More

    ವೈಯಕ್ತಿಕ ದ್ವೇಷಕ್ಕಾಗಿ ಕೀಳುಮಟ್ಟಕ್ಕಿಳಿದ ಎಸ್​ಐ: ಅಪ್ರಾಪ್ತ ಮಗಳ ದುರ್ಬಳಕೆ, ತನಿಖೆಯಲ್ಲಿ ಕಟ್ಟುಕತೆ ಬಯಲು

    ತಿರುವನಂತಪುರಂ: ಕಾನೂನು ಕಾಪಾಡಬೇಕಾದವರೇ ಕಾನೂನನ್ನು ವೈಯಕ್ತಿಕ ದ್ವೇಷಕ್ಕೆ ದುರ್ಬಳಕ್ಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅದರಲ್ಲೂ ಪೊಲೀಸ್​ ಅಧಿಕಾರಿಯೊಬ್ಬ ಎಂತಹ ಕೀಳುಮಟ್ಟಕ್ಕೂ ಇಳಿಯುತ್ತಾರೆ ಎಂಬುದನ್ನು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ, ನಿಜ ಜೀವನದಲ್ಲೂ ಅಂಥದ್ದೊಂದು ಘಟನೆ ನಡೆದಿದೆ ಅಂದರೆ ನಾವೆಂತ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಿದೆ.

    ಹೌದು, ಕೇರಳದಲ್ಲಿ ನಡೆದಿರುವ ಈ ಘಟನೆ ನಿಜಕ್ಕೂ ಪೊಲೀಸ್​ ಇಲಾಖೆಯ ತಲೆ ತಗ್ಗಿಸುವಂತೆ ಮಾಡಿದೆ. ಸಬ್​ ಇನ್ಸ್​ಪೆಕ್ಟರ್​ ಒಬ್ಬರು ವೈಯಕ್ತಿಕ ದ್ವೇಷಕ್ಕಾಗಿ ಸ್ವಂತ ಅಪ್ರಾಪ್ತ ಮಗಳನ್ನೇ ಮುಂದಿಟ್ಟುಕೊಂಡು ವ್ಯಕ್ತಿಯೊಬ್ಬರ ಮೇಲೆ ಪೊಕ್ಸೊ ಪ್ರಕರಣವನ್ನು ದಾಖಲಿಸಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಪಯನ್ನೂರಿನ ಪೆರುಂಬಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಅಪರಾಧ ವಿಭಾಗದ ಡಿವೈಎಸ್ಪಿ ನಡೆಸಿದ ತನಿಖೆಯ ವೇಳೆ ಇಡೀ ಪ್ರಕರಣವು ಕಟ್ಟುಕಥೆ ಎಂಬುದು ತಿಳಿದುಬಂದಿದೆ.

    ಪೆರುಂಬ ಮೂಲದ ವ್ಯಾಪಾರಿ ಎಸ್​, ಶಮೀಮ್​ ಎಂಬುವರ ವಿರುದ್ಧ ಎಸ್​ಐ ಸೆಪ್ಟೆಂಬರ್​ 20ರಂದು ಪೊಕ್ಸೊ ಪ್ರಕರಣ ದಾಖಲಿಸಿದ್ದರು. ತನ್ನ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆಂದು ಆರೋಪಿಸಿ ಶಮೀಮ್​ ವಿರುದ್ಧ ಎಸ್​ಐ ಕೇಸು ದಾಖಲಿಸಿದ್ದ. ಬಳಿಕ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಪಯ್ಯನೂರ್​ ಛೇಂಬರ್​ ಆಫ್​ ಕಾಮರ್ಸ್​ ಮತ್ತು ಇತರೆ ವ್ಯಾಪಾರಿ ಸಂಘಟನೆಗಳು ಪೊಲೀಸ್​ ಠಾಣೆಯ ಎದುರು ಪ್ರತಿಭಟನೆ ನಡೆಸಿದ ಬಳಿಕ ಪ್ರಕರಣವನ್ನು ತನಿಖೆಗೆಂದು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

    ತನಿಖೆಯಲ್ಲಿ ತಿಳಿದುಬಂದ ಮಾಹಿತಿ ಪ್ರಕಾರ ವ್ಯಾಪಾರಿ ಶಮೀಮ್​, ತನ್ನ ಟೈಯರ್​ ಶಾಪ್​ ಮುಂದೆ ನಿಂತಿದ್ದ ಎಸ್​ಐ ಕಾರನ್ನು ಮುಂದಕ್ಕೆ ಪಾರ್ಕ್​ ಮಾಡುವಂತೆ ಹೇಳಿದ್ದಾರೆ. ಇದೇ ವಿಚಾರವಾಗಿ ಎಸ್​ಐ ಮತ್ತು ಶಮೀಮ್​ ನಡುವೆ ಮಾತಿನ ಚಕಮಕಿ ನಡೆದಿದೆ. ಮರುದಿನ ಪೊಲೀಸ್​ ಸಮವಸ್ತ್ರದಲ್ಲಿ ಶಮೀಮ್​ ಶಾಪ್​ಗೆ ಭೇಟಿ ನೀಡಿದ ಎಸ್​ಐ, ಕೋವಿಡ್​ 19 ಶಿಷ್ಟಾಚಾರ ಉಲ್ಲಂಘನೆ ಅಡಿಯಲ್ಲಿ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

    ಇದಾದ ಬಳಿಕ ಶಮೀಮ್​ ಎಸ್​ಐ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಎಸ್​ಐರನ್ನು ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಶಮೀಮ್​ ವಿರುದ್ಧ ತನ್ನ ಹಗೆ ಸಾಧಿಸಲು ತನ್ನ ಅಪ್ರಾಪ್ತ ಮಗಳನ್ನು ದುರ್ಬಳಕೆ ಮಾಡಿಕೊಂಡ ಎಸ್​ಐ, ಮಗಳ ಮೇಲೆ ಶಮೀಮ್​ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಆರೋಪಿಸಿ ಸುಳ್ಳು ಪ್ರಕರಣ ದಾಖಲಿಸಿದ್ದರು. ಇದೀಗ ತನಿಖೆಯಲ್ಲಿ ಈ ವಿಚಾರ ಬಯಲಾಗಿದ್ದು, ಎಸ್​ಐ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗಿದೆ. (ಏಜೆನ್ಸೀಸ್​)

    ಮಹಿಳಾ ಪೊಲೀಸ್​ ಬೆನ್ನಿಗೆ ನಿಂತ ಸರ್ಕಾರದ ವಿರುದ್ಧವೇ ಗೆದ್ದು ಬೀಗಿದ 8ರ ಬಾಲೆಯ ಈ ಕೆಲ್ಸ ನಿಜಕ್ಕೂ ಶ್ಲಾಘನೀಯ!

    ಭಾರತದಲ್ಲಿ ಬ್ಯಾನ್​ ಹೊರತಾಗಿಯೂ ವಿಶ್ವದ ಟೆಕ್​ ದೈತ್ಯ ಗೂಗಲ್​ ಹಿಂದಿಕ್ಕಿ ನಂ. 1 ಸ್ಥಾನಕ್ಕೇರಿದ ಟಿಕ್​ಟಾಕ್​!

    ಹೆತ್ತವರು ಆಸ್ಪತ್ರೆಯಲ್ಲಿ, 3 ಮಕ್ಕಳು ನೆರೆಹೊರೆಯವರ ಆಸರೆಯಲ್ಲಿ… ಮನಕಲಕುತ್ತೆ ಇವರ ಕಣ್ಣೀರ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts