More

    #BBK9: ಬಿಗ್​ಬಾಸ್​ ಸೀಸನ್​ 9 ನಡೆಸಿಕೊಡಲು ಕಿಚ್ಚ ಸುದೀಪ್​ ಪಡೆದ ಸಂಭಾವನೆ ಇಷ್ಟೊಂದಾ?

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರು ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ಇನ್ನೂ ಕೆಲವೇ ವಾರಗಳಲ್ಲಿ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಆರಂಭವಾಗಲಿದೆ. ಈಗಾಗಲೇ 8 ಆವೃತ್ತಿಗಳು ಮುಗಿದ್ದು, 9ನೇ ಆವೃತ್ತಿಗೆ ವೇದಿಕೆ ಸಜ್ಜಾಗುತ್ತಿದೆ. ಕಿಚ್ಚನ ನಿರೂಪಣೆ ಬಗ್ಗೆ ಯಾರಿಗೂ ವಿವರಿಸುವ ಅಗತ್ಯವೇ ಇಲ್ಲ. ಏಕೆಂದರೆ, ಇಡೀ ಬಿಗ್​ಬಾಸ್​ ಶೋನ ಪ್ರಮುಖ ಆಕರ್ಷಣೆಯೇ ಕಿಚ್ಚ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ನಿರೂಪಣೆ ಶೈಲಿ, ಸ್ಟೈಲಿಶ್​ ಅವತಾರ ಹಾಗೂ ಕಾಮಿಡಿ ಟೈಂಗೆ ಪ್ರತ್ಯೇಕ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

    ಈ ಬಾರಿಯ ಬಿಗ್​ಬಾಸ್​ ಶೋನಲ್ಲಿ ಕಿಚ್ಚ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡುವ ಕಾತರದಲ್ಲಿ ಎಲ್ಲರು ಇದ್ದಾರೆ. ಇದರ ನಡುವೆ ಈ ಬಾರಿ ಶೋ ನಡೆಸಿಕೊಡಲು ಕಿಚ್ಚ ಪಡೆಯುತ್ತಿರುವ ಸಂಭಾವನೆ ಎಷ್ಟು? ಎಂಬ ಕತೂಹಲ ಎಲ್ಲರಲ್ಲೂ ಇದೆ. ಮೂಲಗಳ ಪ್ರಕಾರ ಕಿಚ್ಚ ಸುದೀಪ್​ ಅವರು ತಮ್ಮ ಸಂಭಾವನೆಯನ್ನು ದ್ವಿಗುಣ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸುದೀಪ್ 2015ರಲ್ಲಿ ಕಲರ್ಸ್ ವಾಹಿನಿಯೊಂದಿಗೆ 5 ಸೀಸನ್‌ಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರಂತೆ. ಈ ಐದು ಸೀಸನ್‌ಗಳಿಗೆ ಸುದೀಪ್ ಒಟ್ಟು 20 ಕೋಟಿ ರೂ. ಪಡೆದಿದ್ದಾರೆ. ಇದೀಗ ಈ ಒಪ್ಪಂದ ಮುಗಿದಿದ್ದು, ಸುದೀಪ್ ತಮ್ಮ ಸಂಭಾವನೆಯನ್ನು ಪ್ರತಿ ಸೀಸನ್‌ಗೆ 8 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿದೆ. ಸದ್ಯಕ್ಕೆ, ಈ ಸುದ್ದಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಸ್ಪಷ್ಟೀಕರಣಗಳಿಲ್ಲ. ವರದಿಗಳ ಪ್ರಕಾರ, ತಯಾರಕರು ಈ ಶುಲ್ಕವನ್ನು ಪಾವತಿಸಲು ಸಿದ್ಧರಿದ್ದಾರೆ. ಬಿಗ್ ಬಾಸ್ ಕನ್ನಡ ಸಖತ್ ಟಿಆರ್‌ಪಿ ಪಡೆಯಲು ಸುದೀಪ್ ಮುಖ್ಯ ಕಾರಣ ಎಂದು ಅವರು ಭಾವಿಸುತ್ತಾರೆ.

    ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಅವರ ಅಭಿಮಾನಿಗಳು ಕಿಚ್ಚನ ಕಾರ್ಯಕ್ರಮ ನಿರೂಪಣೆಯನ್ನು ಸಲ್ಮಾನ್ ಖಾನ್ ಅವರ ನಿರೂಪಣೆಗೆ ಹೋಲಿಸುತ್ತಿದ್ದಾರೆ ಮತ್ತು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳಲು ಅರ್ಹರು ಎಂದು ಹೇಳುತ್ತಿದ್ದಾರೆ. ಏಕೆಂದರೆ ಬಿಗ್ ಬಾಸ್ ಕನ್ನಡದ TRP ರೇಟಿಂಗ್, ಸೀಸನ್ 5 ರಿಂದ ಸತತವಾಗಿ ಹೆಚ್ಚುತ್ತಿದೆ. ಬಿಬಿಕೆ ತಯಾರಕರು ಸಹ ಇದನ್ನು ಒಪ್ಪಿಕೊಂಡಿದ್ದಾರೆ. ಸುದೀಪ್ ಅವರ ಟೈಟ್ ಶೆಡ್ಯೂಲ್​ನಿಂದಾಗಿ ಈ ವರ್ಷ ಬಿಗ್ ಬಾಸ್ ಕನ್ನಡ ತಡವಾಗಿದೆ.

    ಅಂದಹಾಗೆ ಬಿಬಿಕೆ 9 ರ ಪ್ರೋಮೋ ಶೂಟ್ ಮುಗಿದಿದೆ ಮತ್ತು ಜುಲೈ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, BBK9 ಆಗಸ್ಟ್ ಮಧ್ಯದಲ್ಲಿ ಪ್ರೀಮಿಯರ್ ಆಗಬಹುದು ಎಂಬ ಮಾಹಿತಿ ಇದೆ. (ಏಜೆನ್ಸೀಸ್​)

    ಮದುವೆಗೆ ರೆಡಿಯಾದ ಉಪಾಧ್ಯಕ್ಷ; ಚಿಕ್ಕಣ್ಣನ ಪ್ಯಾನ್ ಇಂಡಿಯಾ ಕನಸು..

    ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿ; ಅಧಿಕೃತ ಘೋಷಣೆ: ಅಭಿನಂದನೆಗಳ ಮಹಾಪೂರ..

    ಮತ ಎಣಿಕೆ ನಡೆದಿದ್ದು ಹೀಗೆ..; ರಾಷ್ಟ್ರಪತಿ ಚುನಾವಣೆ ಅಂದಿನಿಂದ ಇಂದಿನವರೆಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts