More

    ನಡೆದಿದ್ದು ಸಾಕು ಕಾರಲ್ಲಿ ಬನ್ನಿ… ಭಾರತ್​ ಜೋಡೋ ಯಾತ್ರೆ ವೇಳೆ ಅಮ್ಮನ ಬಗ್ಗೆ ಕಾಳಜಿ ವಹಿಸಿದ ರಾಗಾ

    ಮಂಡ್ಯ: ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸ್ಥಗಿತಗೊಂಡಿದ್ದ ಭಾರತ್​ ಜೋಡೋ ಯಾತ್ರೆ ಇಂದು ಮತ್ತೆ ಆರಂಭವಾಗಿದೆ. ಇಂದು ಬೆಳಗ್ಗೆ 6.30ಕ್ಕೆ ಮಂಡ್ಯ ಜಿಲ್ಲೆಯ ಪಾಂಡವಪುರದ ಬೆಳ್ಳಾಳೆಯಿಂದ ಪಾದಯಾತ್ರೆ ಆರಂಭವಾಯಿತು. ಇಂದಿನ ಪಾದಯಾತ್ರೆಯ ವಿಶೇಷತೆ ಏನೆಂದರೆ, ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಪುತ್ರ ರಾಹುಲ್​ ಗಾಂಧಿ ಜೊತೆ ಹೆಜ್ಜೆ ಹಾಕಿದರು.

    ಕೆಲ ದೂರ ಕಾರಿನಲ್ಲಿ ಬಂದ ಸೋನಿಯಾ ಗಾಂಧಿ ಅವರು ಜಕ್ಕನಹಳ್ಳಿ ಬಳಿ ಪಾದಯಾತ್ರೆ ಸೇರಿಕೊಂಡರು. ಅವರ ಎಡ ಮತ್ತು‌ ಬಲದಲ್ಲಿ ಡಿ.ಕೆ.ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಅವರು ಸಾಥ್​ ನೀಡಿದರು. ಅಲ್ಲದೆ, ಶಾಸಕಿಯರಾದ ಅಂಜಲಿ ನಿಂಬಾಳ್ಕರ್, ರೂಪಕಲಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸಹ ಸೋನಿಯಾ ಗಾಂಧಿ ಅವರ ಜೊತೆ ಹೆಜ್ಜೆ ಹಾಕಿದರು.

    ಸುಮಾರು ಹದಿನೈದು ನಿಮಿಷಗಳ ಕಾಲ ಒಂದು ಕಿ.ಮೀ ನಡೆದ ಸೋನಿಯಾ ಗಾಂಧಿ ಅವರು ಪಾದಯಾತ್ರೆಯಿಂದ ತೆರಳಿ, ಮತ್ತೆ ತಮ್ಮ ಕಾರನ್ನೇರಿದರು. ಪಾದಯಾತ್ರೆಯ ನಡುವೆ ಅಮ್ಮಾಸ್ ಹೊಟೇಲ್​ಗೆ ತೆರಳಿದ ಸೋನಿಯಾ, ರಾಹುಲ್ ಹಾಗೂ ರಾಜ್ಯ ನಾಯಕರು ತಿಂಡಿ ತಿಂದು, ಟೀ ಮತ್ತು ಕಾಫಿ ಸವಿದರು.

    ನಾಯಕರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನ
    ಪಾದಯಾತ್ರೆ ನಡುವೆ ರಾಹುಲ್​ ಗಾಂಧಿ ಅವರು ಕೆ.ಹೆಚ್.ಮುನಿಯಪ್ಪ ಅವರನ್ನು ವಿಶ್ವಾಸಕ್ಕೆ ತೆಗದುಕೊಳ್ಳುವ ಪ್ರಯತ್ನ ಮಾಡಿದರು. ಮುನಿಯಪ್ಪ ಅವರ ಹೆಗಲ ಮೇಲೆ ಕೈ ಹಾಕಿ ಆತ್ಮೀಯತೆಯಿಂದ ಮಾತಾಡಿದರು. ಈ ಸಂದರ್ಭದಲ್ಲಿ ರಾಹುಲ್ ಜತೆ ಸಿದ್ದರಾಮಯ್ಯ, ಡಿಕೆಶಿ, ಮುನಿಯಪ್ಪ, ಚಲುವರಾಯಸ್ವಾಮಿ ಹೆಜ್ಜೆ ಹಾಕಿದರು.

    ನಡೆದಿದ್ದು ಸಾಕು ಕಾರಲ್ಲಿ ಬನ್ನಿ
    ಪಾದಯಾತ್ರೆಯ ವೇಳೆ ಸೋನಿಯಾ ಗಾಂಧಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಪುತ್ರ ರಾಹುಲ್​ ಗಾಂಧಿ, ನಡೆದಿದ್ದು ಸಾಕು ಕಾರಲ್ಲಿ ಬನ್ನಿ ಎಂದರು. ಅಲ್ಲದೆ, ತಾವೇ ಕಾರಿನವರೆಗೂ ಕರೆದೊಯ್ದು ಕಾರು ಹತ್ತಿಸಿ ಕೂರಿಸಿದರು.

    ಪಾದಯಾತ್ರೆ ಬಹಿಷ್ಕಾರ
    ಪಾದಯಾತ್ರೆ ವೇಳೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಮಾಧ್ಯಮಗಳ ಮೇಲೆ ಪೊಲೀಸರು ರೌಡಿಗಳಂತೆ ವರ್ತಿಸಿದ್ದು, ಈ ಹಿನ್ನೆಲೆಯಲ್ಲಿ ಭಾರತ್ ಜೋಡೋ ಚಿತ್ರೀಕರಣಕ್ಕೆ ಮಾಧ್ಯಮಗಳು ಬಹಿಷ್ಕಾರ ಹಾಕಿವೆ.

    ಮಾವಿನ ಹಣ್ಣುಗಳನ್ನು ಕದ್ದು ಸಸ್ಪೆಂಡ್​ ಆದ ಪೊಲೀಸ್​ ಅಧಿಕಾರಿಯ ಹಿನ್ನೆಲೆ ತಿಳಿದು ಅಧಿಕಾರಿಗಳೇ ಶಾಕ್​!

    ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಬಿಜೆಪಿ ಶಾಸಕ ಅರವಿಂದ ಬೆಲ್ಲದ ಚಿಕ್ಕಪ್ಪ ಶಿವಣ್ಣ ಬೆಲ್ಲದ ನಿಧನ

    ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಕಂಪಿಸಿದ ಭೂಮಿ: ಬೆಚ್ಚಿಬಿದ್ದ ಜನತೆ, 4.1 ತೀವ್ರತೆಯ ಭೂಕಂಪನ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts