಣೇಶ ಹಬ್ಬ-2022’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.

    ಒಂದೇ ಸೂರಿನಡಿ 3,308 ಗಣಪ ತಯಾರಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಕೆಎಸ್‌ಪಿಸಿಬಿ

    ಒಂದೇ ಸೂರಿನಡಿ 10 ಸಾವಿರ ಗಣೇಶ ಮೂರ್ತಿ ತಯಾರಿಸಲು ಕೆಎಸ್‌ಪಿಸಿಬಿ ಉದ್ದೇಶ ಹೊಂದಿತ್ತು. 3,800 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕರು ಉಚಿತವಾಗಿ ನೋಂದಾಯಿಸಿಕೊಂಡು ಭಾಗಿಯಾಗಿದ್ದರು. ನೂರಿತ ಕಲಾವಿದರು ಗಣೇಶ ಮೂರ್ತಿ ತಯಾರಿಸುವ ಬಗ್ಗೆ ಸ್ಪರ್ಧಿಗಳಿಗೆ ಹೇಳಿಕೊಟ್ಟರು. ಇದಕ್ಕಾಗಿ 2-3 ದೊಡ್ಡ ಪರದೆಯನ್ನು ಅಳವಡಿಸಲಾಗಿತ್ತು. ‘ನಾವೇನು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ’ ಚಿಕ್ಕ ಮಕ್ಕಳು ಗಣೇಶ ಮೂರ್ತಿ ಸಿದ್ಧಪಡಿಸಿದ್ದು ವಿಶೇಷವಾಗಿತ್ತು.

    ಒಂದೇ ಸೂರಿನಡಿ 3,308 ಗಣಪ ತಯಾರಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಕೆಎಸ್‌ಪಿಸಿಬಿ

    ಗಿನ್ನಿಸ್ ವಿಶ್ವ ದಾಖಲೆ: ಕಳೆದ ವರ್ಷ ಸಾಮಾಜಿಕ ಜಾಲತಾಣ ಮುಖೇನ ಪಿಒಪಿ ಗಣೇಶ ಬದಲು ಅರಿಶಿನ ಗಣೇಶ ಮೂರ್ತಿ ತಯಾರಿಸಿ ಬಳಸುವ ಬಗ್ಗೆ ‘ಅರಿಶಿನ ಗಣೇಶ ಅಭಿಯಾನ’ವನ್ನು ಕೆಎಸ್‌ಪಿಸಿಬಿ ಆಯೋಜಿಸಿತ್ತು. ಈ ಅಭಿಯಾನದಲ್ಲಿ 2,138 ಮೂರ್ತಿಗಳನ್ನು ತಯಾರಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿತು. ಏಷ್ಯಾ ಬುಕ್ ಆ್ ರೆಕಾರ್ಡ್‌ನಲ್ಲಿ ಇದು ದಾಖಲಾಗಿತ್ತು. ಈ ಬಾರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 3,800 ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಮೂರ್ತಿ ತಯಾರಿಸಿರುವುದು ಗಿನ್ನಿಸ್ ವಿಶ್ವ ದಾಖಲೆಯಾಗಿದೆ.

    ಒಂದೇ ಸೂರಿನಡಿ 3,308 ಗಣಪ ತಯಾರಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಕೆಎಸ್‌ಪಿಸಿಬಿ

    ಜೇಡಿ ಮಣ್ಣು ನೀಡಿಕೆ: ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಗಣೇಶ ಮೂರ್ತಿ ತಯಾರಿಕೆಗೆ ಹದ ಮಾಡಿದ 3.5 ಕೆಜಿ ಜೇಡಿ ಮಣ್ಣು, ಹೂವು ಮತ್ತು ಔಷಧ ಗುಣವುಳ್ಳ ಸಸ್ಯಗಳ ಬೀಜ, ತಯಾರಿಕೆ ಬೇಕಾದ ಕಡ್ಡಿ, ಒಂದು ನೀರಿನ ಲೋಟ, ಅರ್ಧ ಮೀಟರ್ ಬಟ್ಟೆ, ಒಂದು ಮರದ ಹಲಗೆಯನ್ನು ಕಿಟ್ ಮೂಲಕ ನೀಡಲಾಗಿತ್ತು. ಬಳಿಕ ಈ ಮೂರ್ತಿಯನ್ನು ಮನೆಗೆ ಸಾಗಿಸಲು ಪರಿಸ್ನೇಹಿ ಚೀಲವನ್ನು ಸ್ಪರ್ಧಿಗಳಿಗೆ ನೀಡಲಾಯಿತು. ಭಾಗವಹಿಸುವ ವಿದ್ಯಾರ್ಥಿಗಳನ್ನು ವಿವಿಧ ಪ್ರದೇಶಗಳಿಂದ ಕರೆತರಲು 20 ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಒಂದೇ ಸೂರಿನಡಿ 3,308 ಗಣಪ ತಯಾರಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಕೆಎಸ್‌ಪಿಸಿಬಿ

    ಬಾಲಿವುಡ್​ ಸಾಂಗ್​ಗೆ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ಮಹಿಳೆಯರು! ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

    VIDEO| ನೆಲಸಮ ಮಾಡಿದ ಬಳಿಕ ಹೀಗಿದೆ ನೋಡಿ ಸೂಪರ್​ ಟೆಕ್​ ಅವಳಿ ಗೋಪುರವಿದ್ದ ಪ್ರದೇಶ: ವಿಡಿಯೋ ವೈರಲ್​

    ಬಿಜೆಪಿ ನಾಯಕಿ ಸೊನಾಲಿ ಸಾವು ಪ್ರರಕಣ: ಗೋವಾ ಪೊಲೀಸರಿಂದ ಮತ್ತೊಬ್ಬ ಡ್ರಗ್ಸ್​ ಪೆಡ್ಲರ್​ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts