More

    ಕೆಜಿಎಫ್​ ಬ್ಯೂಟಿ ಶ್ರೀನಿಧಿ ಶೆಟ್ಟಿ ಸಂಭಾವನೆ ಡಿಮ್ಯಾಂಡ್​ ಕೇಳಿ ಶಾಕ್​ ಆದ ಟಾಲಿವುಡ್​ ಮಂದಿ!

    ಹೈದರಾಬಾದ್​: ಕೆಜಿಎಫ್​ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಶ್ರೀನಿಧಿ, ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಕೆಜಿಎಫ್​ ಚಾಪ್ಟರ್​ 1ಕ್ಕಿಂತ ಕೆಜಿಎಫ್​ ಚಾಪ್ಟರ್​ 2ನ ಅದ್ಭುತ ಯಶಸ್ಸಿನಿಂದ ಶ್ರೀನಿಧಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮಾಜಿ ಬ್ಯೂಟಿ ಕ್ವೀನ್​ ತಮ್ಮ ಮುಂದಿನ ಕೊಬ್ರಾ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದು, ಮತ್ತೆ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಶ್ರೀನಿಧಿ ಕುರಿತ ಭಾರೀ ಸುದ್ದಿಯೊಂದು ಟಾಲಿವುಡ್​ ಗಲ್ಲಿಯಿಂದ ಕೇಳಿಬಂದಿದೆ.

    ಯಾವುದು ಆ ಸುದ್ದಿ ಅಂದರೆ, ಶ್ರೀನಿಧಿ ಅವರ ಸಂಭಾವನೆಯ ಡಿಮ್ಯಾಂಡ್​ ಕೇಳಿ ಟಾಲಿವುಡ್​ ಮಂದಿ ಶಾಕ್​ ಆಗಿದ್ದಾರಂತೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾ ಸಕ್ಸಸ್ ಅನ್ನು ಬಂಡವಾಳ ಮಾಡಿಕೊಂಡಿರುವ ಶ್ರೀನಿಧಿ ತಮ್ಮ ಮುಂದಿನ ಚಿತ್ರಗಳಿಗೆ ಭಾರೀ ಸಂಭಾವನೆ ಏರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಹಾಗಾದ್ರೆ, ಶ್ರೀನಿಧಿ ಡಿಮ್ಯಾಂಡ್​ ಮಾಡುತ್ತಿರುವ ಸಂಭಾವನೆ ಎಷ್ಟು ಅಂತಾ ನೋಡುವುದಾದರೆ, ಒಂದು ಸಿನಿಮಾಗೆ ಬರೋಬ್ಬರಿ 2 ಕೋಟಿ ರೂ. ಸಂಭಾವನೆಯನ್ನು ಶ್ರೀನಿಧಿ ಕೇಳುತ್ತಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಟಾಲಿವುಡ್​ ನಿರ್ಮಾಪಕರು ಶಾಕ್​ ಆಗಿದ್ದು, ಕೆಜಿಎಫ್​ನಲ್ಲೇ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ ಮತ್ತು ಪೂಜಾ ಹೆಗ್ಡೆ, ಸಮಂತಾ ಮತ್ತು ರಶ್ಮಿಕಾರಂತೆ ಹೆಸರು ಮಾಡಿಲ್ಲ ಎಂಬುದನ್ನು ಶ್ರೀನಿಧಿ ಅರಿತುಕೊಳ್ಳಬೇಕೆಂದು ಟಾಲಿವುಡ್​ ಗಲ್ಲಿಯಲ್ಲಿ ಚರ್ಚೆಯಾಗುತ್ತಿದೆ.

    ಸಮಂತಾ ಮತ್ತು ಪೂಜಾ ಹೆಗ್ಡೆ ಅಂಥವರೇ ತಮ್ಮ ಸಿನಿಮಾ ವೃತ್ತಿ ಜೀವನ ಆರಂಭಿಸುವಾಗ 2 ರಿಂದ 4 ಲಕ್ಷ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಸಾಕಷ್ಟು ಸಿನಿಮಾಗಳು ಹಿಟ್​ ಆದ ಬಳಿಕ ಮತ್ತು ತುಂಬಾ ಬೋಲ್ಡ್​ ಪಾತ್ರಗಳಿಗೂ ಸೈ ಅನ್ನುವ ಮೂಲಕ ಇದೀಗ ಪ್ರತಿ ಸಿನಿಮಾಗೆ 2 ರಿಂದ 4 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ, ಈ ಸ್ಥಾನಕ್ಕೆ ಬರಲು ಹಲವು ವರ್ಷಗಳ ಶ್ರಮ ಇದೆ. ಆದರೆ, ಶ್ರೀನಿಧಿ ಕೇವಲ ಎರಡೇ ಚಿತ್ರಕ್ಕೆ ಈ ಮಟ್ಟದ ಬೇಡಿಕೆ ಇಡುತ್ತಿರುವುದು ಅವರ ಸಿನಿಮಾ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಚರ್ಚೆಯಾಗುತ್ತಿದೆ.

    ಸಿನಿಮಾ ವಿಚಾರಕ್ಕೆ ಬಂದರೆ, ತಮಿಳು ನಿರ್ದೇಶಕ ಅಜಯ್​ ಜ್ಞಾನಮುತ್ತು ನಿರ್ದೇಶನದ ಹಾಗೂ ಎ.ಆರ್​​. ರೆಹಮಾನ್​ ಸಂಗೀತವಿರುವ ಕೋಬ್ರಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್​ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್​ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್​)

    ಸಾಮಾಜಿಕ ಜಾಲತಾಣದಲ್ಲಿ ದಿಢೀರ್​ ವೈರಲ್​ ಆಯ್ತು ಕೆಜಿಎಫ್​ ಬ್ಯೂಟಿ ಶ್ರೀನಿಧಿ ಶೆಟ್ಟಿಯ ಹಾಟ್​ ಅವತಾರಗಳು!

    ಸಲಿಂಗಕಾಮ ಅಪರಾಧವಲ್ಲ… ಪ್ರೇಯಸಿಗಾಗಿ ಕಣ್ಣೀರಿಡುತ್ತಿರುವ ಯುವತಿಯ ನೋವಿನ ಮಾತಿದು!

    ಕೆ.ಎಲ್​. ರಾಹುಲ್​ ಒಳಉಡುಪು ಜಾಹೀರಾತು ನೋಡಿ ನಟಿ ಕಸ್ತೂರಿ ಮಾಡಿದ ಹಾಟ್​ ಕಾಮೆಂಟ್​ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts