More

    ಮತ ಎಣಿಕೆ ನಡೆದಿದ್ದು ಹೀಗೆ..; ರಾಷ್ಟ್ರಪತಿ ಚುನಾವಣೆ ಅಂದಿನಿಂದ ಇಂದಿನವರೆಗೆ..

    ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುಮು ಭರ್ಜರಿ ಜಯ ಸಾಧಿಸಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲಿ ಸಂಸದರ ಮತಗಳನ್ನು ಎಣಿಸಲಾಯಿತು. ಇದರಲ್ಲಿ ಮುಮುಗೆ 540 ಮತಗಳು ಸಂದಾಯವಾದವು. ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾಗೆ 208 ಮತಗಳು ದೊರಕಿದವು. 15 ಮತ ಅಮಾನ್ಯಗೊಂಡವು. ಸಂಸದರ ಮತಗಳಲ್ಲಿ ಮುಮುಗೆ ಸಿಕ್ಕ ಮತಮೌಲ್ಯ 5,23,600. (ಶೇ. 72.19). ಯಶವಂತ ಸಿನ್ಹಾಗೆ ದೊರಕಿದ ಮತಮೌಲ್ಯ 1,45,600 (ಶೇ.27.81) ಪ್ರತಿಯೊಬ್ಬ ಸಂಸದರ ಮತಮೌಲ್ಯ 700 (ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲ).

    • ಎರಡನೇ ಸುತ್ತಿನಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್​ಗಢ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳ ಶಾಸಕರ ಮತ ಎಣಿಕೆ ನಡೆಯಿತು. ಮಾನ್ಯವಾದ 1,138 ಮತಗಳ (1,49,575 ಮತಮೌಲ್ಯ) ಪೈಕಿ 809 ಮುಮುಗೆ ಸಂದಾಯವಾಯಿತು (1,05,299 ಮತಮೌಲ್ಯ). ಸಿನ್ಹಾಗೆ 329 ಶಾಸಕರ ಮತ ದೊರಕಿತು. (44,276 ಮತಮೌಲ್ಯ)
    • ಮೂರನೇ ಸುತ್ತಿನಲ್ಲಿ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್ ರಾಜ್ಯಗಳಲ್ಲಿ ದಾಖಲಾದ ಮತಗಳನ್ನು ಎಣಿಸಲಾಯಿತು. ಮಾನ್ಯವೆಂದು ಪರಿಗಣಿಸಲಾದ 1,333 (1,65,664 ಮತಮೌಲ್ಯ) ಮತಗಳಲ್ಲಿ ಮುಮು 812 ಮತ ಗಳಿಸಿದರು. ಸಿನ್ಹಾಗೆ 521 ಮತಗಳು ಪ್ರಾಪ್ತವಾದವು. ಈ ಸುತ್ತಿನಲ್ಲೇ ಮುಮು ಗೆಲುವಿನ ಖಾತ್ರಿಗೆ ಅಗತ್ಯವಾದ ಶೇ. 50ರಷ್ಟು ಮತವನ್ನು ಮೀರಿ 5,77,777 ಮತಮೌಲ್ಯ ಪಡೆದರು. ಸಿನ್ಹಾಗೆ ಮೂರನೇ ಸುತ್ತಿನ ಅಂತ್ಯಕ್ಕೆ ಸಿಕ್ಕಿದ್ದು 2,61,062 ಮತಮೌಲ್ಯ. ್ಝಾಸಕರ ಮತಗಳ ಪೈಕಿ ಮಾನ್ಯವಾದ 4,754ರಲ್ಲಿ ಮುಮುಗೆ 2,824 ಮತ್ತು ಸಿನ್ಹಾಗೆ 1,877 ಮತ ಪ್ರಾಪ್ತಿ.

    ಸೋಲೊಪ್ಪಿದ ಸಿನ್ಹಾ: ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಮುಮು ಶೇ.50ರಷ್ಟು ಮತಗಳಿಸುತ್ತಿದಂತೆಯೇ ಅವರನ್ನು ಯಶವಂತ ಸಿನ್ಹಾ ಅಭಿನಂದಿಸಿದರು. ‘ದೇಶದ ಮೇಲಿನ ಪ್ರೀತಿಯಿಂದ ನನ್ನ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸಿರುವೆ. ಪ್ರಚಾರ ಸಮಯದಲ್ಲಿ ನಾನು ಪ್ರಸ್ತಾಪಿಸಿದ ವಿಷಯಗಳು ಪ್ರಸ್ತುತವಾಗಿಯೇ ಉಳಿದಿವೆ’ ಎಂದರು.

    ಮತ ಎಣಿಕೆ ನಡೆದಿದ್ದು ಹೀಗೆ..; ರಾಷ್ಟ್ರಪತಿ ಚುನಾವಣೆ ಅಂದಿನಿಂದ ಇಂದಿನವರೆಗೆ..
    ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುಮು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೂಗುಚ್ಛ ನೀಡಿ ಶುಭ ಕೋರಿದರು.

    ಸಂತಾಲಿ ಬುಡಕಟ್ಟಿನ ಹೆಣ್ಮಗಳು

    ಸಂತಾಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುಮು, ಒಡಿಶಾದ ಮಯೂರ್​ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದ ಕುಸುಮಿ ಪ್ರದೇಶದಲ್ಲಿ 1958ರ ಜೂ.20ರಂದು ಜನಸಿದರು. ಅವರ ತಂದೆ ಮತ್ತು ತಾತ ಗ್ರಾಮ ಪಂಚಾಯಿತಿಯ ಮುಖ್ಯಸ್ಥರಾಗಿದ್ದರು. ಕಲಾ ವಿಷಯದಲ್ಲಿ ಪದವೀಧರೆಯಾದ ಮುಮು, ಕೆಲವು ಕಾಲ ಶಿಕ್ಷಕಿಯಾಗಿದ್ದರು. 1997ರಲ್ಲಿ ರಾಯರಂಗಾಪುರ ನಗರ ಪಂಚಾಯಿತಿಗೆ ಆಯ್ಕೆ ಆಗುವ ಮೂಲಕ ರಾಜಕೀಯ ಪ್ರವೇಶಿಸಿದರು. ನಂತರ ಒಡಿಶಾ ವಿಧಾನಸಭೆಗೆ ಎರಡು ಸಾರಿ ಆಯ್ಕೆ ಆಗಿದ್ದರು. 2000ರಿಂದ 2004ರವರೆಗೆ ಬಿಜೆಡಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿದ್ದರು. 2015ರಿಂದ 2021ರವರೆಗೆ ಜಾರ್ಖಂಡ್​ನ ರಾಜ್ಯಪಾಲೆ ಆಗಿದ್ದರು. ಮುಮು ಕುಟುಂಬದಲ್ಲಿ ದುರಂತಗಳು ಮೇಲಿಂದ ಮೇಲೆ ಎರಗಿತು. ಅವರ ಓರ್ವ ಪುತ್ರ 2009ರಲ್ಲಿ ನಿಗೂಢವಾಗಿ ಸಾವನ್ನಪ್ಪಿದರೆ, ಇನ್ನೊಬ್ಬ ಮಗ 2012ರಲ್ಲಿ ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟ. ದ್ರೌಪದಿ ಪತಿ ಶ್ಯಾಮಚರಣ ಮುಮು ಹೃದಯಾಘಾತದಿಂದ ಅಸುನೀಗಿದರು. ಏಕಮಾತ್ರ ಪುತ್ರಿ ಇದ್ದು, ಅಕೆ ಪತಿಯೊಂದಿಗೆ ಭುವನೇಶ್ವರದಲ್ಲಿ ನೆಲೆಸಿದ್ದಾರೆ. ಒಡಿಶಾದಿಂದ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲಿಗರು ಮುರ್ಮು. ಭಾರತದಲ್ಲಿ 700ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿದ್ದು, 10 ಕೋಟಿಗೂ ಅಧಿಕ ಜನಸಂಖ್ಯೆ ಇದೆ.

    ಮತ ಎಣಿಕೆ ನಡೆದಿದ್ದು ಹೀಗೆ..; ರಾಷ್ಟ್ರಪತಿ ಚುನಾವಣೆ ಅಂದಿನಿಂದ ಇಂದಿನವರೆಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts