More

    ಅಮೆರಿಕದಲ್ಲಿ ಕಿಡ್ನ್ಯಾಪ್ ಆಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ ​

    ನವದೆಹಲಿ: ನಾಲ್ಕು ದಿನಗಳ ಹಿಂದೆ ಎಂಟು ತಿಂಗಳ ಹೆಣ್ಣು ಮಗು ಸೇರಿದಂತೆ ಅಮೆರಿಕದಲ್ಲಿ ಅಪಹರಣಕ್ಕೆ ಒಳಗಾಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಸದಸ್ಯರು ಕ್ಯಾಲಿಫೋರ್ನಿಯಾದಲ್ಲಿನ ಹಣ್ಣಿನ ತೋಟವೊಂದರಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.

    ಮೃತರನ್ನು ಎಂಟು ತಿಂಗಳ ಮಗು ಆರೋಹಿ ಧೇರಿ, ಆಕೆ ಪಾಲಕರಾದ ಜಾಸ್ಲಿನ್​ ಕೌರ್​ (27) ಮತ್ತು ಜಸದೀಪ್​ ಸಿಂಗ್​ (36) ಹಾಗೂ ಮಗುವಿನ ಚಿಕ್ಕಪ್ಪ ಅಮಾನ್​ದೀಪ್​ ಸಿಂಗ್​ (39) ಎಂದು ಗುರುತಿಸಲಾಗಿದೆ. ಕ್ಯಾಲಿಫೋರ್ನಿಯಾದ ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ನಡುವೆ ಇರುವ ಹಣ್ಣಿನ ತೋಟದಲ್ಲಿ ಶವಗಳು ಪತ್ತೆಯಾಗಿರುವುದಾಗಿ ಮರ್ಸಿಡ್ ಕೌಂಟಿ ಶೆರಿಫ್ ವರ್ನ್ ವಾರ್ನ್ಕೆ ಅವರು ತಿಳಿಸಿದ್ದಾರೆ.

    ತೋಟದಲ್ಲಿ ಕೆಲಸ ಮಾಡುವ ನೌಕರರು ಮೃತದೇಹಗಳನ್ನು ನೋಡಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತು. ಎಲ್ಲ ಶವಗಳು ಒಂದೇ ಕಡೆ ಬಿದ್ದಿದ್ದವು. ಇದು ನಿಜಕ್ಕೂ ಭಯಾನಕ. ಈ ಘಟನೆಯ ಬಳಿಕ ನನಗೆ ಆಗುತ್ತಿರುವ ಕೋಪವನ್ನು ವಿವರಿಸಲು ಆಗುತ್ತಿಲ್ಲ. ಇದೊಂದು ಅಮಾನವೀಯ ಘಟನೆ ಎಂದು ವರ್ನ್ ವಾರ್ನ್ಕೆ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಬುಧವಾರ ಸ್ಥಳೀಯ ಪೊಲೀಸರು ಕುಟುಂಬದ ಅಪಹರಣಕ್ಕೆ ಸಂಬಂಧಿಸಿದ ವೀಡಿಯೊವನ್ನು ಬಿಡುಗಡೆ ಮಾಡಿದರು. ವಿಡಿಯೋದಲ್ಲಿ ಅಪಹರಣಕಾರರು ಜಸದೀಪ್​ ಮತ್ತು ಅಮಾನ್​ದೀಪ್ ಕೈಗಳನ್ನು ಕಟ್ಟಿಕೊಂಡು ಮರ್ಸಿಡ್ ಕೌಂಟಿಯ ಕಟ್ಟಡವೊಂದರಿಂದ ಹೊರಬರುತ್ತಿರುವುದು ವಿಡಿಯೋದಲ್ಲಿದೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ಮಗು ಮತ್ತು ಆಕೆಯ ತಾಯಿ ಕಟ್ಟಡದಿಂದ ಅಪಹರಣಕಾರನೊಂದಿಗೆ ಹೊರಬರುತ್ತಾರೆ. ಘಟನಾ ಸ್ಥಳದಿಂದ ಹೊರಡುವ ಮೊದಲು ಕುಟುಂಬದ ಎಲ್ಲ ನಾಲ್ಕು ಸದಸ್ಯರನ್ನು ಟ್ರಕ್‌ನಲ್ಲಿ ಕರೆದೊಯ್ಯಲಾಯಿತು.

    ಅಪಹರಿಸಿದ ಮಾರನೇ ದಿನ ಅಂದರೆ ಮಂಗಳವಾರ ಕುಟುಂಬದ ಸದಸ್ಯರಲ್ಲಿ ಒಬ್ಬರ ಎಟಿಎಂ ಕಾರ್ಡ್​ ಅನ್ನು ಅಪಹರಣಕಾರ ಬಳಸಿರುವುದು ಪೊಲೀಸ್​ ತನಿಖೆಗೆ ಮಹತ್ವದ ತಿರುವು ನೀಡಿತು. ಮರ್ಸೀಡ್​ ಕೌಂಟಿಯ ಅಟ್ವಾಟರ್​ ಏರಿಯಾದಲ್ಲಿ ಎಟಿಎಂ ಬಳಸಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ನೆರವಿನಿಂದ ಅಪಹಕಾರಣನ ಮುಖವನ್ನು ಪತ್ತೆಹಚ್ಚಲಾಯಿತು. ಅಪಹರಿಸುವ ಸ್ಥಳದಲ್ಲಿದ್ದ ವ್ಯಕ್ತಿಗು ಮತ್ತು ಎಟಿಎಂ ಕೇಂದ್ರದಲ್ಲಿದ್ದ ವ್ಯಕ್ತಿಗೂ ಸಾಮ್ಯತೆ ಇದ್ದಿದ್ದರಿಂದ ಆತನೇ ಅಪಹರಣಕಾರ ಎಂದು ಖಚಿತಪಡಿಸಿಕೊಳ್ಳಲಾಯಿತು.

    ಇದಾದ ಬಳಿಕ ಕಾರ್ಯಾಚರಣೆಗೆ ಇಳಿದ ಮರ್ಸೀಡ್​ ಕೌಂಟಿ ಪೊಲೀಸರು 48 ವರ್ಷದ ಮ್ಯಾನುಯೆಲ್ ಸಲ್ಗಾಡೊ ಎಂಬಾತನನ್ನು ವಶಕ್ಕೆ ಪಡೆದರು. ಅಪಹರಣ ನಡೆದ ಒಂದು ದಿನದ ಬೆನ್ನಲ್ಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರವಾಗಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆರೋಪಿಗೆ ನರಕದಲ್ಲಿ ವಿಶೇಷ ಸ್ಥಾನವಿದೆ ಎಂದು ಶೆರಿಫ್ ವಾರ್ನ್ಕೆ ಮಾಧ್ಯಮಕ್ಕೆ ತಿಳಿಸಿ, ಭಾರತೀಯ ಕುಟುಂಬದ ಸಾವಿನ ಬಗ್ಗೆ ತೀವ್ರ ದುಃಖ ಹೊರಹಾಕಿದರು.

    ಪಂಜಾಬ್‌ನ ಹೋಶಿಯಾರ್‌ಪುರದ ಹರ್ಸಿ ಪಿಂಡ್‌ ಮೂಲದ ಕುಟುಂಬ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿತ್ತು. ಅಪಹರಣಕ್ಕೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ದೇವರ ಮೂರ್ತಿಗಾಗಿ ಜಾತ್ರೆಯಲ್ಲಿ ಬಡಿದಾಡಿಕೊಳ್ಳುವ ಜನ! ಕರ್ನಾಟಕದ ಗಡಿಯೊಲ್ಲೊಂದು ಭಯಾನಕ ಆಚರಣೆ

    ನಡೆದಿದ್ದು ಸಾಕು ಕಾರಲ್ಲಿ ಬನ್ನಿ… ಭಾರತ್​ ಜೋಡೋ ಯಾತ್ರೆ ವೇಳೆ ಅಮ್ಮನ ಬಗ್ಗೆ ಕಾಳಜಿ ವಹಿಸಿದ ರಾಗಾ

    ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಕಂಪಿಸಿದ ಭೂಮಿ: ಬೆಚ್ಚಿಬಿದ್ದ ಜನತೆ, 4.1 ತೀವ್ರತೆಯ ಭೂಕಂಪನ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts