More

    ಮದುವೆಗೆ ರೆಡಿಯಾದ ಉಪಾಧ್ಯಕ್ಷ; ಚಿಕ್ಕಣ್ಣನ ಪ್ಯಾನ್ ಇಂಡಿಯಾ ಕನಸು..

    | ಹರ್ಷವರ್ಧನ್ ಬ್ಯಾಡನೂರು

    ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗಿರೋದು ಗೊತ್ತೇ ಇದೆೆ. ಅವರು ನಾಯಕನಾಗಿರುವ ‘ಉಪಾಧ್ಯಕ್ಷ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಜುಲೈ 27ರಿಂದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಅದರ ನಡುವೆ ‘ವಿಜಯವಾಣಿ’ ಜತೆ ಮಾತುಕತೆಗೆ ಸಿಕ್ಕ ಚಿಕ್ಕಣ್ಣ ನಾಯಕನಾಗಿ ಮೊದಲ ಚಿತ್ರ, ಮುಂದಿನ ಚಿತ್ರಗಳು, ಪ್ಯಾನ್ ಇಂಡಿಯಾ ಕನಸು, ಮದುವೆ … ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

    ‘‘ಅಧ್ಯಕ್ಷ’ ಚಿತ್ರದ ಮುಂದುವರಿದ ಭಾಗವಾಗಿದ್ದು, ಕಥೆಗೆ ಪೂರಕವಾಗಿರುವ ಕಾರಣ ‘ಉಪಾಧ್ಯಕ್ಷ’ ಚಿತ್ರದಲ್ಲಿ ನಾಯಕನಾಗಲು ಒಪ್ಪಿಕೊಂಡೆ. ಹಾಗಂತ ಒಮ್ಮೆ ಹೀರೋ ಆದ ಬಳಿಕ ಮತ್ತೆ ಪೋಷಕ ಪಾತ್ರದಲ್ಲಿ ಅಥವಾ ಕಾಮಿಡಿಯನ್ ಆಗಿ ನಟಿಸಲ್ಲ ಅಂತಲ್ಲ. ಹೀರೋ ಆದರೇನು? ಕಾಮಿಡಿಯನ್ ಆದರೇನು? ಕೆಲಸ ಮಾಡಬೇಕಷ್ಟೇ. ಶರಣ್ ಸರ್ ಜತೆ ಹಾಗೂ ಧ್ರುವ ಸರ್ಜಾ ಅವರ ಜತೆ ‘ಮಾರ್ಟಿನ್’ನಲ್ಲೂ ಕಾಮಿಡಿಯನ್ ಆಗಿದ್ದೇನೆ’ ಎಂದು ತಾವು ನಟಿಸುತ್ತಿರುವ ಚಿತ್ರಗಳ ಬಗ್ಗೆ ಹೇಳಿಕೊಳ್ಳುತ್ತಾರೆ ಚಿಕ್ಕಣ್ಣ. ಎಲ್ಲವೂ ಅಂದುಕೊಂಡಂತಾಗಿದ್ದರೆ ಎರಡು ವರ್ಷಗಳ ಹಿಂದೆಯೇ ‘ಉಪಾಧ್ಯಕ್ಷ’ ಸೆಟ್ಟೇರಬೇಕಿತ್ತು. ‘ಆದರೆ ಈಗ ಕಾಲ ಕೂಡಿಬಂದಿದೆ’ ಎನ್ನುತ್ತಾರೆ ಅವರು.

    ಹಾಗಂತ ಅವರಿಗೆ ಅಲ್ಲಿಯವರೆಗೂ ಹೀರೋ ಪಾತ್ರಗಳು ಬಂದಿರಲಿಲ್ಲ ಅಂತೇನಲ್ಲ. ‘‘ರಾಜಾಹುಲಿ’ ಹಾಗೂ ‘ಮಾಸ್ಟರ್​ಪೀಸ್’ ಸಮಯದಲ್ಲೇ ಹಲವು ಚಿತ್ರಗಳಲ್ಲಿ ನಾಯಕನಾಗಲು ಆಫರ್ ಬಂದಿತ್ತು. ಆದರೆ ಆಗ ನನಗೆ ಅನುಭವ ಕಡಿಮೆಯಿದ್ದ ಕಾರಣ, ಬೇಡ ಅಂದುಬಿಟ್ಟೆ. ಈಗ ಹತ್ತು ವರ್ಷಗಳ ಅನುಭವವಿದೆ. ಸಿನಿಮಾ ಬಗ್ಗೆ ಜ್ಞಾನವಿದೆ. ಹೀಗಾಗಿ ಒಪ್ಪಿಕೊಂಡೆ’ ಎಂದು ತಾವು ನಾಯಕನಾಗಲು ಒಪ್ಪಿದ ಕುರಿತು ಹೇಳಿಕೊಳ್ಳುತ್ತಾರೆ ಚಿಕ್ಕಣ್ಣ.

    ಇಂತಹ ಚಿಕ್ಕಣ್ಣ ಅವರಿಗೆ ಇದುವರೆಗಿನ ಸಿನಿಮಾ ಪಯಣ ಖುಷಿ ಕೊಟ್ಟಿದೆಯಂತೆ. ‘ನಾನು ಚಿತ್ರರಂಗಕ್ಕೆ ಬರ್ತೀನಿ, ಚಿತ್ರರಂಗ ನನ್ನನ್ನು ಇಷ್ಟರ ಮಟ್ಟಿಗೆ ಕೈಹಿಡಿಯುತ್ತೆ ಅಂತ ಅಂದುಕೊಂಡಿರಲಿಲ್ಲ. ಒಂದು ಸೀನ್ ಸಿಕ್ಕರೆ ಸಾಕು ಅಂತ ಚಿತ್ರರಂಗಕ್ಕೆ ಬಂದವನು ನಾನು. ಈ ಜರ್ನಿ ಖುಷಿ ಕೊಟ್ಟಿದೆ. ಜನರಿಗೂ ಇಷ್ಟವಾಗಿದ್ದೀನಲ್ಲಾ ಅನ್ನೋ ಸಮಾಧಾನವೂ ಇದೆ’ ಎಂದು ನಗುತ್ತಾರೆ ಚಿಕ್ಕಣ್ಣ.

    ಅಂದಹಾಗೆ, ಅವರಿಗೆ ನೆಗಟಿವ್ ಪಾತ್ರದಲ್ಲಿ ನಟಿಸುವ ಆಸೆಯಂತೆ. ‘ನನಗೆ ನೆಗಟಿವ್ ಪಾತ್ರ ತುಂಬ ಇಷ್ಟ. ನಾನೂ ತುಂಬ ಜನರನ್ನ ಕೇಳಿದೀನಿ. ಆದರೆ, ಯಾರೂ ಕೊಡಲಿಲ್ಲ. ಮುಂದೆ ಅವಕಾಶ ಸಿಕ್ಕಿದರೆ ನಟಿಸುತ್ತೀನಿ’ ಎನ್ನುತ್ತಾರೆ. ‘ರ್ಯಾಂಬೋ 2’ ಬಳಿಕ ಮತ್ತೆ ಸಿನಿಮಾಗಳನ್ನು ನಿರ್ವಿುಸುವ ಆಸೆಯಿದೆಯಂತೆ. ಆದರೆ ನಿರ್ದೇಶನದಿಂದ ದೂರ ಅಂತಾರೆ ಚಿಕ್ಕಣ್ಣ. ಚಿಕ್ಕಣ್ಣ ಅವರಿಗೆ ಪ್ಯಾನ್ ಇಂಡಿಯಾ ಚಿತ್ರ ಮಾಡುವ ಕನಸೂ ಇದೆಯಂತೆ. ‘ಎಲ್ಲ ಜಾನರ್​ಗಳಲ್ಲೂ ಪ್ಯಾನ್ ಇಂಡಿಯಾ ಚಿತ್ರ ಮಾಡಲಾಗುವುದಿಲ್ಲ. ದೊಡ್ಡ ಬಜೆಟ್ ಬೇಕು. ಅದಕ್ಕೆ ಮೊದಲು ನಮ್ಮ ಮಾರ್ಕೆಟ್ ಬೆಳೆಯಬೇಕು. ನನ್ನ ಹತ್ತಿರವೂ ಕಥೆಯಿದೆ. ನೋಡೋಣ’ ಎಂದು ಭರವಸೆಯಿಂದ ಮಾತನಾಡುತ್ತಾರೆ ಚಿಕ್ಕಣ್ಣ.

    ಇದೆಲ್ಲದರ ನಡುವೆ ಚಿಕ್ಕಣ್ಣ ಅವರಿಗೆ ಮನೆಯವರಿಂದ ಮದುವೆಗೆ ಒತ್ತಡವೂ ಇದೆಯಂತೆ. ಹೀಗಾಗಿಯೇ ‘ಉಪಾಧ್ಯಕ್ಷ’ ರಿಲೀಸ್ ಆದ ಬಳಿಕ ಮದುವೆ ಫಿಕ್ಸ್ ಎನ್ನುತ್ತಾರವರು.

    ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ

    ಪ್ರೇಯಸಿಯ ರುಂಡ ಕಡಿದ ಪ್ರೇಮಿ; ಕೊಲೆಗಾರನನ್ನು ತನಗೊಪ್ಪಿಸಿ ಎಂದು ಸ್ಟೇಷನ್​ ಮುಂದೆ ರೊಚ್ಚಿಗೆದ್ದ ಅಣ್ಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts