More

    ಈ ಎರಡು ಪೀಸ್​ ಬಟ್ಟೆಗೆ ಇಷ್ಟೊಂದು ಹಣ ಕೊಡ್ಬೇಕಿತ್ತಾ? ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿರುವ ಕರೀನಾ!

    ಮುಂಬೈ: ವಿಭಿನ್ನ ಉಡುಗೆಗಳನ್ನು ತೊಟ್ಟು ಕ್ಯಾಮೆರಾಗೆ ಪೋಸ್​ ಕೊಡುವ ನಟಿಯರು ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುವುದು ಸಾಮಾನ್ಯ. ಅದೇ ರೀತಿಯಲ್ಲಿ ಬಾಲಿವುಡ್​ ಬೇಬೋ ಕರೀನಾ ಕಪೂರ್ ಇತ್ತೀಚೆಗೆ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ​

    ಹಳದಿ ಬಣ್ಣದ ಟೂ ಪೀಸ್​ ಕಲರ್ ಕೋ-ಆರ್ಡ್‌ (ಕಾಲರ್​ನಿಂದ ಕೆಳಗಿನವರೆಗೂ ಒಂದೇ ರೀತಿಯ ಬಟ್ಟೆಯೊಂದಿಗೆ ಸಮನ್ವಯಗೊಳಿಸಿದ ಫ್ಯಾಬ್ರಿಕ್​ ಉಡುಗೆ) ಬಟ್ಟೆಯ ಜತೆ ಮ್ಯಾಚಿಂಗ್​ ಸರವನ್ನು ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿರುವ ಕರೀನಾ ಕಪೂರ್ ಅವರ ಇತ್ತೀಚಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಉಡುಗೆಯ ವಿನ್ಯಾಸಗಾರ್ತಿ ಹೆಸರು ಲಕ್ಷ್ಮೀ ಲೆಹ್ರ್​. ಬಾಲಿವುಡ್​ನ ಎಲ್ಲ ನಟಿಯರು ಒಮ್ಮೆಯಾದರು ಲಕ್ಷ್ಮೀ ಲೆಹ್ರ್​ ಅವರು ವಿನ್ಯಾಸವನ್ನು ಆನಂದಿಸಿರುತ್ತಾರೆ. ಅಷ್ಟು ಖ್ಯಾತಿಯನ್ನು ಅವರು ಹೊಂದಿದ್ದಾರೆ. ಇದೀಗ ಕರೀನಾ ಕಪೂರ್​ ಅವರಿಗೆ ಅವರು ಮಾಡಿರುವ ವಿನ್ಯಾಸ ಕೆಲವರಿಗೆ ಇಷ್ಟವಾಗಿದ್ದರೂ ಇನ್ನು ಕೆಲವರ ಮನಸ್ಸಿಗೆ ಒಪ್ಪಿಗೆ ಆಗಿಲ್ಲ. ಹೀಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡುತ್ತಿದ್ದಾರೆ.

    ಇನ್ನು ಡ್ರೆಸ್​ ಬೆಲೆ ನೆಟ್ಟಿಗರ ಕೋಪಕ್ಕೂ ಕಾರಣವಾಗಿದೆ. ಅಂದಹಾಗೆ ಡ್ರೆಸ್​ನ ಬೆಲೆ ಬರೋಬ್ಬರಿ 70 ಸಾವಿರ. ಟಾಪ್​ಗೆ 30,599 ರೂ. ವೆಚ್ಚವಾದರೆ, ಶಾರ್ಟ್ಸ್​​ಗೆ ಬರೋಬ್ಬರಿ 39,599 ರೂಪಾಯಿ. ಕೇವಲ ಎರಡು ತುಣುಕು ಬಟ್ಟೆಗೆ ಇಷ್ಟೊಂದು ಮೊತ್ತವಾ? ಎಂದು ನೆಟ್ಟಿಗರು ಟೀಕಿಸಿದ್ದಾರೆ. ಈ ಬಟ್ಟೆಯಲ್ಲಿ ಅಂಥದ್ದೇನಿದೆ? ನೋಡೋಕೆ ಸಭ್ಯವಾಗಿಯೂ ಇಲ್ಲ ಅಥವಾ ಆಕರ್ಷಕವಾಗಿಯೂ ಎಲ್ಲ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ಕರೀನಾ ಅವರ ಫೋಟೋ ವೈರಲ್​ ಕೂಡ ಆಗುತ್ತಿದೆ. (ಏಜೆನ್ಸೀಸ್​)​

    ದುಬೈನಲ್ಲಿ ಕೇರಳದ ಸೋಶಿಯಲ್​ ಮೀಡಿಯಾ ಸ್ಟಾರ್​ ಸಾವು: ಗಂಡನ ಮೇಲಿನ ಸಂಶಯಕ್ಕೆ ಕಾರಣ ಹೀಗಿದೆ… ​

    ತನ್ನ ಕಾರು ಅಪಘಾತಕ್ಕೀಡಾದ ಬಗ್ಗೆಯೇ ಹೊಸ ಹಾಡು ರಚಿಸಿ ಧ್ವನಿ ನೀಡಿದ ಕಚ್ಚಾ ಬಾದಾಮ್​ ಗಾಯಕ!

    ರಾಷ್ಟ್ರೀಯ ಪಕ್ಷಗಳಿಂದ ಮೇಕೆದಾಟು ಮಕ್ಮಲ್‌ಟೋಪಿ: ವಿವಾದ ಎನ್ನುವ ಮೂಲಕ ಬಿಕ್ಕಟ್ಟು ಸೃಷ್ಟಿ ಎಂದ ಮಾಜಿ ಸಿಎಂ ಎಚ್​ಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts